ICC Ranking: ಐಸಿಸಿ ನೂತನ ರ‍್ಯಾಕಿಂಗ್ ಬಿಡುಗಡೆ, ಬಾಬರ್​ ಅಜಮ್ ಹಿಂದಿಕ್ಕಿದ ಟೀಂ ಇಂಡಿಯಾ ಯಂಗ್​ ಪ್ಲೇಯರ್​

ICC Ranking: T20 ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಪ್ರದರ್ಶನವು ಅತ್ಯುತ್ತಮವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಅವರು ಐಸಿಸಿ ಟಿ20 ರ‍್ಯಾಕಿಂಗ್ ನಲ್ಲಿ ಏರಿಕೆ ಕಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೂರ್ಯಕುಮಾರ್ ಯಾದವ್ (Suryakumar Yadav) ಪ್ರಸ್ತುತ ಟಿ20ಯ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಯಲ್ಲಿ 46 ರನ್‌ಗಳ ಭರ್ಜರಿ ಬ್ಯಾಟಿಂಗ್​ ಮಾಡಿದರು. ಅವರ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಅವರು ICC T20i ಶ್ರೇಯಾಂಕದಲ್ಲಿ ಅಗ್ರ-3 ತಲುಪಿದ್ದಾರೆ. ಅವರು ಪಾಕ್ ನಾಯಕ ಬಾಬರ್ ಅಜಮ್ (Babar Azam) ಅವರನ್ನು ಹಿಂದಿಕ್ಕಿದ್ದಾರೆ. ಬಾಬರ್​ ಅಜಮ್​ ಇದೀಗ 4ನೇ ಸ್ಥಾನಕ್ಕೆ ಕುಸಿದಿದ್ದು, ಸೂರ್ಯಕುಮಾರ್ ಯಾದವ್​ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.  ಮೊಹಮ್ಮದ್ ರಿಜ್ವಾನ್ (Mohammad Rizwan) ಮೊದಲಿನಂತೆ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ ಮತ್ತು ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಎರಡನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ನಲ್ಲಿ ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಒಂದು ಸ್ಥಾನ್ ಜಂಪ್​ ಆಗಿದ್ದಾರೆ.

ಐಸಿಸಿ ನೂತನ ಟಿ20 ಬ್ಯಾಟಿಂಗ್​ ರ‍್ಯಾಕಿಂಗ್ ಪ್ರಕಟ:

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 46 ರನ್ ಗಳಿಸಿದ್ದರು. 2 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದರು. ಅವರು 780 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಅದೇ ಸಮಯದಲ್ಲಿ, ನಂಬರ್-1 ರಲ್ಲಿರುವ ಮೊಹಮ್ಮದ್ ರಿಜ್ವಾನ್ 825 ಅಂಕಗಳನ್ನು ಹೊಂದಿದ್ದಾರೆ. ಮತ್ತೊಂದೆಡೆ ಬಾಬರ್ ಅಜಮ್ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾದರು. ಬಾಬರ್ 771 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಎರಡನೇ ಶ್ರೇಯಾಂಕದ ಮಾರ್ಕ್ರಾಮ್ 792 ಅಂಕಗಳನ್ನು ಹೊಂದಿದ್ದಾರೆ.

ಟಾಪ್-10 ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡುತ್ತಾ, ಬೇರೆ ಯಾವುದೇ ಭಾರತೀಯ, ಯಾವುದೇ ಭಾರತೀಯನಿಗೆ ಈ ಸ್ಥಾನವನ್ನು ತಲುಪಲು ಸಾಧ್ಯವಾಗಲಿಲ್ಲ ಇಂಗ್ಲೆಂಡ್‌ನ ಡೇವಿಡ್ ಮಲಾನ್ 5ನೇ, ಆಸ್ಟ್ರೇಲಿಯಾದ ಆರೋನ್ ಫಿಂಚ್ 6ನೇ, ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ 7ನೇ, ಶ್ರೀಲಂಕಾದ ಪಾತುಮ್ ನಿಸಂಕಾ 8ನೇ, ಯುಎಇಯ ಮೊಹಮ್ಮದ್ ವಾಸಿಂ 9ನೇ ಹಾಗೂ ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಗ್ಸ್ 10ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IND vs AUS: ಆಸೀಸ್​ ವಿರುದ್ಧ ಸೋಲಿಗೆ ಕಾರಣಗಳೇನು? ನಾಯಕ ರೋಹಿತ್​​ ಶರ್ಮಾ ಹೇಳಿದ್ದೇನು?

ಮತ್ತೆ ಕುಸಿತಕಂಡ ವಿರಾಟ್​:

ರೋಹಿತ್ ಶರ್ಮಾ 14ನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 16ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ  ಮತ್ತೊಮ್ಮೆ ಒಂದು ಸ್ಥಾನದಿಂದ ಕುಸಿತಕಂಡಿದ್ದಾರೆ.  ಕೆಎಲ್ ರಾಹುಲ್ 5 ಸ್ಥಾನ ಮೇಲೇರಿ 18ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಐಸಿಸಿ ಟಿ20 ರ‍್ಯಾಕಿಂಗ್ ನಲ್ಲಿ ಸೂರ್ಯಕುಮಾರ್ ಯಾದವ್​ ಹೊರತುಪಡಿಸಿ ಬೇರೆ ಯಾವೊಬ್ಬ  ಭಾರತೀಯ ಆಟಗಾರ ಸಹ ಟಾಪ್​ 10 ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ.

ಐಸಿಸಿ ನೂತನ ರ‍್ಯಾಕಿಂಗ್ ಬಿಡುಗಡೆ


ಬೌಲಿಂಗ್ ಶ್ರೇಯಾಂಕದಲ್ಲಿ ಕುಸಿತಕಂಡ ಭುವಿ:

ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ 2 ಸ್ಥಾನಗಳ ಹಿನ್ನಡೆ ಅನುಭವಿಸಿದ್ದಾರೆ. ಅವರು 7 ರಿಂದ 9ನೇ ಸ್ಥಾನಕ್ಕೆ ಕುಸಿತಕಂಡಿದ್ದಾರೆ. ಆಸೀಸ್​ ವಿರುದ್ಧದ ಮೊದಲ ಟಿ20ಯಲ್ಲಿ 4 ಓವರ್‌ಗಳಲ್ಲಿ 52 ರನ್ ನೀಡಿ ಒಂದೇ ಒಂದು ವಿಕೆಟ್​ ಸಹ ಪಡೆಯಲಿಲ್ಲ. ಜೋಸ್ ಹ್ಯಾಜಲ್‌ವುಡ್ ಪ್ರಥಮ, ತಬ್ರೇಜ್ ಶಮ್ಸಿ ದ್ವಿತೀಯ ಹಾಗೂ ಆದಿಲ್ ರಶೀದ್ ಮೂರನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಝಂಪಾ ನಾಲ್ಕನೇ ಕ್ರಮಾಂಕದಿಂದ ಐದನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ಯಾವುದೇ ಬೌಲರ್ ಟಾಪ್ ಸ್ಥಾನದಲ್ಲಿಲ್ಲ.
Published by:shrikrishna bhat
First published: