ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಇನ್ನಿಲ್ಲ? ಕೊನೆಗೂ ಮೌನ ಮುರಿದ ಎಡಗೈ ದಾಂಡಿಗ

ಕಳೆದ ಕೆಲ ದಿಗಳಿಂದ ಕಾರು ಅಪಘಾತದಲ್ಲಿ ನಾನು ಸಾವನ್ನಪ್ಪಿರುವೆ ಎಂಬ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಿಂದ ನನ್ನ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ನೋವುಂಟಾಗಿದೆ.

zahir | news18
Updated:February 13, 2019, 3:13 PM IST
ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಇನ್ನಿಲ್ಲ? ಕೊನೆಗೂ ಮೌನ ಮುರಿದ ಎಡಗೈ ದಾಂಡಿಗ
@Chennai Memes
zahir | news18
Updated: February 13, 2019, 3:13 PM IST
ಟೀಂ ಇಂಡಿಯಾ ಆಟಗಾರ ಸುರೇಶ್​ ರೈನಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಇಡೀ ಕ್ರಿಕೆಟ್​ ಜಗತ್ತು ಕಂಬನಿ ಮಿಡಿದಿದೆ. ಭೀಕರ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ. ಕ್ರಿಕೆಟ್​ ಜಗತ್ತಿಗೆ ರಕ್ತದ ಮೂಲಕ ಗುಡ್​ಬೈ ಹೇಳಿದ ಎಡಗೈ ದಾಂಡಿಗ. ಭಾರತದ ದೊಡ್ಡ ಕ್ರಿಕೆಟಿಗನಿಗೆ ಕಾರು ಅಪಘಾತ, ಸಾವು ಬದುಕಿನ ಮದ್ಯೆ ಹೋರಾಟ. ಇಂತಹ ಬೆಚ್ಚಿ ಬೀಳಿಸುವ ಹೆಡ್​ಲೈನ್​ಗಳ ಮೂಲಕ ನಾಲ್ಕೈದು ದಿನಗಳಿಂದ ಸುರೇಶ್​ ರೈನಾ ಸಾವನ್ನಪ್ಪಿರುವ ಸುದ್ದಿಗಳು ಹರಿಬಿಡಲಾಗಿದೆ. ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷಾ ಯೂಟ್ಯೂಬ್​ ಚಾನೆಲ್​ನಿಂದ ಆರಂಭವಾದ ಈ ಸುದ್ದಿಗಳೀಗ ಸಾಮಾಜಿಕ ಜಾಲತಾಣದಲ್ಲಿ ರೈನಾಗೆ ಶ್ರದ್ಧಾಂಜಲಿ ಅರ್ಪಿಸುವಲ್ಲಿ ಬಂದು ತಲುಪಿದೆ. ಈ ಸುಳ್ಳು ಸುದ್ದಿ ವೈರಲ್ ಆಗುತ್ತಿದ್ದಂತೆ ಖುದ್ದು ಸುರೇಶ್ ರೈನಾ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

ಕನ್ನಡದಲ್ಲಿ ಹರಿದಾಡಿದ ಸುಳ್ಳು ಸುದ್ದಿ


'ಕಳೆದ ಕೆಲ ದಿನಗಳಿಂದ ಕಾರು ಅಪಘಾತದಲ್ಲಿ ನಾನು ಸಾವನ್ನಪ್ಪಿರುವೆ ಎಂಬ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಿಂದ ನನ್ನ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ನೋವುಂಟಾಗಿದೆ. ಇಂತಹ ಸುಳ್ಳು ಸುದ್ದಿಯನ್ನು ಯಾರು ನಂಬಬೇಡಿ, ಇವುಗಳಿಂದ ದೂರವಿರಿ. ದೇವರ ದಯೆಯಿಂದ ನಾನು ಆರೋಗ್ಯವಾಗಿರುವೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿರುವ ಯೂಟ್ಯೂಬ್​ ಚಾನೆಲ್​ಗಳ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುವುದಾಗಿ' ರೈನಾ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಕಳೆದ ಎಂಟು ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ರೈನಾ ಸದ್ಯ ವಿಶ್ವಕಪ್​ಗೂ ಮುನ್ನ ಭಾರತ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಐಪಿಎಲ್​ಗಾಗಿ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ವೇಳೆ  ತಾಲೀಮು ನಡೆಸಿ ಮರಳುತ್ತಿದ್ದ ರೈನಾ ಕಾರು ಟ್ರಕ್​ವೊಂದಕ್ಕೆ ಗುದ್ದಿದೆ...ಎಂಬಿತ್ಯಾದಿ ಸುಳ್ಳು ಸುದ್ದಿಗಳನ್ನು ಸೃಷ್ಟಿಸಲಾಗಿತ್ತು. ಈ ಸುದ್ದಿಗಳು ರೈನಾ ಕಿವಿಗೆ ಬೀಳುತ್ತಿದ್ದಂತೆ ಉತ್ತರಿಸುವ ಮೂಲಕ ಎಲ್ಲಾ ಗೊಂದಲಗಳಿಗೆ ಅಂತಿಮ ಹಾಡಿದ್ದಾರೆ.
Loading...

ಇದನ್ನೂ ಓದಿ: ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಮತ್ತೊಮ್ಮೆ ಗ್ರಾಹಕರಿಗೆ ಗಡುವು ನೀಡಿದ ಟ್ರಾಯ್​..!

First published:February 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ