ಒಂದು ರಾಜ್ಯ ಒಂದು ಮತ ನೀತಿ ಕೈಬಿಟ್ಟ ಕೋರ್ಟ್​; ಬಿಸಿಸಿಐ ಕರಡು ಸಂವಿಧಾನಕ್ಕೆ ಸುಪ್ರೀಂ ಅಸ್ತು

news18
Updated:August 9, 2018, 3:42 PM IST
ಒಂದು ರಾಜ್ಯ ಒಂದು ಮತ ನೀತಿ ಕೈಬಿಟ್ಟ ಕೋರ್ಟ್​; ಬಿಸಿಸಿಐ ಕರಡು ಸಂವಿಧಾನಕ್ಕೆ ಸುಪ್ರೀಂ ಅಸ್ತು
news18
Updated: August 9, 2018, 3:42 PM IST
ನ್ಯೂಸ್ 18 ಕನ್ನಡ

ಲೋಧಾ ಸಮಿತಿಯು ಸಿದ್ದಪಡಿಸಿರುವ ಬಿಸಿಸಿಐ ಹೊಸ ಸಂವಿಧಾನದ ಕರಡು ಪ್ರತಿಗೆ ಸುಪ್ರೀಂ ಕೋರ್ಟ್​​ ಅಸ್ತು ಎಂದಿದೆ. ಜೊತೆಗೆ ಮಹಾರಷ್ಟ್ರ, ಗುಜರಾತ್ ಎಲ್ಲ ಮೂರು ಕ್ರಿಕೆಟ್ ಸಮಿತಿಗಳಿಗೆ ಸರ್ವೋಚ್ಚ ನ್ಯಾಯಾಲಯ ಪೂರ್ಣ ಸದಸ್ಯತ್ವ ನೀಡಿದ್ದು, ಒಂದು ರಾಜ್ಯ ಒಂದು ಮತ ನೀತಿಯನ್ನು ಸಪ್ರೀಂ ಕೋರ್ಟ್​ ತಿರಸ್ಕರಿಸಿದೆ. ಅಲ್ಲದೆ ರೈಲ್ವೇಸ್, ಸರ್ವೀಸ್ ಹಾಗೂ ವಿಶ್ವವಿದ್ಯಾನಿಲಯಗಳ ಕ್ರಿಕೆಟ್ ಸಂಸ್ಥೆಗೂ ಬಿಸಿಸಿಐನಲ್ಲಿ ಕೋರ್ಟ್​​ ಸದಸ್ಯತ್ವ ನೀಡಿದೆ.

ಬಿಸಿಸಿಐನ ಈ ನೂತನ ತಿದ್ದುಪಡಿಯನ್ನು ನೋಂದಾಯಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಆದೇಶದ 30 ದಿನದೊಳಗೆ ಬಿಸಿಸಿಐ ಸಂವಿದಾನವನ್ನು ಅಳವಡಿಸಿಕೊಳ್ಳಿ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ನ್ಯಾಯಾಲಯ ಆದೇಶಿಸಿದೆ. ಇದರ ಜೊತೆಗೆ ಬಿಸಿಸಿಐ ಅಧಿಕಾರಿಗಳ ಅಧಿಕಾರ ಅವಧಿಯಲ್ಲಿ ಸುಪ್ರೀಂ ಬದಲಾವಣೆ ಮಾಡಿದ್ದು, ಓರ್ವ ಸದಸ್ಯ ಒಂದೇ ಹುದ್ದೆಯನ್ನು ಸತತ ಎರಡು ಬಾರಿ ಹೊಂದಿದ ಬಳಿಕ ಆ ಸದಸ್ಯನನ್ನು ಉಚ್ಚಾಟಿಸಲಾಗುವುದು ಎಂದು ಹೇಳಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ