ಕೊಹ್ಲಿ ನಾಯಕತ್ವಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ: ಸುನೀಲ್ ಗವಾಸ್ಕರ್

news18
Updated:September 4, 2018, 5:02 PM IST
ಕೊಹ್ಲಿ ನಾಯಕತ್ವಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ: ಸುನೀಲ್ ಗವಾಸ್ಕರ್
news18
Updated: September 4, 2018, 5:02 PM IST
ನ್ಯೂಸ್ 18 ಕನ್ನಡ

ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮೌನ ಮುರಿದಿದ್ದಾರೆ. 'ಕೊಹ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ ವೇಳೆ ತಂಡ ವಿಭಿನ್ನ ರೀತಿಯಲ್ಲಿ ಇರಲಿದೆ ಎಂದು ಎಲ್ಲರು ಅಂದುಕೊಂಡಿದ್ದರು. ಯಾಕೆಂದರೆ, ಇದಕ್ಕೂ ಮುನ್ನ ನಾಯಕನಾಗಿದ್ದ ಎಂಎಸ್ ಧೋನಿ ಅವರನ್ನು ಕೂಲ್ ಕ್ಯಾಪ್ಟನ್ ಎಂದೇ ಕರೆಯಲಾಗಿತ್ತು. ಆದರೆ ಕೊಹ್ಲಿ ಚೂರು ಮುಂಗೋಪಿಯಾಗಿದ್ದು, ಅವರ ನಾಯಕತ್ವ ಸಂಪೂರ್ಣ ಭಿನ್ನ' ಎಂದಿದ್ದಾರೆ.

ಕೊಹ್ಲಿ ನಾಯಕತ್ವದ ಬಗ್ಗೆ ಎಲ್ಲರೂ ತೃಪ್ತಿದಾಯಕವಾಗಿದ್ದರೂ, ಅವರ ನಾಯಕತ್ವಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ ಶುರುವಾಗಿದೆ. ದಕ್ಷಿಣಾ ಆಫ್ರಿಕಾದಲ್ಲಿ ದ. ಆಫ್ರಿಕಾ ವಿರುದ್ಧ, ಇಂಗ್ಲೆಂಡ್​ನಲ್ಲಿ ಇಂಗ್ಲೆಂಡ್ ವಿರುದ್ಧ, ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ದದ ಫಲಿತಾಂಶವು ಕೊಹ್ಲಿಯ ನೈಜ್ಯ ನಾಯಕತ್ವವನ್ನು ತಿಳಿಸಲಿದೆ ಎಂದಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್​ ಬಗ್ಗೆ ನೋಡುವುದಾದರೆ ಎರಡು ಮಾತಿಲ್ಲ. ಒಂದು ಟೆಸ್ಟ್​ ಸರಣಿಯಲ್ಲಿ 500 ರನ್ ಕಲೆಹಾಕಿದ ಕೆಲವರಲ್ಲಿ ಈಗ ಕೊಹ್ಲಿ ಕೂಡ ಇದ್ದಾರೆ, ಅದು ಕೂಡ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ. ಆದರೆ ಟೆಸ್ಟ್​ ಸರಣಿ ಗೆಲ್ಲುವಲ್ಲಿ ವಿಫಲವಾಗಿದ್ದು ಬೇಸರ ತಂದಿದೆ ಎಂದಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...