ರೋಹಿತ್-ಧವನ್ ಅಲ್ಲ: ಗವಾಸ್ಕರ್ ಪ್ರಕಾರ ವಿಶ್ವಕಪ್​​ನಲ್ಲಿ ಈ ಜೋಡಿ ಆರಂಭಿಕರಾಗಿ ಆಡಬೇಕಂತೆ

ಕೆ ಎಲ್ ರಾಹುಲ್​​​ ಆಯ್ಕೆ ತಂಡದಲ್ಲಿ ಇನ್ನೂ ಅಂತಿಮವಾಗಿಲ್ಲ. ವಿಶ್ವಕಪ್​​ನಲ್ಲಿ ತಂಡಕ್ಕೆ ಬ್ಯಾಕ್​​​ಅಪ್​​ ಓಪನರ್ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

Vinay Bhat | news18
Updated:February 4, 2019, 10:27 PM IST
ರೋಹಿತ್-ಧವನ್ ಅಲ್ಲ: ಗವಾಸ್ಕರ್ ಪ್ರಕಾರ ವಿಶ್ವಕಪ್​​ನಲ್ಲಿ ಈ ಜೋಡಿ ಆರಂಭಿಕರಾಗಿ ಆಡಬೇಕಂತೆ
ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ವಿಶ್ವಕಪ್‌ ತಂಡದಲ್ಲಿ ಧೋನಿ ಇರುವುದನ್ನು ನಾನೂ ನೋಡಲು ಬಯಸುತ್ತೇನೆ. ನನಗೂ ಆತ ತಂಡದಲ್ಲಿರುವುದು ಇಷ್ಟ ಆದರೆ ಅದು ಸಾಧ್ಯವಿಲ್ಲವೆಂದೆನಿಸುತ್ತದೆ ಎಂದು ಹೇಳಿಕೆಯನ್ನು ಸುನಿಲ್ ಗವಾಸ್ಕರ್ ಹೇಳಿ ಅಚ್ಚರಿ ಮೂಡಿಸಿದ್ದಾರೆ.
  • News18
  • Last Updated: February 4, 2019, 10:27 PM IST
  • Share this:
ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-1 ರಿಂದ ಗೆದ್ದ ಸಾಧನೆ ಮಾಡಿದೆ. ಈ ಮೂಲಕ ವಿಶ್ವಕಪ್​​ಗೆ ನಾವು ಸಿದ್ದರಿದ್ದೇವೆ ಎಂಬ ಸಂದೇಶ ಸಾರಿದೆ.

ಆದರೆ, ಕೆ ಎಲ್ ರಾಹುಲ್​​​ ಆಯ್ಕೆ ತಂಡದಲ್ಲಿ ಇನ್ನೂ ಅಂತಿಮವಾಗಿಲ್ಲ. ವಿಶ್ವಕಪ್​​ನಲ್ಲಿ ತಂಡಕ್ಕೆ ಬ್ಯಾಕ್​​​ಅಪ್​​ ಓಪನರ್ ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಶುಭ್ಮನ್ ಗಿಲ್ ಕೂಡ ಆಡಿದ ಎರಡು ಪಂದ್ಯಗಳಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿಲ್ಲ. ಹೀಗಿರುವಾಗ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ವಿಶ್ವಕಪ್​​ನಲ್ಲಿ ಭಾರತದ ಆರಂಭಕ ಜೋಡಿ ಸ್ಥಾನವನ್ನು ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್​ ಅವರಿಗೆ ಮೀಸಲಿಡಬೇಕು ಎಂದಿದ್ದಾರೆ.

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ಬಾರಿಸಿದ ಬರೋಬ್ಬರಿ 434 ರನ್​​: ಕ್ರಿಕೆಟ್​​ನಲ್ಲಿ ದಾಖಲಾಯಿತು ಮತ್ತೊಂದು ದಾಖಲೆ

ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಾಗ ದಿನೇಶ್ ಕಾರ್ತಿಕ್ ಏಕಾಂಗಿಯಾಗಿ ನಿಂತು ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಆಸರೆಯಾಗಿದ್ದಾರೆ. ಅವರಲ್ಲಿ ಇನ್ನಿಂಗ್ಸ್​ ಕಟ್ಟುವಂತಹ ಚಾತುರ್ಯವಿದೆ.

ಇದನ್ನೂ ಓದಿ: ವಿಡಿಯೋ ವೈರಲ್: ಚಹಾಲ್​​ಗೆ ಕೈ ಮುಗಿಯುತ್ತ ಧೋನಿ ಪೆವಿಲಿಯನ್​ನತ್ತ ಓಡಿದ್ದೇಕೆ?

ಪಂತ್ ಕೂಡ ಆಕ್ರಮಣಕಾರಿ ಆಟಕ್ಕೆ ಹೇಳಿಮಾಡಿಸಿದ ಆಟಗಾರ. ಇವರಿಬ್ಬರು ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಓಪನಿಂಗ್ ಸ್ಥಾನಕ್ಕೆ ಮೀಸಲಿಡುವಂತೆ ಗವಾಸ್ಕರ್ ತಿಳಿಸಿದ್ದಾರೆ.
First published:February 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading