ಫುಟ್​ಬಾಲ್​ ದಂತಕಥೆ ಮೆಸ್ಸಿಯ ದಾಖಲೆ ಉಡೀಸ್: ಈಗ ಸುನೀಲ್ ಚೆಟ್ರಿ ವಿಶ್ವದ ಸ್ಟಾರ್ ಆಟಗಾರ

ಫುಟ್​ಬಾಲ್​ ದಂತಕಥೆ ಮೆಸ್ಸಿಯ ದಾಖಲೆಯನ್ನು ಮುರಿದು ವಿಶ್ವವೇ ತನ್ನತ್ತ ನೋಡುವಂತೆ ಮಾಡಿದ ಸುನೀಲ್ ಚೆಟ್ರಿ

zahir | news18
Updated:January 7, 2019, 9:01 PM IST
ಫುಟ್​ಬಾಲ್​ ದಂತಕಥೆ ಮೆಸ್ಸಿಯ ದಾಖಲೆ ಉಡೀಸ್: ಈಗ ಸುನೀಲ್ ಚೆಟ್ರಿ ವಿಶ್ವದ ಸ್ಟಾರ್ ಆಟಗಾರ
ಸುನೀಲ್ ಚೆಟ್ರಿ
zahir | news18
Updated: January 7, 2019, 9:01 PM IST
ಫುಟ್​ಬಾಲ್ ಲೋಕದ ದಂತಕತೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್​ ಮೆಸ್ಸಿ ಅವರ ದಾಖಲೆಯನ್ನು ಯಾರು ಮುರಿಯಲಿದ್ದಾರೆ? ಈ ಪ್ರಶ್ನೆಗೆ ಹೊಸ ಉತ್ತರ ಭಾರತದ ಸುನೀಲ್ ಚೆಟ್ರಿ. ಅಂತರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಸಕ್ರಿಯ ಆಟಗಾರರ ಪಟ್ಟಿಯಲ್ಲಿ ಮೆಸ್ಸಿ ದಾಖಲೆಯನ್ನು ಹಿಂದಿಕ್ಕಿ ಚೆಟ್ರಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಭಾನುವಾರ ಅಬುಧಾಬಿಯಲ್ಲಿ ನಡೆದ ಥಾಯ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಚೆಟ್ರಿ ಎರಡು ಗೋಲುಗಳನ್ನು ಬಾರಿಸಿದ್ದರು. ಇದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ 65 ಗೋಲು ದಾಖಲಿಸಿದ್ದ ಮೆಸ್ಸಿಯ ದಾಖಲೆಯನ್ನು ಹಿಂದಿಕ್ಕಿ ವಿಶ್ವದ ಗೋಲಿನ ಸರದಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.ಭಾರತ ತಂಡದ ಆಟಗಾರನೊಬ್ಬ ಫುಟ್​ಬಾಲ್​ ಇತಿಹಾಸದಲ್ಲೇ ಇಂತಹದೊಂದು ಸಾಧನೆ ಮೆರೆದಿದ್ದನ್ನು ಇಡೀ ವಿಶ್ವವೇ ಬರಿಗಣ್ಣಿನಿಂದ ನೋಡುವಂತಾಗಿದೆ. 67 ಗೋಲುಗಳನ್ನು ದಾಖಲಿಸಿರುವ ಚೆಟ್ರಿಯ ಮುಂದಿರುವುದು ಇನ್ನು 85 ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಮಾತ್ರ.
Loading...

ಏಷ್ಯನ್ ಕಪ್​ ಮೊದಲ ಪಂದ್ಯದಲ್ಲೇ  ಭಾರತ ತಂಡ ನಾಯಕ ಸುನಿಲ್ ಚೆಟ್ರಿ ಮಿಂಚಿನ ಸಂಚಲನ ಮೂಡಿಸಿದ್ದರು. ಇದರಿಂದ ಥಾಯ್ಲೆಂಡ್​ ವಿರುದ್ದದ ಈ ಪಂದ್ಯದಲ್ಲಿ ಭಾರತವು 4-1 ಗೋಲುಗಳಿಂದ ಭರ್ಜರಿ ಶುಭಾರಂಭ ಮಾಡುವಂತಾಯಿತು.ಈ ಹಿಂದೆ ಅರ್ಜೆಂಟೀನಾದ ಸ್ಟಾರ್ ಆಟಗಾರ ಮೆಸ್ಸಿಯೊಂದಿಗೆ 65 ಗೋಲುಗಳಿಂದ ಸಮಬಲ ಹೊಂದಿದ್ದ ಚೆಟ್ರಿ, ಥಾಯ್ಲೆಂಡ್ ವಿರುದ್ಧ ಸಿಕ್ಕಿದ ಅವಕಾಶವನ್ನು ಬಳಸಿ ತಾನು ಕೂಡ ವಿಶ್ವದ ಅತ್ಯುತ್ತಮ ಆಟಗಾರನೆಂದು ನಿರೂಪಿಸಿದ್ದಾರೆ. ಅಲ್ಲದೆ 1967ರ ಬಳಿಕ ಬಾರಿ ಭಾರತ ತಂಡ ಏಷ್ಯನ್ ಕಪ್​ ಫುಟ್​ಬಾಲ್​ನಲ್ಲಿ ಜಯಗಳಿಸಲು ಚೆಟ್ರಿಯ ಆ ಎರಡು ಗೋಲುಗಳು ಪ್ರಮುಖ ಪಾತ್ರವಹಿಸಿತು. 
ದಾಖಲೆಗಳು ಮತ್ತು ಗೋಲುಗಳನ್ನು ಯಾರು ಬಾರಿಸಿದ್ದಾರೆ ಎಂಬುದು ವಿಷಯವಲ್ಲ. ಯಾರೇ ಗೋಲುಗಳಿಸಿದರೂ ಸಂಭ್ರಮ ಎನ್ನುವುದು ಒಂದೇ ಆಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಎಫ್​ಸಿ ಏಷ್ಯನ್ ಕಪ್​ನಲ್ಲಿ ನನ್ನ ತಂಡಕ್ಕೆ ಮೂರು ಅಂಕಗಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕಿಂತ ಸಂತೋಷದ ವಿಷಯ ಬೇರೇನಿದೆ ಎಂದು ಹೊಸ ದಾಖಲೆಯ ಕುರಿತು ಬೆಂಗಳೂರು ಎಫ್​ಸಿಯನ್ನು ಪ್ರತಿನಿಧಿಸುವ ಸುನೀಲ್ ಚೆಟ್ರಿ ಪ್ರತಿಕ್ರಿಯಿಸಿದ್ದಾರೆ.

 


First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ