ನಾವು ಈಗ 21ನೇ ಶತಮಾನದಲ್ಲಿ ಬದುಕುತ್ತಿದ್ದರೂ ಸಹ, ಇನ್ನೂ ನಮ್ಮ ಸಮಾಜದಲ್ಲಿ ಕೆಲ ಪುರುಷರು (Men) ಮನೆಯಲ್ಲಿಯೇ ಕೂತು ತಮ್ಮ ಹೆಂಡತಿಯ (Woman) ಸಂಬಳದ ಮೇಲೆ ಬದುಕು ಸಾಗಿಸುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಪುರುಷರು ಕೆಲಸ (Job) ಮಾಡಿ ದುಡಿದು ಹಣವನ್ನು ತಂದು ಮನೆಯನ್ನು ನಡೆಸಬೇಕು ಅಂತ ಹೇಳಲಾಗುತ್ತದೆ ಮತ್ತು ಬಹುತೇಕವಾಗಿ ಅದೇ ನಡೆದಿದೆ ಕೂಡ. ಬಹುಶಃ ಇದೇ ಕಾರಣಕ್ಕಾಗಿಯೇ ಇರಬೇಕು ಭಾರತೀಯ ಸಮಾಜಗಳು (Community) ಹೆಚ್ಚು ಸಂಪಾದಿಸುವ ಅಥವಾ ಕೇವಲ ಏಕೈಕ-ಸಂಪಾದನೆ ಮಾಡುವ ಮಹಿಳೆಯು ಪುರುಷನ ಅಹಂ ಮತ್ತು ಆತ್ಮಗೌರವಕ್ಕೆ ಸಂಭಾವ್ಯ ಹಾನಿಯನ್ನುಂಟು ಮಾಡುತ್ತದೆ ಎಂದು ಭಾವಿಸುತ್ತವೆ.
ಇದೇ ವಿಷಯವಾಗಿ ಟ್ವಿಟ್ಟರ್ ನಲ್ಲಿ ಬಳಕೆದಾರರೊಬ್ಬರು ಯಶಸ್ವಿ ಉದ್ಯಮಿಗಳನ್ನು ಅವರ ಹೆಂಡತಿಯರು ಆರ್ಥಿಕವಾಗಿ ಹೇಗೆ ಬೆಂಬಲಿಸಿದರು ಎಂಬುದರ ಬಗ್ಗೆ ಎಳೆಯನ್ನು ಹಂಚಿಕೊಂಡಿದ್ದಾರೆ.
ಟ್ವಿಟ್ಟರ್ ಬಳಕೆದಾರರಾದ ರಿಚಾ ಸಿಂಗ್ ಹೇಳಿದ್ದೇನು?
ಶಾರ್ಕ್ ಟ್ಯಾಂಕ್ ನ ಸ್ಪರ್ಧಿಯೊಬ್ಬರ ಇತ್ತೀಚಿನ ಉದಾಹರಣೆಯನ್ನು ರಿಚಾ ಸಿಂಗ್ ಅವರು ಹಂಚಿಕೊಂಡಿದ್ದಾರೆ. ಫ್ಲಾಟ್ ಹೆಡ್ ಶೂಸ್ ನ ಸಹ-ಸಂಸ್ಥಾಪಕ ಗಣೇಶ್ ಬಾಲಕೃಷ್ಣನ್ ಅವರು ಮಾತನಾಡುತ್ತಾ ತಮ್ಮ ಮನೆಯ ಆದಾಯವನ್ನು ಅವರ ಪತ್ನಿ ನಿರ್ವಹಿಸುತ್ತಾರೆ ಎಂದು ಹೇಳಿದರು. "ನನ್ನ ಹೆಂಡತಿ ಸಂಪಾದಿಸುತ್ತಾಳೆ ಮತ್ತು ನಾನು ಅದನ್ನು ಖರ್ಚು ಮಾಡುತ್ತೇನೆ" ಎಂದು ಅವರು ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ರಿಚಾ ಸಿಂಗ್ "ಗಣೇಶ್ ಬಾಲಕೃಷ್ಣನ್ ನಾಚುತ್ತ ಇದನ್ನು ಹೇಳಿದರು. ನಮ್ಮ ಭಾರತೀಯ ಸಮಾಜದಲ್ಲಿ ನಿಮ್ಮ ಹೆಂಡತಿಯ ಸಂಬಳದಿಂದ ಜೀವನ ನಡೆಯುತ್ತಿದೆ ಅನ್ನೋ ವಿಚಾರವನ್ನ ಹೇಗೆ ಕೀಳಾಗಿ ನೋಡಲಾಗುತ್ತದೆ ಎಂಬುದನ್ನು ನಾನು ಅರಿತುಕೊಂಡೆ" ಎಂದು ಬರೆದಿದ್ದಾರೆ.
ಈ ಇಬ್ಬರು ಯಶಸ್ವಿ ಉದ್ಯಮಿಗಳಿಗೂ ಸಹ ಹೆಂಡತಿಯರೆ ಆರ್ಥಿಕವಾಗಿ ಬೆಂಬಲಿಸಿದ್ದರು
ಬಾಲಕೃಷ್ಣನ್ ಮಾತ್ರವಲ್ಲದೇ ಇನ್ನಿಬ್ಬರು ಯಶಸ್ವಿ ಉದ್ಯಮಿಗಳು ಸಹ ತಮ್ಮ ಪತ್ನಿಯರಿಂದ ಆರ್ಥಿಕ ಬೆಂಬಲವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
"Wife Kamati Hai, Mai Udata Hu"
(My wife earns and I spend)
Ganesh Balakrishnan (@ganeshb78) said this with a shy giggle on @sharktankindia. I realised how living off your wife's salary is looked down upon in our Indian society🧵
(1/4) pic.twitter.com/SR5jV4XgfL
— Richa Singh (@RichaaaaSingh) January 8, 2023
ಓಲಾ ಕ್ಯಾಬ್ಸ್ ನ ಸಿಇಒ ಭಾವೀಶ್ ಅಗರ್ವಾಲ್ ಅವರ ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿ ರಿಚಾ ಅವರು "ಅವರ ಪತ್ನಿ ರಾಜಲಕ್ಷಿ ಅಗರ್ವಾಲ್ ಅವರು ತಮ್ಮ ಆರಂಭಿಕ ದಿನಗಳಿಂದಲೂ ಆರ್ಥಿಕವಾಗಿ ಅವರಿಗೆ ಬೆಂಬಲ ನೀಡಿದ್ದಾರೆ. ಓಲಾ ಇನ್ನೂ ಬರೀ ಒಂದು ಸ್ಟಾರ್ಟ್ಅಪ್ ಆಗಿದ್ದಾಗ ವಿನಂತಿಗಳನ್ನು ಪೂರೈಸಲು ಅವರು ಹೆಂಡತಿಯ ಕಾರನ್ನು ಎರವಲು ಪಡೆಯುತ್ತಿದ್ದರಂತೆ" ಎಂದು ಹೇಳಿದರು.
ತನ್ನ ಟ್ವಿಟ್ಟರ್ ಸಾಲು ಮುಕ್ತಾಯಗೊಳಿಸಿ ರಿಚಾ "ತಮ್ಮ ಸಂಗಾತಿಯ ಬೆಂಬಲದಿಂದಾಗಿ ಯಶಸ್ವಿಯಾಗಲು ಇನ್ನೂ ಅನೇಕ ಸ್ಟಾರ್ಟ್ಅಪ್ ಸ್ಥಾಪಕರು ಸಮರ್ಥರಾಗಿದ್ದಾರೆ.
ಎಲ್ಲರೂ ಗಣೇಶ್ ಅವರನ್ನು ಹೊಗಳುತ್ತಿರುವಾಗ, ಅವರ ಕನಸನ್ನು ಜೀವಂತವಾಗಿರಿಸಲು ಅವರ ಹೆಂಡತಿಯ ಸಹಾಯಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು" ಎಂದು ಹೇಳಿದರು.
"ನಿಮ್ಮ ವೃತ್ತಿಜೀವನವು ನೀವು ಮದುವೆಯಾಗುವ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಸರಿಯಾಗಿ ಹೇಳಲಾಗಿದೆ ಎಂದು ಅವರು ಹೇಳಿದರು.
ಇದಕ್ಕೆ ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡಿ ನೆಟ್ಟಿಗರು?
ಈ ಟ್ವಿಟ್ಟರ್ ಎಳೆ ಸಾಮಾಜಿಕ ಮಾಧ್ಯಮಗಳಿಂದ ಸಾಕಷ್ಟು ಗಮನ ಸೆಳೆಯಿತು. "ಭಾರತೀಯ ಸಮಾಜದಲ್ಲಿ ಅತ್ಯಂತ ಕಡಿಮೆ ಗುರುತಿಸಲಾಗುವ ಅಂಶ" ಎಂದು ಬಳಕೆದಾರರೊಬ್ಬರು ಹೇಳಿದರು.
"ಸಂಜೀವ್ ಭಿಚಂದಾನಿ ಕೂಡ 1998 ರಲ್ಲಿ ನೌಕರಿ ಡಾಟ್ ಕಾಂ ಅನ್ನು ಪ್ರಾರಂಭಿಸಲು ಪತ್ನಿಯಿಂದ ಬೆಂಬಲವನ್ನು ಪಡೆದರು" ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು.
"ನನ್ನ ಉದ್ಯಮದ ಪ್ರಯಾಣದಲ್ಲಿ ನನ್ನ ಪತ್ನಿ ನನಗೆ ಸಾಕಷ್ಟು ಬೆಂಬಲ ನೀಡಿದರು ಮತ್ತು ಈಗಲೂ ಸಹ ನಾನು ಕೆಲಸದಿಂದ ಬೇಸತ್ತಾಗ ನಾನು ಅವಳನ್ನು ಅವಲಂಬಿಸಬಹುದು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bank Loan: 15 ನಿಮಿಷದಲ್ಲಿ ವೈಯಕ್ತಿಕ ಸಾಲ, 30 ನಿಮಿಷದಲ್ಲಿ ಗೃಹ ಸಾಲ! ಹೀಗೆ ಅರ್ಜಿ ಸಲ್ಲಿಸಿ
ಇತ್ತೀಚೆಗೆ, ನಾನು ಮತ್ತೊಂದು ಕೆಲಸವನ್ನು ಹುಡುಕಿಕೊಳ್ಳುವ ಮೊದಲೇ ಪ್ರಸ್ತುತ ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ರಾಜೀನಾಮೆ ಕೊಟ್ಟೆ. ನನ್ನ ಹೆಂಡತಿ ಕಳೆದ 10 ವರ್ಷಗಳಿಂದ ನನಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬೆಂಬಲ ನೀಡುತ್ತಿದ್ದಾಳೆ” ಎಂದು ಮತ್ತೊಬ್ಬರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ