ರೋಹಿತ್ ಶರ್ಮಾ ನೇತೃತ್ವದ ಭಾರತೀಯ ಬ್ಯಾಟ್ಸ್‌ಮನ್‌ಗಳು ಬಾರ್ಡರ್ ಗವಾಸ್ಕರ್ ಟ್ರೋಫಿಯ (Border–Gavaskar Trophy) ಮೊದಲ ಪಂದ್ಯದದ 2ನೇ ದಿನದಲ್ಲಿ ಆಸೀಸ್ ವಿರುದ್ಧ ದಿಟ್ಟ ಪ್ರದರ್ಶನ ನೀಡಿದರು. ಇದರಿಂದಾಗಿ ಟೀಂ ಇಂಡಿಯಾ (Team India) ಮೊದಲ ಇನಿಂಗ್ಸ್‌ನಲ್ಲಿ 144 ರನ್‌ಗಳ ಮುನ್ನಡೆ ಸಾಧಿಸಲು ಸಾಧಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 321 ರನ್ ಗಳಿಸಿದೆ. ಅಕ್ಷರ್ ಪಟೇಲ್ (Axar Patel) ಕೂಡ ಅರ್ಧಶತಕ ಗಳಿಸಿ ಉತ್ತಮವಾಗಿ ಆಡುತ್ತಿದ್ದಾರೆ. 22ರ ಹರೆಯದ ಆಫ್ ಸ್ಪಿನ್ನರ್ ಟಾಡ್ ಮರ್ಫಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 5 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 177 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಉತ್ತಮ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ:
ಎರಡನೇ ದಿನವಾದ ಶುಕ್ರವಾರ ಭಾರತ ಒಂದು ವಿಕೆಟ್‌ಗೆ 77 ರನ್‌ಗಳಿಗೆ ಬ್ಯಾಟಿಂಗ್ ಆರಂಭಿಸಿತು. ಮೊದಲ ಸೆಷನ್‌ನಲ್ಲಿ ತಂಡ 2 ವಿಕೆಟ್ ಕಳೆದುಕೊಂಡಿತು. ತಂಡ ರವಿಚಂದ್ರನ್ ಅಶ್ವಿನ್ (23) ಮತ್ತು ಚೇತೇಶ್ವರ ಪೂಜಾರ (7) ರನ್ಗೆ ವಿಕೆಟ್ ಕಳೆದುಕೊಂಡರು. ರೋಹಿತ್ ಶರ್ಮಾ ಜೊತೆ ಅಶ್ವಿನ್ 42 ರನ್ ಜೊತೆಯಾಟ ನಡೆಸಿದರು. ಇದಲ್ಲದೇ ವಿರಾಟ್ ಕೊಹ್ಲಿ (12) ಮತ್ತು ಸೂರ್ಯಕುಮಾರ್ ಯಾದವ್ (8) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತ ತಂಡ 5 ವಿಕೆಟ್‌ಗೆ 168 ರನ್ ಆಗಿತ್ತು. ಆದರೆ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅರ್ಧಶತಕದ ಜೊತೆಯಾಟ ನೀಡಿ ಸ್ಕೋರ್ 220 ರನ್ ದಾಟಿಸಲು ಸಹಾಯಕರಾದರು.
It's Stumps on Day 2 of the first #INDvAUS Test! #TeamIndia move to 321/7 & lead Australia by 144 runs. 👏 👏
1⃣2⃣0⃣ for captain @ImRo45
6⃣6⃣* for @imjadeja
5⃣2⃣* for @akshar2026
We will be back for Day 3 action tomorrow.
Scorecard ▶️ https://t.co/SwTGoyHfZx pic.twitter.com/1lNIJiWuwX
— BCCI (@BCCI) February 10, 2023
ನಾಯಕನಾಗಿ ರೋಹಿತ್ ಶರ್ಮಾ 171 ಎಸೆತಗಳಲ್ಲಿ ಮೊದಲ ಶತಕ ಪೂರೈಸಿದರು. ನಾಯಕನಾಗಿ ಇದು ಅವರ ಮೊದಲ ಟೆಸ್ಟ್ ಶತಕವಾಗಿದೆ. 212 ಎಸೆತಗಳಲ್ಲಿ 120 ರನ್ ಗಳಿಸಿದ ನಂತರ ಪ್ಯಾಟ್ ಕಮ್ಮಿನ್ಸ್ಗೆ ಬೌಲ್ಡ್ ಆದರು. ಇದರ ನಂತರ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಸ್ ಭರತ್ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಇದು ಮರ್ಫಿ ಅವರ 5ನೇ ವಿಕೆಟ್ ಆಗಿತ್ತು.
ಇದನ್ನೂ ಓದಿ: Ravindra Jadeja: ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್?
ಇದಾದ ಬಳಿಕ ಜಡೇಜಾ ಹಾಗೂ ಅಕ್ಷರ್ ಪಟೇಲ್ ಅಜೇಯ ಅರ್ಧಶತಕದ ಜೊತೆಯಾಟ ನಡೆಸಿ ಟೀಂ ಇಂಡಿಯಾ ಸ್ಕೋರ್ 300ರ ಗಡಿ ದಾಟಿಸಿದರು. ಜಡೇಜಾ 170 ಎಸೆತಗಳಲ್ಲಿ 66 ರನ್ ಗಳಿಸಿ ಆಡುತ್ತಿದ್ದಾರೆ. ಅವರು ಇಲ್ಲಿಯವರೆಗೆ 9 ಬೌಂಡರಿಗಳನ್ನು ಬಾರಿಸಿದ್ದಾರೆ. ಅದೇ ಸಮಯದಲ್ಲಿ ಅಕ್ಷರ್ ಪಟೇಲ್ 102 ಎಸೆತಗಳಲ್ಲಿ 52 ರನ್ ಗಳಿಸಿ ನಾಳೆಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್ 11:
ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲಂಡ್, ಟಾಡ್ ಮರ್ಫಿ, ನೇಥನ್ ಲ್ಯಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ