IND vs AUS: ಮೊದಲ ದಿನದಾಟ ಅಂತ್ಯ, ಆಸೀಸ್​ ವಿರುದ್ಧ ಮೇಲುಗೈ ಸಾಧಿಸಿದ ಟೀಂ ಇಂಡಿಯಾ

IND vs AUS Test

IND vs AUS Test

IND vs AUS: ನಾಗ್ಪುರ ಟೆಸ್ಟ್‌ನ ಮೊದಲ ದಿನದಲ್ಲಿ ಸಂಪೂರ್ಣವಾಗಿ ಭಾರತ ಮೇಲುಗೈ ಸಾಧಿಸಿದೆ. ರವೀಂದ್ರ ಜಡೇಜಾ ತಮ್ಮ ಪುನರಾಗಮನದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದರು.

  • Share this:

ನಾಗ್ಪುರ ಟೆಸ್ಟ್‌ನ ಮೊದಲ ದಿನದಲ್ಲಿ ಸಂಪೂರ್ಣವಾಗಿ ಭಾರತ (Team India) ಮೇಲುಗೈ ಸಾಧಿಸಿದೆ. ರವೀಂದ್ರ ಜಡೇಜಾ (Ravindra Jadeja) ತಮ್ಮ ಪುನರಾಗಮನದ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದರು. ಜೊತೆಗೆ ರವಿಚಂದ್ರನ್ ಅಶ್ವಿನ್ ಸಹ ಮೂರು ವಿಕೆಟ್ ಪಡೆದರು. ಇದರಿಂದಾಗಿ ಇಡೀ ಆಸ್ಟ್ರೇಲಿಯಾ ತಂಡ 177 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ ರೋಹಿತ್ ಶರ್ಮಾ (Rohit Sharma) ಅವರ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿದೆ. ಟೀಂ ಇಂಡಿಯಾ ಇನ್ನೂ ಆಸ್ಟ್ರೇಲಿಯಾಕ್ಕಿಂತ 100 ರನ್ ಹಿನ್ನಡೆಯಲ್ಲಿದೆ. ಇನ್ನು, ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ (Vidarbha Cricket Association Stadium) ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕಾಂಗರೂ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದರು.


ಕ್ರೀಸ್​ ಕಾಯ್ದುಕೊಂಡ ರೋಹಿತ್:


ಇನ್ನು, ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 77 ರನ್ ಗಳಿಸುವ ಮೂಲಕ 100 ರನ್​ಗಳ ಹಿನ್ನಡೆ ಅನುಭವಿಸಿದೆ. ಸದ್ಯ ರೋಹಿತ್ ಶರ್ಮಾ 69 ಎಸೆತಗಳಲ್ಲಿ 56 ರನ್ ಗಳಿಸಿ ಆಡುತ್ತಿದ್ದಾರೆ. ಕೆಎಲ್ ರಾಹುಲ್ 20 ರನ್ ಗಳಿಸಿ ಔಟಾದರು. ಇದಾದ ಬಳಿಕ ಕ್ರೀಸ್​ಗೆ ಬಂದ ರವಿಚಂದ್ರನ್ ಅಶ್ವಿನ್ ದಿನದಾಟದ ಅಂತ್ಯದವರೆಗೂ ಐದು ಎಸೆತಗಳನ್ನು ಎದುರಿಸಿ ಖಾತೆ ಓಪನ್​ ಮಾಡಿಲ್ಲ.



ಜಡೇಜಾ 5 ವಿಕೆಟ್​:


ರವೀಂದ್ರ ಜಡೇಜಾ ಇಂದು ಆಸೀಸ್​ ವಿರುದ್ಧ ಭರ್ಜರಿ ಬೌಲಿಂಗ್ ಮಾಡಿದರು. ಜಡೇಜಾ ಅವರು 22 ಓವರ್​ ಎಸೆದು 8 ಓವರ್​ ಮೇಡಿನ್ ಜೊತೆ 47 ರನ್ ನೀಡಿ 5 ವಿಕೆಟ್​ ಪಡೆಯುವ ಮೂಲಕ ಮಿಂಚಿದರು. ಉಳಿಂದತೆ ಅಶ್ವಿನ್​ ಸಹ 15.5 ಓವರ್​ಗಳಲ್ಲಿ 42 ರನ್ ನೀಡಿ 3 ವಿಕೆಟ್​ ಪಡೆದರು. ಉಳಿದಂತೆ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್​ ಪಡೆದರು.


ಇದನ್ನೂ ಓದಿ: Ravichandran Ashwin: 18 ವರ್ಷಗಳ ದಾಖಲೆ ಮುರಿದ ಅಶ್ವಿನ್​, ಕನ್ನಡಿಗ ರೆಕಾರ್ಡ್​​ ಬ್ರೇಕ್​ ಮಾಡಿದ ಸ್ಟಾರ್​ ಬೌಲರ್​


ಬ್ಯಾಟಿಂಗ್​ನಲ್ಲಿ ಎಡವಿದ ಆಸೀಸ್​:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸೀಸ್​ಗೆ ಬ್ಯಾಟಿಂಗ್​ನಲ್ಲಿ ಎಡವಿತು. ಆಸೀಸ್​ ಪರ ಡೇವಿಡ್ ವಾರ್ನರ್​ 1 ರನ್, ಉಸ್ಮಾನ್ ಖವಾಜಾ 1 ರನ್, ಟೆಸ್ಟ್​ ನಂಬರ್​ 1 ಬ್ಯಾಟ್ಸ್​ಮನ್​ ಮಾರ್ನಸ್ ಲಾಬುಶೇನ್ 49 ರನ್, ಮ್ಯಾಟ್ ರೆನ್ಶಾ ಶೂನ್ಯ, ಸ್ಟೀವ್ ಸ್ಮಿತ್ 37 ರನ್, ಪೀಟರ್ ಹ್ಯಾಂಡ್ಸ್​ಕಾಂಬ್ 31 ರನ್, ಅಲೆಕ್ಸ್ ಕ್ಯಾರಿ 36 ರನ್, ಪ್ಯಾಟ್ ಕಮಿನ್ಸ್ 6 ರನ್, ಸ್ಕಾಟ್ ಬೊಲಂಡ್ 1 ರನ್, ಟಾಡ್ ಮರ್ಫಿ ಶೂನ್ಯ ಮತ್ತು ನೇಥನ್ ಲ್ಯಾನ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು.




ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:


ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್​.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.


ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್​ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲಂಡ್, ಟಾಡ್ ಮರ್ಫಿ, ನೇಥನ್ ಲ್ಯಾನ್.

Published by:shrikrishna bhat
First published: