ಐತಿಹಾಸಿಕ ಟೆಸ್ಟ್​ನಲ್ಲಿ ಭಾರತಕ್ಕೆ ಆಫ್ಘನ್ ಸ್ಪಿನ್ನರ್​ಗಳ ಸವಾಲು: ತಿರುಗೇಟು ನೀಡಲು ಧವನ್ ರೆಡಿ

news18
Updated:June 13, 2018, 7:21 PM IST
ಐತಿಹಾಸಿಕ ಟೆಸ್ಟ್​ನಲ್ಲಿ ಭಾರತಕ್ಕೆ ಆಫ್ಘನ್ ಸ್ಪಿನ್ನರ್​ಗಳ ಸವಾಲು: ತಿರುಗೇಟು ನೀಡಲು ಧವನ್ ರೆಡಿ
news18
Updated: June 13, 2018, 7:21 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಜೂ. 13): ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಾಳೆಯಿಂದ ಇಂಡೋ-ಅಫ್ಘನ್ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ   ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು ಅಫ್ಘಾನಿಸ್ತಾನ ತುದಿಗಾಲ ಮೇಲೆ ನಿಂತಿದೆ. ಭಾರತವನ್ನ ಕಟ್ಟಿ ಹಾಕಲು ಅಫ್ಘನ್ ತಂಡ ಸ್ಪಿನ್ ಪಡೆಯನ್ನ ನೆಚ್ಚಿಕೊಂಡಿದೆ. ಅದರಲ್ಲೂ ಲೆಗ್ ಸ್ಪಿನ್ನರ್ ರಶೀದ್ ಖಾನ್ ಎಂಬ ಅಸ್ತ್ರವನ್ನು ಉಪಯೋಗಿಸುತ್ತಿದೆ. ಇತ್ತ, ಅಫ್ಘನ್ ಸ್ಪಿನ್ನರ್​​ಗಳನ್ನು ಎದುರಿಸಲು ಭಾರತದ ಬಳಿ ಬ್ರಹ್ಮಾಸ್ತ್ರವಿದೆ.

ಬೆಂಗಳೂರು ಟೆಸ್ಟ್ ಪಂದ್ಯವನ್ನೇ ಗುರಿಯಾಗಿಸಿಕೊಂಡಿರುವ ಡೆಲ್ಲಿ ಡ್ಯಾಶರ್ ಶಿಖರ್ ಧವನ್ ಅವರು ಕ್ರಿಕೆಟ್ ಶಿಶುಗಳ ಮೇಲೆ ಸವಾರಿ ಮಾಡುವುದಕ್ಕೆ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಹಾಗಾಗಿ ಬೆಂಗಳೂರು ಟೆಸ್ಟ್ ಪಂದ್ಯ ಶಿಖರ್ ಧವನ್ ಹಾಗೂ ರಶೀದ್ ಖಾನ್ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆ. ಅಲ್ಲದೆ, ಈ ಇಬ್ಬರು ಆಟಗಾರರು ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿದ್ದರು. ಹಾಗಾಗಿ ರಶೀದ್ ಅವರ ಬೌಲಿಂಗ್ ಹೇಗಿರಲಿದೆ ಎಂಬುವುದನ್ನು ಧವನ್ ಅವರು ಚೆನ್ನಾಗಿಯೇ ಅರಿತುಕೊಂಡಿದ್ದಾರೆ. ಜೊತೆಗೆ, ಧವನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಟೆಸ್ಟ್ ಪಂದ್ಯದ ಬಗ್ಗೆ ಬರೆದುಕೊಂಡಿದ್ದು, ‘ಬೆಂಗಳೂರಿನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಐತಿಹಾಸಿಕ ಪಂದ್ಯಕ್ಕೆ ಕಾತುರನಾಗಿದ್ದೇನೆ. ಈ ಐತಿಹಾಸಿಕ ಪಂದ್ಯದಲ್ಲಿ ಭಾಗಿಯಾಗಲು ತುಂಬಾ ಸಂತೋಷವಿದೆ’ ಎಂದು ಹೇಳಿದ್ದಾರೆ.

 

Loading...ಸದ್ಯ ಭಾರತ ತಂಡವನ್ನು ಮುನ್ನಡೆಸುತ್ತಿರುವ ನಾಯಕ​ ರಹಾನೆ ಅವರು 75 ಪಂದ್ಯಗಳಲ್ಲಿ 35 ಭಾರಿ ಸ್ಪಿನ್ನರ್​ಗಳಿಗೆ ಬಲಿಯಾಗಿದ್ದು, ರಹಾನೆ ಜೊತೆಗೆ ಬಹುತೇಕ ಟೀಮ್ ಇಂಡಿಯಾ ಆಟಗಾರರು ಸ್ಪಿನ್ನರ್​​ಗಳ ಮುಂದೆ ಮಂಕಾಗುತ್ತಿದ್ದಾರೆ. ಹೀಗಾಗಿ, ಅಫ್ಘನ್ ಸ್ಪಿನ್ನರ್​ಗಳ ಬೌಲಿಂಗ್​ನಲ್ಲಿ ರಹಾನೆ ಪಡೆ ಎಚ್ಚರಿಕೆಯ ಆಟವಾಡಬೇಕಿದೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...