• Home
  • »
  • News
  • »
  • sports
  • »
  • Rohit Sharma: ವಿಶ್ವಕಪ್ ಗೆಲ್ಲಬೇಕಾದ್ರೆ ಐಪಿಎಲ್ ಆಡಬೇಡಿ, ರೋಹಿತ್ ಶರ್ಮಾಗೆ ವಾರ್ನಿಂಗ್​ ಮಾಡಿದ ಕೋಚ್  

Rohit Sharma: ವಿಶ್ವಕಪ್ ಗೆಲ್ಲಬೇಕಾದ್ರೆ ಐಪಿಎಲ್ ಆಡಬೇಡಿ, ರೋಹಿತ್ ಶರ್ಮಾಗೆ ವಾರ್ನಿಂಗ್​ ಮಾಡಿದ ಕೋಚ್  

ರೋಹಿತ್ ಶರ್ಮಾ

ರೋಹಿತ್ ಶರ್ಮಾ

Rohit Sharma: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸೋಲು ಅನುಭವಿಸಬೇಕಾಯಿತು. ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ಇದೀಗ ಮುಂಬರುವ ವಿಶ್ವಕಪ್​ ಗೆಲ್ಲಲು ರೋಹಿತ್​ಗೆ ಸಲಹೆ ನೀಡಿದ್ದಾರೆ.

  • Share this:

ಟಿ20 ವಿಶ್ವಕಪ್‌ನ (T20 World Cup) ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸೋಲಿನ ಬಳಿಕ ಭಾರತ ತಂಡದಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ರೋಹಿತ್ ಶರ್ಮಾಗೆ (Rohit Sharma) ಟೀಂ ಇಂಡಿಯಾದ ನಾಯಕತ್ವ ತೊರೆಯುವಂತೆ ಹಲವು ಅನುಭವಿಗಳು ಸಲಹೆ ನೀಡಿದ್ದಾರೆ. ಏತನ್ಮಧ್ಯೆ, ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಅವರು 2023 ರ ಏಕದಿನ ವಿಶ್ವಕಪ್ ಗೆಲ್ಲಬೇಕಾದರೆ ಭಾರತ ತಂಡವು ಐಪಿಎಲ್‌ನಿಂದ (IPL 2023) ದೂರವಿರಬೇಕಾಗುತ್ತದೆ ಎಂದು ಹೇಳಿದ್ದಾರೆ. 


ಐಪಿಎಲ್​ನಿಂದ ದೂರವಿರಿ:


ಸ್ಪೋರ್ಟ್‌ಕೀಡಾ ಜೊತೆಗಿನ ವಿಶೇಷ ಸಂವಾದದಲ್ಲಿ ದಿನೇಶ್ ಲಾಡ್ ಈ ಕುರಿತು ಮಾತನಾಡಿದ್ದು, 'ಕಳೆದ 7-8 ತಿಂಗಳಿಂದ ಈ ತಂಡ ಸ್ಥಿರವಾಗಿಲ್ಲ. ತಂಡವು ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದರೆ ತಂಡವು ಒಗ್ಗಟ್ಟಾಗಿರಬೇಕು. ಕಳೆದ ಏಳು ತಿಂಗಳುಗಳಲ್ಲಿ, ಯಾರಾದರೂ ಆರಂಭಿಕರಾಗಿ ಬರುತ್ತಿದ್ದಾರೆ, ನಂತರ ಯಾರಾದರೂ ಬೌಲ್ ಮಾಡಲು ಬರುತ್ತಿದ್ದಾರೆ. ಈ ತಂಡ ಸ್ಥಿರವಾಗಿಲ್ಲ‘ ಎಂದು ಹೇಳಿದ್ದಾರೆ.


ದಿನೇಶ್ ಅವರು, 'ಕೆಲಸದ ನಿರ್ವಹಣೆಯೇ ಇದಕ್ಕೆ ಕಾರಣ ಎಂದು ನಾನು ಭಾವಿಸುವುದಿಲ್ಲ. ಜಗತ್ತಿನಾದ್ಯಂತ ಎಲ್ಲರೂ ಕ್ರಿಕೆಟ್ ಆಡುತ್ತಿದ್ದಾರೆ. ಆದ್ದರಿಂದ ನೀವು ಕೆಲಸದ ಹೊರೆಯನ್ನು ಕಾರಣ ಮಾಡಲು ಸಾಧ್ಯವಿಲ್ಲ. ಇದೇ ವೇಳೆ ವಿಶ್ವಕಪ್ ಗೆಲ್ಲಬೇಕಾದರೆ ಐಪಿಎಲ್‌ನಲ್ಲಿ ಆಡಬೇಡಿ. ಅವರು ಪ್ರತಿ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಭಾಗವಹಿಸಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಾವು ಖಂಡಿತವಾಗಿಯೂ ಅವರಿಂದ ಏನನ್ನಾದರೂ ಪಡೆಯುತ್ತೇವೆ. ಅಂತರಾಷ್ಟ್ರೀಯ ಕ್ರಿಕೆಟ್‌ನೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ‘ ಎಂದು ರೋಹಿತ್​ಗೆ ಸಲಹೆ ನೀಡಿದ್ದಾರೆ.


ಇದನ್ನೂ ಓದಿ: BCCI ಸ್ವಚ್ಛತಾ ಅಭಿಯಾನ ಆರಂಭ; ನಾಯಕತ್ವ, ಆಯ್ಕೆ ಸಮಿತಿ ನಂತ್ರ ಯಾರಿಗೆ ಕಾದಿದೆ ಶಾಕ್​?


ಅವರು ಐಪಿಎಲ್ ಆಡುವ ಕುರಿತು ನಾನು ಹೇಳಲಾಗದು:


ಅವರು ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ಈ ಬಗ್ಗೆ ಅವರೇ ನಿರ್ಧರಿಸಬೇಕು. ಏಕೆಂದರೆ, ನೀವು ಭಾರತಕ್ಕಾಗಿ ಅಥವಾ ರಾಜ್ಯಕ್ಕಾಗಿ ಆಡುವಾಗ ಐಪಿಎಲ್‌ಗೆ ನಿಮ್ಮ ಹೆಸರನ್ನು ಮಾತ್ರ ಪರಿಗಣಿಸಲಾಗುತ್ತದೆ. ನಿಮ್ಮ ಪ್ರದರ್ಶನವು ಐಪಿಎಲ್‌ನಲ್ಲಿನ ಸಂಬಳದ ಮಿತಿಯಲ್ಲಿ ಮಾತ್ರ ನಿಮಗೆ ಸಹಾಯ ಮಾಡುತ್ತದೆ‘ ಎಂದಿದ್ದಾರೆ.


ಹಾರ್ದಿಕ್ ಪಾಂಡ್ಯ ನಿಯಮಿತ ನಾಯಕ:


ಕೆಲ ಮಾಹಿತಿಯ ಪ್ರಕಾರ 2024ರ ಟಿ20 ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ತಂಡವನ್ನು ಅಣಿಗೊಳಿಸಬಹುದು. ಅದಕ್ಕಾಗಿ ಪಾಂಡ್ಯ ಅವರಿಗೆ ಟಿ20 ಮಾದರಿಯ ನಿಯಮಿತ ನಾಯಕತ್ವ ನೀಡುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ನಾಯಕರಾಗಿ ಉಳಿಯಲಿದ್ದಾರೆ. ಒಟ್ಟಿನಲ್ಲಿ ಬಿಸಿಸಿಐನಲ್ಲಿ ಆಗಿರುವ ಈ ಬದಲಾವಣೆಗಳನ್ನು ನೋಡಿದರೆ ಮುಂದಿನ ವರ್ಷಗಳಲ್ಲಿ ಭಾರತ ತಂಡದಲ್ಲಿ ಭಾರೀ ಸಂಚಲನ ಮೂಡುವ ಸಾಧ್ಯತೆ ಇದೆ.


ಬಿಸಿಸಿಐನ ಮಹತ್ವದ ನಿರ್ಧಾರಗಳು:


ಆಯ್ಕೆ ಸಮಿತಿಯನ್ನು ವಿಸರ್ಜಿಸಿದ ಬಿಸಿಸಿಐ ತಕ್ಷಣವೇ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ರಚಿಸಲು ಅರ್ಜಿಗಳನ್ನು ಆಹ್ವಾನಿಸಿದೆ. ಅದಕ್ಕೆ ನವೆಂಬರ್ 28 ಕೊನೆಯ ದಿನವಾಗಿದೆ. ಅರ್ಜಿದಾರರ ಸಂದರ್ಶನದ ನಂತರ ಮುಂದಿನ ಜನವರಿಯೊಳಗೆ ಹೊಸ ಆಯ್ಕೆ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಗೆ ಬಹುದೊಡ್ಡ ಜವಾಬ್ದಾರಿ ಇರಲಿದೆ. ಏಕೆಂದರೆ ಟೀಂ ಇಂಡಿಯಾ ಇನ್ನೆರಡು ವರ್ಷಗಳಲ್ಲಿ ಎರಡು ವಿಶ್ವಕಪ್ ಆಡಲಿದೆ. 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ಆಯೋಜಿಸಲಾಗಿದೆ. ಟಿ20 ವಿಶ್ವಕಪ್ 2024ರಲ್ಲಿ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದೆ. ಹೀಗಾಗಿ ಈಗಾಗಲೇ ಬಿಸಿಸಿಐ ಮುಂಬರಲಿರುವ ಮಹತ್ವದ ಟೂರ್ನಿಗಾಗಿ ತಂಡದಲ್ಲಿ ಅನೇಕ ಬದಲಾವಣೆಗಳನ್ನು ಮಾಡಲು ಈಗಿನಿಂದಲೇ ಆರಂಭಿಸಿದೆ. ಇದರ ಭಾಗವಾಗಿ ಪಾಂಡ್ಯ ಅವರಿಗೆ ನಾಯಕತ್ವದ ಹೊಣೆ , ದ್ರಾವಿಡ್​ ಬದಲಿಗೆ ಟಿ20 ಕ್ರಿಕೆಟ್​ಗೆ ಧೋನಿ ಕೋಚ್​ ಆಗಿ ನೇಮಿಸುವಂತೆ ಅನೇಕ ಬದಲಾವಣೆ ತರಲು ಚಿಂತನೆ ನಡೆಸಿದೆ.

Published by:shrikrishna bhat
First published: