ಸಾವಿರದ ಟೆಸ್ಟ್​​ನಲ್ಲಿ ಆಂಗ್ಲರಿಗೆ ಭರ್ಜರಿ ಜಯ; ಕೊಹ್ಲಿ ಪಡೆಗೆ ಭಾರೀ ಮುಖಭಂಗ

news18
Updated:August 4, 2018, 5:36 PM IST
ಸಾವಿರದ ಟೆಸ್ಟ್​​ನಲ್ಲಿ ಆಂಗ್ಲರಿಗೆ ಭರ್ಜರಿ ಜಯ; ಕೊಹ್ಲಿ ಪಡೆಗೆ ಭಾರೀ ಮುಖಭಂಗ
news18
Updated: August 4, 2018, 5:36 PM IST
ನ್ಯೂಸ್ 18 ಕನ್ನಡ

ಎಡ್ಜ್​​​ಬಾಸ್ಟನ್ (. 04): ಇಂಗ್ಲೆಂಡ್​​ನ ಬರ್ಮಿಂಗ್​​ಹ್ಯಾಮ್​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 31 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟೀ ಇಂಡಿಯಾವನ್ನು ಎರಡನೇ ಇನ್ನಿಂಗ್ಸ್​​ನಲ್ಲಿ 162 ರನ್​ಗೆ ಆಲೌಟ್ ಮಾಡುವ ಮೂಲಕ ಸಾವಿರನೇ ಟೆಸ್ಟ್​​ನಲ್ಲಿ ಗೆದ್ದು 5 ಟೆಸ್ಟ್​ ಪಂದ್ಯಗಳ ಟೂರ್ನಿಯಲ್ಲಿ ಇಂಗ್ಲೆಂಡ್ ಶುಭಾರಂಭ ಮಾಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​ಗೆ ನಾಯಕ ಜೋ ರೂಟ್ ಅವರ 80 ರನ್​ ಹಾಗೂ ಜಾನಿ ಬೈರ್ಸ್ಟೊ ಅವರ 70 ರನ್​ಗಳ ನೆವಿವಿನಿಂದ ಮೊದಲನೇ ಇನ್ನಿಂಗ್ಸ್​​ನಲ್ಲಿ 287 ರನ್​ಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್​ನಲ್ಲಿ ಆರ್. ಅಶ್ವಿನ್ 4 ಹಾಗೂ ಮೊಹಮ್ಮದ್ ಶಮಿ 3 ವಿಕೆಟ್ ಪಡೆದು ಮಿಂಚಿದರೆ, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​ಮನ್​​​​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕೊಹ್ಲಿ ಆಂಗ್ಲರ ನಾಡಲ್ಲಿ ಮೊದಲ ಶತಕ ಬಾರಿಸಿ 149 ರನ್​ ಗೆ ಔಟ್ ಆಗುವ ಮೂಲಕ ಭಾರತ 13 ರನ್​ಗಳ ಹಿನ್ನಡೆಯೊಂದಿಗೆ 274 ರನ್​ಗೆ ಆಲೌಟ್ ಆಯಿತು.

ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ಭಾರತೀಯ ಬೌಲರ್​ಗಳು ದಿಟ್ಟ ಉತ್ತರ ನೀಡಿ  180ಕ್ಕೆ ಆಲೌಟ್ ಮಾಡಿದರು. ಈ ಮೂಲಕ 193 ರನ್​ಗಳ ಮುನ್ನಡೆಯೊಂದಿಗೆ ಟೀಂ ಇಂಡಿಯಾಕ್ಕೆ ಗೆಲ್ಲಲು 194 ರನ್​ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಎರಡನೇ ಇನ್ನಿಂಗ್ಸ್​​ನಲ್ಲೂ ಯಾವೊಬ್ಬ ಬ್ಯಾಟ್ಸ್​ಮನ್​​ಗಳು ಕ್ರೀಸ್​ ಕಚ್ಚಿ ಆಡಲಿಲ್ಲ. ಇಂಗ್ಲೆಂಡ್ ಬೌಲರ್​​ಗಳ ಮಾರಕ ದಾಳಿಗೆ ತತ್ತರಿಸಿದ ಕೊಹ್ಲಿ ಪಡೆ 162 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ವಿರಾಟ್ ಕೊಹ್ಲಿ 51 ಹಾಗೂ ಹಾರ್ದಿಕ್ ಪಾಂಡ್ಯ 31 ರನ್​​​​​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 20ರ ಗಡಿ ದಾಟಲಿಲ್ಲ.

ಈ ಮೂಲಕ ಇಂಗ್ಲೆಂಡ್ ತನ್ನ ಮೊದಲ ಟೆಸ್ಟ್​​ನಲ್ಲೇ 31 ರನ್​ಗಳ ಗೆಲುವಿನ ನಗೆ ಬೀರಿದ್ದು, ಟೀಂ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಎರಡನೇ ಟೆಸ್ಟ್​ ಪಂದ್ಯ ಆಗಸ್ಟ್​ 9 ಕ್ಕೆ ಆರಂಭವಾಗಲಿದ್ದು ಲಂಡನ್ ಲಾರ್ಡ್ಸ್​​ ಮೈದಾನದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 287/10(ಮೊದಲನೇ ಇನ್ನಿಂಗ್ಸ್​​)
Loading...

(ಜೋ ರೂಟ್ 80, ಜಾನಿ ಬೈರ್ಸ್​ಟ್​ 70, ಆರ್. ಅಶ್ವಿನ್ 62/4, ಮೊಹಮ್ಮದ್ ಶಮಿ 64/3)

ಭಾರತ: 274/10(ಮೊದಲನೇ ಇನ್ನಿಂಗ್ಸ್​)

(ವಿರಾಟ್ ಕೊಹ್ಲಿ 149, ಸ್ಯಾಮ್ ಕುರ್ರನ್ 74/4)

ಇಂಗ್ಲೆಂಡ್: 180/10(ಎರಡನೇ ಇನ್ನಿಂಗ್ಸ್​)

(ಸ್ಯಾಮ್ ಕುರ್ರನ್ 63, ಇಶಾಂತ್ ಶರ್ಮಾ 51/5, ಆರ್. ಅಶ್ವಿನ್ 59/3)

ಭಾರತ: 162/10(ಎರಡನೇ ಇನ್ನಿಂಗ್ಸ್​)

(ವಿರಾಟ್ ಕೊಹ್ಲಿ 51, ಹಾರ್ದಿಕ್ ಪಾಂಡ್ಯ 31, ಬೆನ್ ಸ್ಟೋಕ್ಸ್ 40/4)

ಪಂದ್ಯ ಶ್ರೇಷ್ಠ: ಸ್ಯಾಮ್ ಕುರ್ರನ್
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...