ಭಾರತ-ಇಂಗ್ಲೆಂಡ್ ಟೆಸ್ಟ್; ಟೀಂ ಇಂಡಿಯಾಕ್ಕೆ 292 ರನ್​​ಗಳ ಭರ್ಜರಿ ಮುನ್ನಡೆ

news18
Updated:August 20, 2018, 12:31 AM IST
ಭಾರತ-ಇಂಗ್ಲೆಂಡ್ ಟೆಸ್ಟ್; ಟೀಂ ಇಂಡಿಯಾಕ್ಕೆ 292 ರನ್​​ಗಳ ಭರ್ಜರಿ ಮುನ್ನಡೆ
news18
Updated: August 20, 2018, 12:31 AM IST
ನ್ಯೂಸ್ 18 ಕನ್ನಡ

ನ್ಯಾಟಿಂಗ್​​ಹ್ಯಾಮ್​ನ ಟ್ರೆಂಟ್​ ಬ್ರಿಡ್ಜ್​​​ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ 3ನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ 2ನೇ ಇನ್ನಿಂಗ್ಸ್​​ನಲ್ಲಿ 2ನೇ ದಿನದಾಟ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 124 ರನ್ ಕಲೆಹಾಕಿದೆ. ಈ ಮೂಲಕ ಟೀಂ ಇಂಡಿಯಾ 292 ರನ್​ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ.

ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ಕೆ. ಎಲ್. ರಾಹುಲ್ ಮೊದಲನೇ ವಿಕೆಟ್​ಗೆ 60 ರನ್​ಗಳ ಕಾಣಿಕೆ ನೀಡಿದರು. ಆದರೆ 36 ರನ್​​ ಗಳಿಸಿರುವಾಗ ರಾಹುಲ್ ಬೆನ್ ಸ್ಟೋಕ್ಸ್​ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ತನ್ನ ಇನ್ನಿಂಗ್ಸ್​ ಅನ್ನು ಕೊನೆಗೊಳಿಸಿದರು. ಬಳಿಕ ಪೂಜಾರ ಜೊತೆಯಾದ ಧವನ್ ಇನ್ನಿಂಗ್ಸ್ ಕಟ್ಟಲು ಮುಂದಾದರಾದರು 44 ರನ್​​ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಸದ್ಯ ಕೊಹ್ಲಿ ಜೊತೆಯಾಗಿರುವ ಪೂಜಾರ ಎಚ್ಚರಿಕೆಯ ಆಟವಾಡುತ್ತಿದ್ದು, ಎರಡೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿದೆ. ಕೊಹ್ಲಿ 8 ಹಾಗೂ ಪೂಜಾರ 33 ರನ್ ಬಾರಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಭಾರತ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 329 ರನ್​ಗೆ ಆಲೌಟ್ ಆಗಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ಹಾರ್ದಿಕ್ ಪಾಂಡ್ಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 161 ರನ್​ಗೆ ಸರ್ವಪತನ ಕಂಡಿತ್ತು. ಇಂಗ್ಲೆಂಡ್ ಪರ ಜಾಸ್ ಬಟ್ಲರ್ 39 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಉಳಿದಂತೆ ಸ್ಟಾರ್ ಆಟಗಾರರಾದ ಕುಕ್ 29 ರನ್​ಗೆ ಔಟ್ ಆದರೆ, ಜೆನ್ನಿಂಗ್ಸ್​ 20, ನಾಯಕ ಜೋ ರೂಟ್ 16, ಜಾನಿ ಬೈಸ್ಟ್ರೋ 15 ರನ್​​ಗೆ ಔಟ್ ಆಗಿ ಬೇಗನೆ ಪೆವಿಲಿಯನ್ ಸೇರಿಕೊಂಡರು.

ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಹಾರ್ದಿಕ್ ಪಾಂಡ್ಯ 5 ವಿಕೆಟ್ ಕಿತ್ತು ಮಿಂಚಿದರೆ, ಇಶಾಂತ್ ಶರ್ಮಾ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದರು. ಅಂತೆಯೆ ಮೊಹಮ್ಮದ್ ಶಮಿ, 1 ವಿಕೆಟ್ ಪಡೆದಿದ್ದಾರೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...