'ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡು': ಅಯ್ಯರ್​​ಗೆ ಧೋನಿ ಸಲಹೆ

news18
Updated:July 29, 2018, 12:34 PM IST
'ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡು': ಅಯ್ಯರ್​​ಗೆ ಧೋನಿ ಸಲಹೆ
news18
Updated: July 29, 2018, 12:34 PM IST
ನ್ಯೂಸ್ 18 ಕನ್ನಡ

ಮುಂಬೈ (ಜುಲೈ. 29): ಭಾರತ ತಂಡದ ಮಾಜಿ ನಾಯಕ ಎಂ. ಎಸ್. ಧೊನಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ನ್ಯೂ ಕಮ್ಮರ್ಸ್​​​ಗೆ ಸಾಕಷ್ಟು ಸಲಹೆ ನೀಡುತ್ತಿರುತ್ತಾರೆ. ಈ ರೀತಿ ಸಲಹೆ ಪಡೆದ ಯಂಗ್ ಪ್ಲೇಯರ್ಸ್​​ ಮಾಹಿ ಹೇಳಿದ ಮಾತನ್ನು ಮೆಲುಕು ಹಾಕಿದ್ದೂ ಇದೆ. ಅದೇ ರೀತಿ ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ನಪಡೆದಿರುವ ಶ್ರೇಯಸ್ ಅಯ್ಯರ್ ಅವರು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಧೋನಿ ನೀಡಿದ ಕೆಲ ಸಲಹೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಐಪಿಎಲ್​​ನಲ್ಲಿ ಹಾಗೂ ದೇಶಿಯ ಕ್ರಿಕೆಟ್​​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಅಯ್ಯರ್​ಗೆ ಕೂಲ್ ಕ್ಯಾಪ್ಟನ್, 'ಸಾಧ್ಯವಾದಷ್ಟು ಸಾಮಾಜಿಕ ಮಾಧ್ಯಮಗಳಿಂದ ದೂರವಿರು' ಎಂಬ ಸಲಹೆ ನೀಡಿದ್ದರೆಂದು ಅಯ್ಯರ್ ಹೇಳಿದ್ದಾರೆ. ಅಲ್ಲದೆ 'ದಿನ ಪತ್ರಿಕೆಗಳು ಓದುವುದನ್ನು ಕಡಿಮೆ ಮಾಡು' ಎಂದಿದ್ದರೆಂದು ತಿಳಿಸಿದ್ದಾರೆ.

ಇನ್ನು ಐಪಿಎಲ್​ಗೆ ಆಯ್ಕೆ ಆದ ಸಮಯದಲ್ಲಿ ಪರಿಚಿತ ಹುಡುಗೊಯೊಬ್ಬಳು ಪ್ರತಿ ದಿನ ನನಗೆ ಸಂದೇಶವನ್ನು ಕಳುಹಿಸುತ್ತಿದ್ದಳು. ಆಕೆ ನಡವಳಿಕೆ ಕೂಡ ಬದಲಾಗಿತ್ತು. ಬಳಿಕ ಹಣಕ್ಕೋಸ್ಕರ ಆಕೆ ನನ್ನ ಹಿಂದೆ ಬಿದ್ದಳೆಂದು ತಿಳಿಯಿತು ಎಂದು ಶ್ರೇಯಸ್ ಹೇಳಿದ್ದಾರೆ.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...