ಪಂದ್ಯ ಮುಗಿದ ಬಳಿಕ ಗ್ಯಾಲರಿ ಸ್ವಚ್ಚಗೊಳಿಸಿದ ಲಂಕಾ ಕ್ರಿಕೆಟ್ ಅಭಿಮಾನಿಗಳು

news18
Updated:August 9, 2018, 10:27 PM IST
ಪಂದ್ಯ ಮುಗಿದ ಬಳಿಕ ಗ್ಯಾಲರಿ ಸ್ವಚ್ಚಗೊಳಿಸಿದ ಲಂಕಾ ಕ್ರಿಕೆಟ್ ಅಭಿಮಾನಿಗಳು
news18
Updated: August 9, 2018, 10:27 PM IST
ನ್ಯೂಸ್ 18 ಕನ್ನಡ

ಇತ್ತೀಚೆಗಷ್ಟೆ ರಷ್ಯಾದಲ್ಲಿ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯ ಮುಗಿದ ಬಳಿಕ ತಂಡದ ಅಭಿಮಾನಿಗಳು ಸ್ಟೇಡಿಯಂ ಅನ್ನು ಸ್ವಚ್ಚಗೊಳಿಸಿದ್ದರು. ಇದಕ್ಕೆ ಕ್ರೀಡಾಭಿಮಾನಿಗಳು ಬೇಷ್ ಕೂಡ ಎಂದಿದ್ದರು. ಸದ್ಯ ಇದೇ ರೀತಿ ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಮಾನಿಗಳು ಸಹ ಮಾಡಿದ್ದು, ಎಲ್ಲಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 78 ರನ್​ಗಳಿಂದ ಸೋಲುಕಂಡಿದೆ ಆದರು, ಲಂಕಾ ಅಭಿಮಾನಿಗಳು ಮಾತ್ರ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಖಾಲಿ ಬಾಟಲಿಗಳು ಹಾಗೂ ಕಸ ಕಡ್ಡಿಗಳನ್ನು ಮೂಲೆ ಮೂಲೆಯಿಂದ ಹೆಕ್ಕಿ ಸ್ವಚ್ಚಗೊಳಿಸಿದ್ದಾರೆ. ಈ ವಿಡಿಯೋವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

 ಇನ್ನು ಶ್ರೀಲಂಕಾ ಅಭಿಮಾನಿಗಳ ಈ ಕೆಲಸಕ್ಕೆ ಕುಮಾರ್ ಸಂಗಕ್ಕಾರ ಟ್ವೀಟ್ ಮಾಡಿದ್ದು, ‘ಸಣ್ಣ ಅಮೂಲ್ಯವಾದ ಕೆಲಸಗಳು ದೊಡ್ಡ ಸಾಧನೆಗೆ ಸ್ಪೂರ್ತಿಯಾಗುತ್ತದೆ’ ಎಂದಿದ್ದಾರೆ.

 

First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...