ಒಂದೇ ಪಂದ್ಯದಲ್ಲಿ ಬಾರಿಸಿದ ಬರೋಬ್ಬರಿ 434 ರನ್​​: ಕ್ರಿಕೆಟ್​​ನಲ್ಲಿ ದಾಖಲಾಯಿತು ಮತ್ತೊಂದು ದಾಖಲೆ

ಪೆರೆರಾ ಅವರು ಮೊದಲ ಇನ್ನಿಂಗ್ಸ್​ನಲ್ಲಿ 203 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸ್​​ನೊಂದಿಗೆ 201 ರನ್ ಸಿಡಿಸಿದರೆ, ಎರಡನೇ ಇನ್ನಿಂಗ್ಸ್​​ನಲ್ಲಿ 268 ಬಾಲ್ ಎದುರಿಸಿದ್ದು 20 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ 231 ರನ್ ಚಚ್ಚಿದ್ದಾರೆ.

Vinay Bhat | news18
Updated:February 4, 2019, 9:31 PM IST
ಒಂದೇ ಪಂದ್ಯದಲ್ಲಿ ಬಾರಿಸಿದ ಬರೋಬ್ಬರಿ 434 ರನ್​​: ಕ್ರಿಕೆಟ್​​ನಲ್ಲಿ ದಾಖಲಾಯಿತು ಮತ್ತೊಂದು ದಾಖಲೆ
ಏಂಜಲೊ ಪೆರೆರಾ
Vinay Bhat | news18
Updated: February 4, 2019, 9:31 PM IST
ಕೊಲಂಬೊ: ಕ್ರಿಕೆಟ್​​​ನಲ್ಲಿ ಯಾರೊಬ್ಬನ ದಾಖಲೆಯು ಶಾಶ್ವತವಲ್ಲ. ಈಗಂತು ಕ್ರಿಕೆಟರ್ಸ್​​ ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆ ನಿರ್ಮಾಣ ಮಾಡುತ್ತಲೆ ಇರುತ್ತಾರೆ. ಅಂತೆಯೆ ಸದ್ಯ ಶ್ರೀಲಂಕಾ ಕ್ರಿಕೆಟ್ ಆಟಗಾರ ಒಬ್ಬ ಕ್ರಿಕೆಟ್ ಇತಿಹಾಸದಲ್ಲೆ ನೂತನ ದಾಖಲೆ ಬರೆದಿದ್ದಾರೆ.

23 ವರ್ಷ ಪ್ರಾಯದ ಏಂಜಲೊ ಪೆರೆರಾ ಎಂಬವರು 4 ದಿನಗಳ ಪಂದ್ಯದಲ್ಲಿ ಒಟ್ಟು 434 ರನ್ ಸಿಡಿಸಿ ಮಿಂಚಿದ್ದಾರೆ. ಶ್ರೀಲಂಕಾದ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಈ ದಾಖಲೆ ನಿರ್ಮಾಣವಾಗಿದ್ದು, ನಾಂಡೆಸ್ಕ್ರಿಪ್ಟ್ಸ್​​ ಕ್ರಿಕೆಟ್ ಕ್ಲಬ್ ತಂಡದ ನಾಯಕ ಏಂಜಲೊ ಪೆರೆರಾ ಅವರು ಸಿನ್​ಹೇಲ್ಸ್​ ಸ್ಪೋರ್ಟ್ಸ್​​ ಕ್ಲಬ್ ತಂಡದ ವಿರುದ್ಧ ಮೊದಲ ಇನ್ನಿಂಗ್ಸ್​​ನಲ್ಲಿ 201 ಹಾಗೂ ಎರಡನೇ ಇನ್ನಿಂಗ್ಸ್​ನಲ್ಲಿ 231 ರನ್ ಚಚ್ಚಿದ್ದಾರೆ. ಇಂದೆ ಪಂದ್ಯದಲ್ಲಿ ಎರಡು ದ್ವಿಶತಕ ಸಿಡಿಸಿ ಪೆರೆರಾ ಮಿಂಚಿದ್ದಾರೆ.

ಇದಕ್ಕೂ ಮೊದಲು 1938 ರಲ್ಲಿ ಇಂಗ್ಲೆಂಡ್ ತಂಡದ ಆರ್ತೋರ್ ಫಾಗ್ ಎಂಬವರು ಒಂದೇ ಪಂದ್ಯದಲ್ಲಿ ಕ್ರಮವಾಗಿ 244 ಹಾಗೂ 202 ರನ್ ಗಳಿಸಿದ ಸಾಧನೆ ಮಾಡಿದ್ದರು.

ಇದನ್ನೂ ಓದಿ: ವಿಡಿಯೋ ವೈರಲ್: ಚಹಾಲ್​​ಗೆ ಕೈ ಮುಗಿಯುತ್ತ ಧೋನಿ ಪೆವಿಲಿಯನ್​ನತ್ತ ಓಡಿದ್ದೇಕೆ?

ಸದ್ಯ ಪೆರೆರಾ ಅವರು ಮೊದಲ ಇನ್ನಿಂಗ್ಸ್​ನಲ್ಲಿ 203 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸ್​​ನೊಂದಿಗೆ 201 ರನ್ ಸಿಡಿಸಿದರೆ, ಎರಡನೇ ಇನ್ನಿಂಗ್ಸ್​​ನಲ್ಲಿ 268 ಬಾಲ್ ಎದುರಿಸಿದ್ದು 20 ಬೌಂಡರಿ ಹಾಗೂ 3 ಸಿಕ್ಸ್​ನೊಂದಿಗೆ 231 ರನ್ ಚಚ್ಚಿದ್ದಾರೆ. ಇದರೊಂದಿಗೆ ಒಂದೇ ಪಂದ್ಯದಲ್ಲಿ ಎರಡು ದ್ವಿಶತಕ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಪೆರೆರಾ ಪಡೆದುಕೊಂಡಿದ್ದಾರೆ.
First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...