ದ. ಆಫ್ರಿಕಾ ವಿರುದ್ಧ ಶ್ರೀಲಂಕಾಕ್ಕೆ ಭರ್ಜರಿ ಜಯ; ಇತಿಹಾಸ ರಚಿಸಿದ ಸಿಂಹಳೀಯರು

ಮೊದಲು ಬ್ಯಾಟ್ ಮಾಡಿದ್ದ ದ. ಆಫ್ರಿಕಾ 222 ರನ್​ಗೆ ಆಲೌಟ್ ಆಗಿತ್ತು. ತಂಡದ ಪರ ಕ್ವಿಂಟನ್ ಡಿಕಾಕ್ 86 ಹಾಗೂ ಆ್ಯಡೆನ್ ಮಾರ್ಕ್ರಮ್ 60 ರನ್ ಗಳಿಸಿದರೆ, ಲಂಕಾ ಪರ ವಿಶ್ವ ಫೆರ್ನಾಂಡೊ ಹಾಗೂ ಕಸನ್ ರಂಜಿತ್ ತಲಾ 3 ವಿಕೆಟ್ ಪಡೆದರು.

Vinay Bhat | news18
Updated:February 23, 2019, 6:14 PM IST
ದ. ಆಫ್ರಿಕಾ ವಿರುದ್ಧ ಶ್ರೀಲಂಕಾಕ್ಕೆ ಭರ್ಜರಿ ಜಯ; ಇತಿಹಾಸ ರಚಿಸಿದ ಸಿಂಹಳೀಯರು
ಮೊದಲು ಬ್ಯಾಟ್ ಮಾಡಿದ್ದ ದ. ಆಫ್ರಿಕಾ 222 ರನ್​ಗೆ ಆಲೌಟ್ ಆಗಿತ್ತು. ತಂಡದ ಪರ ಕ್ವಿಂಟನ್ ಡಿಕಾಕ್ 86 ಹಾಗೂ ಆ್ಯಡೆನ್ ಮಾರ್ಕ್ರಮ್ 60 ರನ್ ಗಳಿಸಿದರೆ, ಲಂಕಾ ಪರ ವಿಶ್ವ ಫೆರ್ನಾಂಡೊ ಹಾಗೂ ಕಸನ್ ರಂಜಿತ್ ತಲಾ 3 ವಿಕೆಟ್ ಪಡೆದರು.
  • News18
  • Last Updated: February 23, 2019, 6:14 PM IST
  • Share this:
ಪೋರ್ಟ್​​ ಎಲಿಜಬೆತ್: ದಕ್ಷಿಣಾ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ ಒಂದು ವಿಕೆಟ್​ಗಳ ರೋಚಕ ಗೆಲುವು ಕಂಡಿದ್ದ ಶ್ರೀಲಂಕಾ, ಎರಡನೇ ಟೆಸ್ಟ್​ ಪಂದ್ಯದಲ್ಲೂ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆಫ್ರಿಕನ್ನರ ನೆಲದಲ್ಲಿ ಟೆಸ್ಟ್​ ಸರಣಿ ಜಯಿಸಿದ ಮೊದಲ ಏಷ್ಯನ್ ತಂಡ ಎಂಬ ಸಾಧನೆಯನ್ನು ಸಿಂಹಳೀಯರು ಮಾಡಿದ್ದಾರೆ.

ಮೊದಲು ಬ್ಯಾಟ್ ಮಾಡಿದ್ದ ದ. ಆಫ್ರಿಕಾ 222 ರನ್​ಗೆ ಆಲೌಟ್ ಆಗಿತ್ತು. ತಂಡದ ಪರ ಕ್ವಿಂಟನ್ ಡಿಕಾಕ್ 86 ಹಾಗೂ ಆ್ಯಡೆನ್ ಮಾರ್ಕ್ರಮ್ 60 ರನ್ ಗಳಿಸಿದರೆ, ಲಂಕಾ ಪರ ವಿಶ್ವ ಫೆರ್ನಾಂಡೊ ಹಾಗೂ ಕಸನ್ ರಂಜಿತ್ ತಲಾ 3 ವಿಕೆಟ್ ಪಡೆದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಲಂಕಾ 154 ರನ್​ಗೆ ಸರ್ವಪತನ ಕಂಡಿತು. ಇತ್ತ 68 ರನ್​​ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿದ ಆಫ್ರಿಕಾ ಲಕ್ಮಾಲ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 128 ರನ್​ಗೆ ಆಲೌಟ್ ಆಯಿತು. ಈ ಮೂಲಕ ಎದುರಾಳಿಗೆ ಗೆಲ್ಲಲು 197 ರನ್​​ಗಳ ಟಾರ್ಗಟ್ ನೀಡಿತು.

ಇದನ್ನೂ ಓದಿ: IPL 2019: ಉದ್ಘಾಟನಾ ಸಮಾರಂಭ ರದ್ದು

 ಈ ಸುಲಭ ಗುರಿ ಬೆನ್ನಟ್ಟಿದ ಲಂಕಾನ್ನರು 45.4 ಓವರ್​ನಲ್ಲೇ 2 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ತಂಡದ ಪರ ಒಶಾಡ ಫೆರ್ನಾಂಡೊ 75 ಹಾಗೂ ಕುಸಲ್ ಮೆಂಡೀಸ್ 84 ರನ್ ಬಾರಿಸಿ ಅಜೇಯರಾಗಿ ಉಳಿದರು.

ಇದರೊಂದಿಗೆ ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಶ್ರೀಲಂಕಾ 2-0 ಮುನ್ನಡೆ ಸಾಧಿಸಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಇತಿಹಾಸ ರಚಿಸಿದೆ.

First published:February 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading