T20 World Cup 2022: ಟಿ20 ವಿಶ್ವಕಪ್​ಗೆ ಶ್ರೀಲಂಕಾ ತಂಡ ಪ್ರಕಟ, ಹೇಗಿದೆ ಏಷ್ಯನ್ ಚಾಂಪಿಯನ್ ಟೀಂ?

T20 World Cup 2022: ಮುಂಬರುವ T20 ವಿಶ್ವಕಪ್ 2022 ಗಾಗಿ (T20 World Cup 2022) ಶ್ರೀಲಂಕಾ (Sri Lanka) ತನ್ನ 15 ಜನರ ತಂಡವನ್ನು ಪ್ರಕಟಿಸಿದೆ. ಇದರೊಂದಿಗೆ ನಾಲ್ವರು ಸ್ಟ್ಯಾಂಡ್‌ಬೈ ಆಟಗಾರರನ್ನೂ ಹೆಸರಿಸದೆ. 

ಶ್ರೀಲಂಕಾ ತಂಡ

ಶ್ರೀಲಂಕಾ ತಂಡ

  • Share this:
ಮುಂಬರುವ T20 ವಿಶ್ವಕಪ್ 2022 ಗಾಗಿ (T20 World Cup 2022) ಶ್ರೀಲಂಕಾ (Sri Lanka) ತನ್ನ 15 ಜನರ ತಂಡವನ್ನು ಪ್ರಕಟಿಸಿದೆ. ಇದರೊಂದಿಗೆ ನಾಲ್ವರು ಸ್ಟ್ಯಾಂಡ್‌ಬೈ ಆಟಗಾರರನ್ನೂ ಹೆಸರಿಸದೆ.  ಶ್ರೀಲಂಕಾ ಸೂಪರ್ 12 ರಲ್ಲಿ ನೇರ ಪ್ರವೇಶ ಪಡೆದಿಲ್ಲ. ಹೀಗಾಗಿ ಈ ತಂಡ ಅರ್ಹತಾ ಪಂದ್ಯಗಳನ್ನು ಆಡುವ ಮೂಲಕ ಸೂಪರ್ 12 ಗೆ ಎಂಟ್ರಿಕೊಡಬೇಕಿದೆ.  ಇನ್ನು, ಈ ಬಾರಿ ಏಷ್ಯಾ ಕಪ್​ 2022ರ (Asia Cup 2022) ಚಾಂಪಿಯನ್​ ಆದ ಶ್ರೀಲಂಕಾ ತಂಡವು, ಟಿ20 ವಿಶ್ವಕಪ್​ ಸಹ ಗೆಲ್ಲುವ ಮೆಚ್ಚಿನ ತಂಡಗಳ ಪಟ್ಟಿಯನ್ನು ಸೇರಿದೆ. ಹಾಲಿ ಚಾಂಪಿಯನ್ ಶ್ರೀಲಂಕಾ ಕೂಡ ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ದುಸ್ಮಂತ ಚಮೀರಾ ಮತ್ತು ಲಹಿರು ಕುಮಾರ ಅವರನ್ನು ಹೆಸರಿಸಿದೆ. ಆದರೆ ಅವರ ಫಿಟ್ನೆಸ್ ಬಗ್ಗೆ ಟೀಮ್ ಮ್ಯಾನೇಜ್‌ಮೆಂಟ್ ಖಚಿತವಾಗಿಲ್ಲ.

ಟಿ20 ವಿಶ್ವಕಪ್​ಗೆ ಶ್ರೀಲಂಕಾ ತಂಡ:

ದಸುನ್ ಶನಕ, ದನುಷ್ಕ ಗುಣತಿಲಕ, ಪಾತುಂ ನಿಸಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ವನಿಂದು ಹಸರಂಗ, ಮಹಿಷ್ ಟೀಕ್ಷಣ, ಜೆಫ್ರಿ ವಾಂಡರ್ಸೆ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರಾ, ಲಹೀರು ಕುಮಾರ, ಪ್ರಮೋದ್ ಮಧುಶನ, ದಿಲ್ಶನ್ ಕುಮಾರ್
ಸ್ಟ್ಯಾಂಡ್‌ಬೈ ಆಟಗಾರರು: ಅಶೇನ್ ಬಂಡಾರ, ಪ್ರವೀಣ್ ಜಯವಿಕ್ರಮ, ದಿನೇಶ್ ಚಾಂಡಿಮಲ್, ಬಿನೂರ ಫೆರ್ನಾಂಡೊ ಮತ್ತು ನುವಾನಿಡು ಫೆರ್ನಾಂಡೊ.

ಏಷ್ಯಾಕಪ್​ 2022 ತಂಡವೇ ವಿಶ್ವಕಪ್​ಗೆ:

ಶ್ರೀಲಂಕಾ ಟಿ20 ವಿಶ್ವಕಪ್ ತಂಡದಲ್ಲಿ ಹೆಚ್ಚಾಗಿ ಏಷ್ಯಾ ಕಪ್​ 2022ರಲ್ಲಿ ಕಣಕ್ಕಿಳಿದ ತಂಡದ ಆಟಗಾರರೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ತಂಡವು ಏಷ್ಯಾಕಪ್ ಚಾಂಪಿಯನ್ ಆಯಿತು. ಇವರಲ್ಲಿ ಮಹಿಷ್ ಪತಿರಾನ, ನುವಾನ್ ತುಸಾರ ಮತ್ತು ಅಸಿತಾ ಫೆರ್ನಾಂಡೋ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಆಟಗಾರರಾಗಿದ್ದಾರೆ. ಪತಿರಾನಾ ಇತ್ತೀಚೆಗೆ ಏಷ್ಯಾಕಪ್‌ಗೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೆ 9 ತಂಡಗಳು ಪ್ರಕಟ, ಯಾರೆಲ್ಲಾ ಸ್ಟಾರ್​ ಪ್ಲೇಯರ್ಸ್​ ಇದ್ದಾರೆ ನೋಡಿ; ಇಲ್ಲಿದೆ ಸಂಪೂರ್ಣ ಪಟ್ಟಿ

ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದಿನೇಶ್ ಚಾಂಡಿಮಾಲ್ ಅವರನ್ನು ಏಷ್ಯಾಕಪ್ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಆದರೆ ವಿಶ್ವಕಪ್‌ಗೆ ಮೀಸಲು ಆಟಗಾರರಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ವೇಗಿ ದಿಲ್ಶಾನ್ ಮಧುಶಂಕ ತಮ್ಮ ಸ್ಥಾನವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧುಶಂಕ ಏಷ್ಯಾಕಪ್‌ನಲ್ಲಿ ತಮ್ಮ ತೀಕ್ಷ್ಣ ಬೌಲಿಂಗ್‌ನಿಂದ ಪ್ರಭಾವಿತರಾಗಿದ್ದರು. ಧನಂಜಯ್ ಡಿ ಸಿಲ್ವಾ ಮತ್ತು ಜೆಫ್ರಿ ವಾಂಡರ್ಸೆ ಕೂಡ ಆಸ್ಟ್ರೇಲಿಯಾಕ್ಕೆ ಹಾರಲು ಟಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ:  T20 World Cup 2022: ಟಿ20 ವಿಶ್ವಕಪ್​ ಬಳಿಕ ನಿವೃತ್ತಿ ಹೇಳ್ತಾರಂತೆ ಟೀಂ ಇಂಡಿಯಾದ ಇಬ್ಬರು ಸ್ಟಾರ್​ ಪ್ಲೇಯರ್ಸ್?

ಟಿ20 ವಿಶ್ವಕಪ್​ಗಾಗಿ ಟೀಂ ಇಂಡಿಯಾ: 

ಭಾರತ ತಂಡ: ರೋಹಿತ್ ಶರ್ಮಾ (C), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್ ಬೈ ಆಟಗಾರರು: 
ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
Published by:shrikrishna bhat
First published: