ಏಷ್ಯಾಕಪ್ 2023 (Asia Cup 2023) ಪಾಕಿಸ್ತಾನದಲ್ಲಿ ನಡೆಸುವ ಕನಸು ಕಾಣುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (PCB) ಭಾರೀ ಹಿನ್ನಡೆಯಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಪ್ರಮುಖ ಸದಸ್ಯರು ಪಾಕಿಸ್ತಾನದ ಯೋಜನೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪಾಕಿಸ್ತಾನದ ಜಿಯೋ ನ್ಯೂಸ್ ವರದಿಯ ಪ್ರಕಾರ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಗಳು ಪಾಕಿಸ್ತಾನದ ಹೊರಗೆ ಏಷ್ಯಾ ಕಪ್ ಆಯೋಜಿಸುವ ಭಾರತದ ಪ್ರಸ್ತಾಪವನ್ನು ಬೆಂಬಲಿಸಿವೆ. ಏಷ್ಯಾದ ಈ ಬೃಹತ್ ಟೂರ್ನಿಯನ್ನು ತನ್ನ ದೇಶದಲ್ಲಿಯೇ ನಡೆಸಲು ಹಠಮಾರಿ ನಿಲುವು ತಳೆದಿರುವ ಪಿಸಿಬಿಗೆ ಇದೀಗ ದೊಡ್ಡ ಹಿನ್ನಡಯಾಗಿದೆ.
ಬಿಸಿಸಿಐ vs ಪಿಸಿಬಿ ಫೈಟ್:
ಏಷ್ಯಾ ಕಪ್ 2023 ಪಾಕಿಸ್ತಾನದಲ್ಲಿ ನಡೆಯುವುದು ಕಷ್ಟವೆಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಭಾರತ ತಂಡ ಪಾಕಿಸ್ತಾನ ಪ್ರವಾಸಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಇದಾದ ನಂತರ ಭಾರತಕ್ಕೆ ಪಿಸಿಬಿ ಕಡೆಯಿಂದ ಅನೇಕ ಮನ ಒಲಿಕೆ ಮಾಡಲಾಯಿತು. ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗದಿದ್ದರೆ, ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ಪಾಕಿಸ್ತಾನ ತಂಡವೂ ಬರುವುದಿಲ್ಲ ಎಂದು ಪಿಸಿಬಿ ಎಚ್ಚರಿಕೆ ನೀಡಿತ್ತು.
ಪಾಕಿಸ್ತಾನದ ಈ ಬೆದರಿಕೆಗಳ ಬಗ್ಗೆ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರ ನಂತರ, 2023ರ ವಿಶ್ವಕಪ್‌ನಲ್ಲಿ ಭಾರತವನ್ನು ಆಡಲು ಪಾಕಿಸ್ತಾನ ತಂಡವನ್ನು ಕಳುಹಿಸುತ್ತೇನೆ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಅವರ ಹೇಳಿಕೆ ಮುನ್ನೆಲೆಗೆ ಬಂದಿತ್ತು. ಈಗಾಗಲೇ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ ಈ ಬಾರಿಯ ಏಷ್ಯಾಕಪ್ 50 ಓವರ್ ಗಳ ಮಾದರಿಯಲ್ಲಿ ಆಯೋಜಿಸಲಾಗಿದೆ. ಈ ಟೂರ್ನಿ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಇತ್ತೀಚೆಗಷ್ಟೇ ನೇಪಾಳ ತಂಡ ಏಷ್ಯಾಕಪ್‌ನಲ್ಲಿ ಆಡಲು ಅರ್ಹತೆ ಪಡೆದಿದೆ. ನೇಪಾಳ ತಂಡ ಏಷ್ಯಾಕಪ್‌ನ ಭಾಗವಾಗುತ್ತಿರುವುದು ಇದೇ ಮೊದಲು. ನೇಪಾಳ ಕೂಡ ಭಾರತ ಮತ್ತು ಪಾಕಿಸ್ತಾನದ ಗುಂಪಿಗೆ ಮೂರನೇ ತಂಡವಾಗಿ ಸೇರಿಕೊಳ್ಳಲಿದೆ.
ಇದನ್ನೂ ಓದಿ: WTC Final 2023: ಟೆಸ್ಟ್ ಚಾಂಪಿಯನ್ಶಿಪ್ನಿಂದ ಕನ್ನಡಿಗ ಔಟ್! ಸ್ಫೋಟಕ ಆಟಗಾರನಿಗೆ ಬಿಸಿಸಿಐ ಮಣೆ
15 ಸೀಸನ್ ಏಷ್ಯಾಕಪ್:
ಏಷ್ಯಾ ಕಪ್ ODI ಮತ್ತು T20 ಸ್ವರೂಪಗಳಲ್ಲಿ ಆಡಲಾಗುತ್ತದೆ. ಇಲ್ಲಿಯವರೆಗೆ 15 ಸೀಸನ್‌ಗಳು ನಡೆದಿವೆ. ಟೀಂ ಇಂಡಿಯಾ ಗರಿಷ್ಠ 7 ಬಾರಿ ಪ್ರಶಸ್ತಿ ಗೆದ್ದಿದೆ. ಇದರಲ್ಲಿ 6 ODI ಪ್ರಶಸ್ತಿಗಳು ಮತ್ತು ಒಂದು T20 ಪ್ರಶಸ್ತಿ ಸೇರಿವೆ. ಪಾಕಿಸ್ತಾನ ಇದುವರೆಗೆ ಕೇವಲ 2 ಪ್ರಶಸ್ತಿಗಳನ್ನು ಗೆದ್ದಿದೆ. ಎರಡೂ ಏಕದಿನ ಪ್ರಶಸ್ತಿಗಳು. ಟಿ20 ಮಾದರಿಯನ್ನು ಏಷ್ಯಾದಲ್ಲಿ ಎರಡು ಬಾರಿ ಮಾತ್ರ ಆಡಲಾಗಿದೆ. ಟೀಂ ಇಂಡಿಯಾ 2016ರಲ್ಲಿ ಚಾಂಪಿಯನ್ ಆಗಿದ್ದರೆ, 2022ರಲ್ಲಿ ಶ್ರೀಲಂಕಾ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.
ಭಾರತ ಕೊನೆಯ ಬಾರಿಗೆ 2018ರಲ್ಲಿ ಯುಎಇಯಲ್ಲಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿತ್ತು. ನಂತರ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಈ ಬಾರಿ ರೋಹಿಮ್ ಶರ್ಮಾ ನಾಯಕತ್ವದಲ್ಲಿ ತಂಡವು ದಾಖಲೆಯ 8ನೇ ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ಸಿದ್ಧವಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 1-2 ಅಂತರದಲ್ಲಿ ಸೋತಿತ್ತು.
ಇವುಗಳ ನಡುವೆ ಕೆಲ ವರದಿಯ ಪ್ರಕಾರ, ಪಾಕಿಸ್ತಾನವನ್ನು ಹೊರತುಪಡಿಸಿ, ಓಮನ್, ಯುಎಇ, ಶ್ರೀಲಂಕಾ ಅಥವಾ ಇಂಗ್ಲೆಂಡ್‌ನಲ್ಲಿ ಪಂದ್ಯಗಳನ್ನು ಆಡಬಹುದು. ಭಾರತದ ಪಂದ್ಯಗಳು ಮಾತ್ರ ಬೇರೆ ದೇಶಗಳಲ್ಲಿ ನಡೆಯಲಿವೆ. ಒಂದು ವೇಳೆ ಟೀಂ ಇಂಡಿಯಾ ಫೈನಲ್ ತಲುಪಿದರೆ ಪಾಕಿಸ್ತಾನದಲ್ಲಿ ಫೈನಲ್ ಕೂಡ ನಡೆಯುವುದಿಲ್ಲ. ಪಂದ್ಯಾವಳಿಯ ಪಂದ್ಯದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ, ಆದರೆ ಅದು ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳು ನಡೆಯಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ