• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • SRH vs RR: ಟಾಸ್​ ಗೆದ್ದ ಹೈದರಾಬಾದ್​ ಬೌಲಿಂಗ್​ ಆಯ್ಕೆ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

SRH vs RR: ಟಾಸ್​ ಗೆದ್ದ ಹೈದರಾಬಾದ್​ ಬೌಲಿಂಗ್​ ಆಯ್ಕೆ, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

 SRH vs RR

SRH vs RR

SRH vs RR, IPL 2023: ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023ರ ನಾಲ್ಕನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ (SRH vs RR) ಅನ್ನು ಸೆಣಸಾಡಲಿದೆ.

  • News18 Kannada
  • 3-MIN READ
  • Last Updated :
  • Hyderabad, India
  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023ರ ನಾಲ್ಕನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ (SRH vs RR) ಅನ್ನು ಸೆಣಸಾಡಲಿದೆ. ಇಂದಿನ ಪಂದ್ಯವು ಹೈದರಾಬಾದ್​ನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ (Rajiv Gandhi International Cricket Stadium) ನಡೆಯಲಿದೆ. ಈಗಾಗಲೇ ಟಾಸ್​ ಗೆದ್ದ ಹೈದರಾಬಾದ್​ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿದೆ.


ಪಂದ್ಯದ ಲೈವ್​ ಸ್ಟ್ರೀಮಿಂಗ್​ ಎಲ್ಲಿ?:


ಸನ್​ ರೈಸರಸ್​​ಹೈದರಾಬಾದ್​ ಮತ್ತು ರಾಜಸ್ಥಾನ್​ ರಾಯಲ್ಸ್ ನಡುವಿನ ಐಪಿಎಲ್​ 4ನೇ ಪಂದ್ಯವು ಹೈದರಾಬಾದ್​ನ ರಾಜೀವ್​ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ನೇರಪ್ರಸಾರವನ್ನು ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ವೀಕ್ಷಿಸಬಹುದು. ಲೈವ್​ ಸ್ಟ್ರೀಮಿಂಗ್​ನ್ನು ಜಿಯೋ ಸಿನಿಮಾ ಆ್ಯಪ್​ ಮೂಲಕ ಉಚಿತವಾಗಿ ನೋಡಬಹುದು. ಅಲ್ಲದೇ ಪಂದ್ಯದ ಹೆಚ್ಚಿನ ಮಾಹಿತಿಗಾಗಿ ನ್ಯೂಸ್​ 18 ಕನ್ನಡ ವೆಬ್​ಸೈಟ್​ ಅನುಸರಿಸಬಹುದು.



ಪಿಚ್​ ವರದಿ:


ಹೈದರಾಬಾದ್‌ನಲ್ಲಿ ಎರಡು ತಂಡಗಳಿಗೆ ಸ್ಪರ್ಧಾತ್ಮಕ ಟ್ರ್ಯಾಕ್ ಆಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 168 ರನ್​ ಆಗಿದೆ. ಕಳೆದ ಮೂರು ಐಪಿಎಲ್ ಪಂದ್ಯಗಳಲ್ಲಿ ಕ್ರಮವಾಗಿ 18 ಮತ್ತು 13 ವಿಕೆಟ್‌ಗಳನ್ನು ಗಳಿಸುವ ಮೂಲಕ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಪಿಚ್​ ಸಹಾಯಕವಾಗಿದೆ. ಹೀಗಾಗಿ ಉಪ್ಪಲ ಸ್ಟೇಡಿಯಂ ಹೆಚ್ಚು ಬೌಲರ್​ಗಳಿಗೆ ಸಹಾಯಕವಾಗಿದೆ.


ಇದನ್ನೂ ಓದಿ: SRH vs RR: ಹೈದರಾಬಾದ್ ತಂಡಕ್ಕೆ ಭಾರೀ ಆಘಾತ, ಮೊದಲ ಪಂದ್ಯದಿಂದಲೇ ಮೂವರು ಸ್ಟಾರ್​ ಪ್ಲೇಯರ್​ ಔಟ್​!


10 ವರ್ಷ ಪೂರೈಕೆ:


ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಫ್ರಾಂಚೈಸಿ ಅಸ್ತಿತ್ವಕ್ಕೆ ಬಂದು ಇಂದಿಗೆ 10 ವರ್ಷಗಳನ್ನು ಪೂರೈಸಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಂದರ್ಭದಲ್ಲಿ ಫ್ರಾಂಚೈಸಿಯಿಂದ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಹೈದರಾಬಾದ್ ತಂಡದ ಶಿಬಿರದಲ್ಲಿ ಕೇಕ್ ಆರ್ಡರ್ ಮಾಡಲಾಗಿತ್ತು. ನಾಯಕ ಭುವನೇಶ್ವರ್ ಕುಮಾರ್ ತಂಡದ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇಂದು ಹೈದರಾಬಾದ್ ಮತ್ತು ರಾಜಸ್ಥಾನ ತಂಡಗಳು ತಮ್ಮ ಐಪಿಎಲ್ ಅಭಿಯಾನವನ್ನು ಆರಂಭಿಸುತ್ತಿವೆ.


ಎರಡೂ ತಂಡಗಳ ಇತಿಹಾಸವನ್ನು ಅವಲೋಕಿಸಿದರೆ. 2008ರ ನಂತರ ರಾಜಸ್ಥಾನವು ಐಪಿಎಲ್ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲ, ಈ ತಂಡವು ತನ್ನ ಎರಡನೇ ಪ್ರಶಸ್ತಿಗಾಗಿ ಕಾಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ಅವರಂತಹ ಅನುಭವಿ ಆಟಗಾರರಿಂದ ತಂಡದ ಈ ಬರ ನೀಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಋತುವಿನಲ್ಲಿ, ಅವರು ಪೈನಲ್​ಗೆ ಲಗ್ಗೆ ಇಟ್ಟರೂ ಕಪ್​ ಗೆಲ್ಲಲು ಸಾಧ್ಯವಾಗಲಿಲ್ಲ.


ಹೈದರಾಬಾದ್​- ರಾಜಸ್ಥಾನ್​ ಪ್ಲೇಯಿಂಗ್​ 11:


ಸನ್​ ರೈಸರ್ಸ್​ ಹೈದರಾಬಾದ್​ ಪ್ಲೇಯಿಂಗ್​ 11: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್ (ಕೀಪರ್), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್ (ನಾಯಕ), ಟಿ.ನಟರಾಜನ್, ಫಜಲ್‌ಹಕ್ ಫಾರೂಕಿ.

top videos


    ರಾಜಸ್ಥಾನ್​ ರಾಯಲ್ಸ್ ಪ್ಲೇಯಿಂಗ್​ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಕೀಪರ್/ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.

    First published: