SRH vs RR: ರಾಜಸ್ಥಾನ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ಗೆ ರೋಚಕ ಜಯ

ಹೈದರಾಬಾದ್​ಗೆ ರೋಚಕ ಜಯ

ಹೈದರಾಬಾದ್​ಗೆ ರೋಚಕ ಜಯ

SRH vs RR: ಈ ಬೃಹತ್​ ಮೊತ್ತ ಬೆನ್ನಟ್ಟಿದ ಹೈದರಾಬಾದ್​ ತಂಡವು ನಿಗದಿತ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 217 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.

  • Share this:

ಐಪಿಎಲ್ IPL 2023) ನಲ್ಲಿ ಇಲ್ಲಿಯವರೆಗೆ 3 ಶತಕಗಳ ಇನ್ನಿಂಗ್ಸ್‌ಗಳನ್ನು ನೋಡಲಾಗಿದೆ. ಅದೇ ರೀತಿ ಇಂದು ಸೂಪರ್​ ಸಂಡೆಯಲ್ಲಿ ನಡೆದ 2 ಪಂದ್ಯದಲ್ಲಿ 3 ಆಟಗಾರರು ಶತಕದ ಅಂಚಿನಲ್ಲಿ ಎಡವಿದ್ದಾರೆ. ಹೌದು, ಮೊದಲ ಪಂದ್ಯದಲ್ಲಿ ಶುಭ್​ಮನ್ ಗಿಲ್ (Shubman Gill) ಮತ್ತು ವೃದ್ಧಿಮಾನ್​ ಸಾಹಾ ಶತಕದ ಅಂಚಿನಲ್ಲಿ ವಿಕೆಟ್​ ಒಪ್ಪಸಿದರು. ಅದೇ ರೀತಿ ಎರಡನೇ ಪಂದ್ಯದವಾದ ರಾಜಸ್ಥಾನ್​ ಮತ್ತು ಹೈದರಾಬಾದ್​ ತಂಡಗಳ ನಡುವಿನ ಹಣಾಹಣಿಯಲ್ಲಿ ಜೋಸ್ ಬಟ್ಲರ್ (Josh Butler) ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಯೊಂದಿಗೆ ಹೈದರಾಬಾದ್‌ ಹೈದರಾಬಾದ್​ ಬೌಲರ್​ಗಳನ್ನು ಬೆಂಡೆತ್ತಿದರು. ಆದರೆ, ಶತಕದತ್ತ ಹತ್ತಿರದಲ್ಲಿ ಬಟ್ಲರ್​ ಎಡವಿದರು. ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ್​ ತಂಡ ಬಟ್ಲರ್​ ಭರ್ಜರಿ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 214 ರನ್ ಗಳಿಸತು. ಈ ಬೃಹತ್​ ಮೊತ್ತ ಬೆನ್ನಟ್ಟಿದ ಹೈದರಾಬಾದ್​ ತಂಡವು ನಿಗದಿತ 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 217 ರನ್​ ಗಳಿಸುವ ಮೂಲಕ 4 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು.


ಅಭಿಷೇಕ್​ ಶರ್ಮಾ ಭರ್ಜರಿ ಬ್ಯಾಟಿಂಗ್​:


ಇನ್ನು, ರಾಜಸ್ಥಾನ್​ ರಾಯಲ್ಸ್ ನೀಡಿದ ಬಿಗ್​ ಟಾರ್ಗೆಟ್​ ಎಸ್​ಆರ್​ಎಚ್​ ತಂಡ  6 ವಿಕೆಟ್​ ನಷ್ಟಕ್ಕೆ 217 ರನ್​ ಗಳಿಸಿತು. ಹೈದರಾಬಾದ್​ ಪರ ಅನ್ಮೋಲ್​ಪ್ರೀತ್​ ಸಿಂಗ್​ 33 ರನ್, ಅಭಿಷೇಶ್​ ಶರ್ಮಾ 55 ರನ್, ರಾಹುಲ್ ತ್ರಿಪಾಠಿ 47 ರನ್, ಹೆನ್ರಿಚ್​ ಕ್ಲಾಸಿನ್​ 26 ರನ್, ನಾಯಕ ಅಡೇನ್​ ಮಾರ್ಕರಂ 6 ರನ್, ಗ್ಲೇನ್​ ಪಿಲಿಪ್ಸ್ 25 ರನ್, ಅಬದ್ಉಲ್​ ಸಮ್ಸದ್​ 17 ರನ್, ಮಾರ್ಕೋ ಜಾನ್ಸನ್​ 3 ರನ್ ಗಳಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.


ಬಟ್ಲರ್​ ಭರ್ಜರಿ ಬ್ಯಾಟಿಂಗ್​:


ಐಪಿಎಲ್ 2022 ರಲ್ಲಿ, ಬಟ್ಲರ್ ಅವರ ಬ್ಯಾಟ್‌ನಿಂದ 4 ಶತಕಗಳ ಇನ್ನಿಂಗ್ಸ್ ಹೊರಬಿತ್ತು. ಜೋಸ್ ಬಟ್ಲರ್ ಹೈದರಾಬಾದ್ ವಿರುದ್ಧದ ಶತಕಕ್ಕೆ ಕೇವಲ 5 ರನ್‌ಗಳ ಅಂತರದಲ್ಲಿದ್ದರು. ಅವರು 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 95 ರನ್‌ಗಳ ಬಿರುಸಿನ ಇನ್ನಿಂಗ್ಸ್ ಅನ್ನು ಆಡಿದರು. ಅದೇ ವೇಳೆ ಇನ್ನೊಂದು ತುದಿಯಲ್ಲಿ ನಾಯಕ ಸಂಜು ಸ್ಯಾಮ್ಸನ್ ಕೂಡ ಸತತ ನಾಲ್ಕನೇ ಅರ್ಧಶತಕ ಬಾರಿಸಿದರು. ಸಂಜು ಸ್ಯಾಮ್ಸನ್ ಅವರ 66 ರನ್‌ಗಳ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸಿಡಿದವು. ಇದರಿಂದಾಗಿ ರಾಜಸ್ಥಾನ ತಂಡ 214 ರನ್‌ಗಳ ಗರಿಷ್ಟ ಸ್ಕೋರ್ ತಲುಪಿತು.


ಇದನ್ನೂ ಓದಿ: Virat kohli: ಸಾಮಾಜಿಕ ಜಾಲತಾಣದ ಮೂಲಕ ಲಕ್ನೋಗೆ ಟಕ್ಕರ್ ನೀಡಿದ ಕೊಹ್ಲಿ! ಇನ್ನೂ ಮುಗಿಯದ ವೈಮನಸ್ಸು


ಅಪಾಯಕಾರಿಯಾಗುತ್ತಿದ್ದ ಯಶಸ್ವಿ ಜೈಸ್ವಾಲ್​ ಅವರನ್ನು ಮಾರ್ಕೊ ಜಾನ್ಸೆನ್ ನಿಧಾನಗತಿಯ ಬೌನ್ಸರ್ ಮೂಲಕ ಬೌಲ್ಡ್ ಮಾಡಿದರು. 18 ಎಸೆತಗಳಲ್ಲಿ 35 ರನ್ ಗಳಿಸಿದ್ದ ಜೈಸ್ವಾಲ್ ನಟರಾಜನ್ ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಮೊದಲ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ಕೊನೆಗೊಂಡಿತು. ಆದರೆ, ಯಶಸ್ವಿ ಜೈಸ್ವಾಲ್ ಔಟ್ ಆದ ಬಳಿಕವೂ ರಾಜಸ್ಥಾನ್​ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ ಜೋಸ್ ಬಟ್ಲರ್ ತಮ್ಮ ಅಬ್ಬರವನ್ನು ಮುಂದುವರೆಸಿದರು.




ಸೂಪರ್ ಭಾನುವಾರದ ಎರಡೂ ಪಂದ್ಯಗಳಲ್ಲಿ ಮೂವರು ಬ್ಯಾಟ್ಸ್‌ಮನ್‌ಗಳು ಶತಕದ ಬಳಿ ಬಂದು ಎಡವಿದರು. ಮೊದಲ ಪಂದ್ಯದಲ್ಲಿ ಗುಜರಾತ್‌ನ ಆರಂಭಿಕ ಆಟಗಾರ ಶುಭಮನ್ ಗಿಲ್ ಶತಕದಿಂದ 6 ರನ್‌ಗಳ ಅಂತರದಲ್ಲಿ ಉಳಿದಿದ್ದರು. ಅದೇ ವೇಳೆ ಇದೀಗ ಜೋಸ್ ಬಟ್ಲರ್ ಅವರ ಶತಕವೂ 5 ರನ್ ಗಳಿಂದ ವಂಚಿತರಾದರು. ಬಟ್ಲರ್ ಅವರನ್ನು ಭುವನೇಶ್ವರ್ ಕುಮಾರ್ ತಮ್ಮ ಅಮೋಘ ಯಾರ್ಕರ್ ಮೂಲಕ ಔಟ್ ಮಾಡಿದರು. ಐಪಿಎಲ್ 2023 ರಲ್ಲಿ ಇಲ್ಲಿಯವರೆಗೆ ಯಶಸ್ವಿ ಜೈಸ್ವಾಲ್, ರಿತುರಾಜ್ ಗಾಯಕ್ವಾಡ್ ಮತ್ತು ಹ್ಯಾರಿ ಬ್ರೂಕ್ ಅವರ ಬ್ಯಾಟ್‌ಗಳಿಂದ ಶತಕಗಳನ್ನು ನೋಡಲಾಗಿದೆ.


ಸೈಲೆಂಟ್​ ಆದ ಬೌಲರ್ಸ್​:


ಇನ್ನು, ಸವಾಯಿ ಮಾನ್​ಸಿಂಗ್​ ಮೈದಾನದಲ್ಲಿ ಇಂದು ಕೇವಲ ಬ್ಯಾಟ್ಸ್​ಮನ್​ಗಳು ಅಬ್ಬರಿಸಿದರು. ಬ್ಯಾಟರ್​ಗಳ ಮುಂದೆ ಬೌಲರ್ಸ್​ಗಳು ಸೈಲೆಂಟ್​ ಆಗಿದ್ದರು. ಸನ್​ರೈಸರ್ಸ್​ ಹೈದರಾಬಾದ್​ ಪರ ಭುವನೇಶ್ವರ್​ ಕುಮಾರ್ 4 ಓವರ್​ಗೆ 44 ಎನದ ನೀಡಿ 1 ವಿಕೆಟ್ ಪಡೆದರು. ಅದರಂತೆ ಮಾರ್ಕೋ ಜಾನ್ಸಿನ್​ ಸಹ 4 ಓವರ್​ಗೆ 44 ಎನದ ನೀಡಿ 1 ವಿಕೆಟ್ ಪಡೆದರು. ಆದರೆ ಬೇರೆ ಯಾವೊಬ್ಬ ಬೌಲರ್​ ಸಹ ಬ್ಯಾಟ್ಸ್​ಮನ್​ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಇತ್ತ ರಾಜಸ್ಥಾನ್​ ರಾಯಲ್ಸ್ ಬೌಲರ್​ಗಳೂ ಸಹ ಅಷ್ಟಾಗಿ ಉತ್ತಮ ದಾಳಿ ನಡೆಸಲಿಲ್ಲ. ಆದರೆ ಯಜುವೆಂದ್ರ ಚಹಾಲ್​ ಮಾತ್ರ 4 ಓವರ್​ಗೆ 29 ರನ್​ ನೀಡಿ ಪ್ರಮುಖ 4 ವಿಕೆಟ್​ ಪಡೆದರು. ಉಳಿದಂತೆ ರವಿಚಂದ್ರನ್​ ಅಶ್ವಿನ್ 1 ವಿಕೆಟ್​ ಪಡೆದರು.

top videos
    First published: