SRH vs RR: ಚಹಾಲ್​ ದಾಳಿಗೆ ಹೈದರಾಬಾದ್​ ತತ್ತರ, ರಾಜಸ್ಥಾನ್​ ತಂಡಕ್ಕೆ ಭರ್ಜರಿ ಜಯ

ರಾಜಸ್ಥಾನ್ ತಂಡಕ್ಕೆ ಭರ್ಜರಿ ಜಯ

ರಾಜಸ್ಥಾನ್ ತಂಡಕ್ಕೆ ಭರ್ಜರಿ ಜಯ

SRH vs RR: ರಾಜಸ್ಥಾನ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಋತುವನ್ನು ಅಬ್ಬರದಿಂದ ಆರಂಭಿಸಿದೆ.

  • Share this:

ರಾಜಸ್ಥಾನ ರಾಯಲ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹೊಸ ಋತುವನ್ನು ಅಬ್ಬರದಿಂದ ಆರಂಭಿಸಿದೆ. ಸನ್ ರೈಸರ್ಸ್ ಹೈದರಾಬಾದ್ (SRH vs RR) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತ ರಾಜಸ್ಥಾನ 5 ವಿಕೆಟ್ ಗೆ 203 ರನ್ ಗಳಿಸಿತ್ತು. ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರೊಂದಿಗೆ ಆರಂಭಿಕ ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಅರ್ಧಶತಕ ಗಳಿಸಿದರು. ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ರಾಜಸ್ಥಾನ 72 ರನ್‌ಗಳ ಭರ್ಜರಿ ಜಯ ಸಾಧಿಸಿತು.


ಚಹಾಲ್ ಭರ್ಜರಿ ಬೌಲಿಂಗ್​:


ರಾಜಸ್ಥಾನ ರಾಯಲ್ಸ್‌ನ ಬಿರುಸಿನ ಬ್ಯಾಟಿಂಗ್‌ನಿಂದ ಗಳಿಸಿದ 203 ರನ್‌ಗಳ ಸ್ಕೋರ್ ಅನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಟ್ರೆಂಟ್ ಬೌಲ್ಟ್ ಮೊದಲ ಓವರ್‌ನಲ್ಲಿಯೇ ಆಘಾತ ನೀಡಿದರು. ಮೂರನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ನಂತರ 5ನೇ ಎಸೆತದಲ್ಲಿ ಜೇಸನ್ ಹೋಲ್ಡರ್ ಎಸೆತದಲ್ಲಿ ಸ್ಲಿಪ್ ನಲ್ಲಿ ರಾಹುಲ್ ತ್ರಿಪಾಠಿ ಕ್ಯಾಚ್ ಪಡೆದರು. ಇದಾದ ಬಳಿಕ ಬಂದ ಯುಜುವೇಂದ್ರ ಚಹಾಲ್ ಒಂದರ ಹಿಂದೆ ಒಂದರಂತೆ 4 ವಿಕೆಟ್ ಕಬಳಿಸಿದರು. ಅವರು 4 ಓವರ್‌ಗಳಲ್ಲಿ 17 ರನ್ ನೀಡುವ ಮೂಲಕ ನಾಲ್ಕು ವಿಕೆಟ್​ ಪಡೆದರು.



ರಾಜಸ್ಥಾನ್​ ಭರ್ಜರಿ ಬ್ಯಾಟಿಂಗ್​:


ರಾಜಸ್ಥಾನದ ಆರಂಭಿಕ ಆಟಗಾರ ಯಶಸ್ವಿ ಜಸ್ವಾಲ್, ಅನುಭವಿ ಜೋಸ್ ಬಟ್ಲರ್ ಅವರೊಂದಿಗೆ ಉರಿಯುತ್ತಿರುವ ಆರಂಭವನ್ನು ಮಾಡಿದರು ಅದು ಹೈದರಾಬಾದ್ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಮೊದಲ 22 ಎಸೆತಗಳಲ್ಲಿ ಇಬ್ಬರೂ ಒಟ್ಟಿಗೆ 50 ರನ್ ಹೊಡೆದರು ಮತ್ತು ಪವರ್‌ಪ್ಲೇನಲ್ಲಿ 85 ರನ್ ಗಳಿಸುವ ಮೂಲಕ ತಮ್ಮ ದಾಖಲೆ ನಿರ್ಮಿಸಿದದರು. ಬಟ್ಲರ್ 22 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರು.


ಇದನ್ನೂ ಓದಿ: SRH vs RR Live Score, IPL 2023: ಟಾಸ್​ ಗೆದ್ದ ಬೆಂಗಳೂರು, ಇಲ್ಲಿದೆ ಆರ್​ಸಿಬಿ ಬಲಿಷ್ಠ ಪ್ಲೇಯಿಂಗ್​ 11


ಇದರ ನಂತರ, ಯುವ ಯಶಸ್ವಿ ಆಟಗಾರ ಹೆಚ್ಚು ಆಕ್ರಮಣಕಾರಿಯಾಗಿ ಐವತ್ತು ಬಾರಿಸಿದರು. 37 ಎಸೆತಗಳಲ್ಲಿ 54 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಎರಡು ವಿಕೆಟ್‌ಗಳ ಪತನದ ನಂತರ, ನಾಯಕ 28 ಎಸೆತಗಳಲ್ಲಿ ಫಿಫ್ಟಿ ಗಳಿಸಿದರು ಮತ್ತು ದೇವದತ್ ಪಡಿಕ್ಕಲ್ 2 ರನ್, ರಿಯಾನ್ ಪರಾಗ್ 7 ರನ್, ಶಿಮ್ರಾನ್ ಹೆಟ್ಮೆಯರ್ 22 ರನ್​ ಮತ್ತು ರವಿಚಂದ್ರನ್​ ಅಶ್ವಿನ್​ 1 ರನ್​ ಗಳಿಸಿದರು. ಈ ಮೂಲಕ ಐಪಿಎಲ್​ 2023ರಲ್ಲಿ 200 ರನ್​ ಗಳಿಸಿದ ಮೊದಲ ತಂಡವಾಗಿ ರಾಜಸ್ಥಾನ ಹೊರಹೊಮ್ಮಿದೆ.




ಕಣಕ್ಕಿಳಿದ ತಂಡಗಳ ವಿವರ:


ರಾಜಸ್ಥಾನ್​ ರಾಯಲ್ಸ್ ಪ್ಲೇಯಿಂಗ್​ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಕೀಪರ್/ನಾಯಕ), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್, ಯುಜ್ವೇಂದ್ರ ಚಾಹಲ್.

top videos


    ಸನ್​ ರೈಸರ್ಸ್​ ಹೈದರಾಬಾದ್​ ಪ್ಲೇಯಿಂಗ್​ 11: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್ (ಕೀಪರ್), ಉಮ್ರಾನ್ ಮಲಿಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್ (ನಾಯಕ), ಟಿ.ನಟರಾಜನ್, ಫಜಲ್‌ಹಕ್ ಫಾರೂಕಿ.

    First published: