ಪ್ಲೇಆಫ್‌ಗಳ ಓಟದಲ್ಲಿ ಜೀವಂತವಾಗಿರಲು ಎರಡೂ ತಂಡಗಳಿಗೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ (SRH vs LSG) ಹೋರಾಡಲು ಸಜ್ಜಾಗಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ದು, ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬೌಲಿಂಗ್ ಮಾಡಲಿದ್ದು, ಉಭಯ ತಂಡಗಳಿಗೆ ಈ ಗೆಲುವು ಪ್ರಮುಖವಾಗಲಿದೆ. ಪ್ಲೇಆಫ್ಗಾಗಿ ಈ ಪಂದ್ಯ ಉಭಯ ತಂಡಗಳಿಗೆ ಮಾತ್ರವಲ್ಲದೇ ಆರ್ಸಿಬಿ ತಂಡಕ್ಕೂ ಹೆಚ್ಚು ಪ್ರಮುಖವಾಗಿದೆ.
ಪಿಚ್ ವರದಿ:
ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿಕೆಟ್ ಸಾಕಷ್ಟು ಒಣಗಿದಂತೆ ಕಾಣುತ್ತಿದೆ. ಅದು ಸಮತಟ್ಟಾಗಿದೆ ಮತ್ತು ಗಟ್ಟಿಯಾಗಿದೆ ಮತ್ತು ಹೆಚ್ಚು ಚಲನೆ ಇರುವುದಿಲ್ಲ. ಸುಮಾರು 170-180 ರನ್‌ಗಳನ್ನು ಸುಲಭವಾಗಿ ಗಳಿಸಬಹುದಾದ ಪಿಚ್‌ನಂತೆ ಕಾಣುತ್ತದೆ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
A vital game coming up for both the sides 💪🏻
Who will make it count in Hyderabad? 🤔
Follow the match ▶️ https://t.co/CPUJyBdGYU #TATAIPL | #SRHvLSG pic.twitter.com/2isZeuyt3I
— IndianPremierLeague (@IPL) May 13, 2023
ಏಡೆನ್ ಮಾರ್ಕ್ರಾಮ್ ನೇತೃತ್ವದ ಸನ್‌ರೈಸರ್ಸ್ ಇನ್ನೂ 4 ಪಂದ್ಯಗಳನ್ನು ಬಾಕಿ ಉಳಿಸಿಕೊಂಡಿದೆ. ಹೂದರಾಬಾದ್ ಪ್ರಸ್ತುತ 10 ಪಂದ್ಯಗಳಿಂದ 8 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಲಕ್ನೋ ಐದು ಪಂದ್ಯಗಳಲ್ಲಿ 11 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ, ಉಳಿದ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇತ್ತ ಆರ್ಸಿಬಿ ಸಹ ಇಂದಿನ ಪಂದ್ಯದಲ್ಲಿ ಲಕ್ನೋ ತಂಡದ ಸೋಲಿಗಾಗಿ ಪ್ರಾರ್ಥಿಸುತ್ತಿದೆ. ಏಕೆಂದರೆ ಲಕ್ನೋ ಗೆದ್ದಲ್ಲಿ 13 ಅಂಕ ಪಡೆಯುತ್ತದೆ. ಇತ್ತ ಆರ್ಸಿಬಿ 10 ಅಂಕಗಳಿದ್ದು, 6ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Team India: ವಿಶ್ವಕಪ್ನಿಂದ ರಾಹುಲ್-ರೋಹಿತ್ ಔಟ್? ಮಹತ್ವದ ನಿರ್ದಾರಕ್ಕೆ ಮುಂದಾದ ಬಿಸಿಸಿಐ
ಟಾಸ್ ಬಳಿಕ ನಾಯಕರ ಮಾತು:
ಟಾಸ್‌ನಲ್ಲಿ ಕುರ್ನಾಲ್ ಪಾಂಡ್ಯ ಮಾತನಾಡಿದ್ದು, ನಾವು ಮೊದಲು ಬ್ಯಾಟಿಂಗ್ ಮಾಡಬೇಕಿತ್ತು. ಆದರೆ ಬೌಲಿಂಗ್ ಪರವಾಗಿಲ್ಲ ಮಾಡುತ್ತೇವೆ. ಇದು ನಮಗೆ ಏರಿಳಿತದ ಋತುವಾಗಿದೆ. ನಾವು ಇಂದು ಉತ್ತಮ ಆಡ ಬೇಕಿದೆ. ವಿಕೆಟ್ ಚೆನ್ನಾಗಿ ಕಾಣುತ್ತದೆ. ನಮ್ಮಲ್ಲಿ ಒಂದೆರಡು ಬದಲಾವಣೆಗಳಿವೆ. ಪ್ರೇರಕ್ ಮತ್ತು ಯುಧ್ವಿರ್ ಹೂಡಾ ಮತ್ತು ಮೊಹ್ಸಿನ್‌ಗೆ ಸೇರಿದ್ದಾರೆ ಎಂದು ಎಲ್‌ಎಸ್‌ಜಿ ನಾಯಕ ಕೃನಾಲ್ ಪಾಂಡ್ಯ ಹೇಳಿದರು. ಐಡೆನ್ ಮಾರ್ಕ್‌ರಾಮ್ ಮಾತನಾಡಿದ್ದು, ನಾವು ಮೊದಲು ಬ್ಯಾಟ್ ಮಾಡಲಿದ್ದೇವೆ, ಉತ್ತಮ ವಿಕೆಟ್ ತೋರುತ್ತಿದೆ. ನಮ್ಮಲ್ಲಿ ಬ್ಯಾಟಿಂಗ್ ಆಲ್‌ರೌಂಡರ್ (ಸನ್ವೀರ್ ಸಿಂಗ್) ಇದ್ದಾರೆ - ಅವರು ನಮಗಾಗಿ ಇಂದು ಕಣಕ್ಕಿಳಿಯುತ್ತಿದ್ದಾರೆ.
ಹೈದರಾಬಾದ್- ಲಕ್ನೋ ಪ್ಲೇಯಿಂಗ್ 11:
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಅನ್ಮೋಲ್‌ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ಸಿ), ಹೆನ್ರಿಚ್ ಕ್ಲಾಸೆನ್(ಡಬ್ಲ್ಯೂ), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಟಿ ನಟರಾಜನ್, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ.
ಲಕ್ನೋ ಸೂಪರ್ ಜೈಂಟ್ಸ್ ಆಡುವ 11: ಕ್ವಿಂಟನ್ ಡಿ ಕಾಕ್(ಡಬ್ಲ್ಯೂ), ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ(ಸಿ), ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್, ಅಮಿತ್ ಮಿಶ್ರಾ, ಯಶ್ ಠಾಕೂರ್, ರವಿ ಬಿಷ್ಣೋಯ್, ಯುದ್ವೀರ್ ಸಿಂಗ್ ಚರಕ್, ಅವೇಶ್ ಖಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ