Sreesanth on Spot Fixing: ಕೊನೆಗೂ ಸ್ಪಾಟ್​​ ಫಿಕ್ಸಿಂಗ್ ಬಗ್ಗೆ ಮೌನ ಮುರಿದ ಶ್ರೀಶಾಂತ್.. ಅಂದು ಆಗಿದ್ದೇನು?

ನಾನು ಕೇವಲ 10 ಲಕ್ಷ ರೂಪಾಯಿಗೆ ಈ ರೀತಿಯ ಕೆಲಸ ಮಾಡುತ್ತೇನಾ ಎಂದು ಶ್ರೀಶಾಂತ್ ಪ್ರಶ್ನೆ ಮಾಡಿದ್ದಾರೆ.ಸಾಮಾನ್ಯವಾಗಿ ಹೋಟೆಲಿನಲ್ಲಿ ಗೆಳೆಯರ ಜೊತೆ ಪಾರ್ಟಿ ಮಾಡಿದ ಸಂದರ್ಭದಲ್ಲಿ 2 ರಿಂದ 3 ಲಕ್ಷ ಬಿಲ್ ಪಾವತಿಸಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದರು.

ಶ್ರೀಶಾಂತ್​

ಶ್ರೀಶಾಂತ್​

 • Share this:
  ನವದೆಹಲಿ: 2013ರ ಸ್ಪಾಟ್ ಫಿಕ್ಸಿಂಗ್ (IPL spot-fixing) ಕುರಿತು ಕ್ರಿಕೆಟ್ ವೇಗಿ ಶ್ರೀಶಾಂತ್ (Sreesanth) ಬಹು ದಿನಗಳ ಬಳಿಕ ಮೌನ ಮುರಿದಿದ್ದಾರೆ. ನಾನು ಕೇವಲ 10 ಲಕ್ಷ ರೂಪಾಯಿಗೆ ಈ ರೀತಿಯ ಕೆಲಸ ಮಾಡುತ್ತೇನಾ ಎಂದು ಶ್ರೀಶಾಂತ್ ಪ್ರಶ್ನೆ ಮಾಡಿದ್ದಾರೆ. ಆಂಗ್ಲ ಕ್ರೀಡಾ ವೆಬ್‍ಸೈಟ್ ಜೊತೆ ಮಾತನಾಡಿರುವ ಶ್ರೀಶಾಂತ್ ತಮ್ಮ ಕ್ರೀಡಾ ಜೀವನದ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾನು ಗೆಳೆಯರ ಜೊತೆ ಪಾರ್ಟಿ ಮಾಡಿದ್ರೆ ಹೋಟೆಲ್ ಬಿಲ್ ಎರಡರಿಂದ ಮೂರು ಲಕ್ಷ  ರೂ.ಗಳಷ್ಟು ಆಗುತ್ತದೆ ಎಂದು ಹೇಳಿದರು. ಈ ದಿನಗಳಲ್ಲಿ ಅಸಹಾಯಕರಿಗೆ ಸಹಾಯ ಮಾಡುತ್ತೇನೆ. ಅವರೆಲ್ಲರ ಆಶೀರ್ವಾದದಿಂದ ಇದರಿಂದ ಹೊರ ಬಂದಿದ್ದೇನೆ ಎಂದರು.

  ಕಾಲಿಗೆ 12 ಸರ್ಜರಿ ಆದ್ರೂ ವೇಗ ಕಡಿಮೆಯಾಗಿಲ್ಲ

  ಸಂದರ್ಶನದಲ್ಲಿ ಮಾತನಾಡಿರುವ ಶ್ರೀಶಾಂತ್, ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಲು ಸಿಕ್ಕ ಮೊದಲ ಅವಕಾಶ ಇದಾಗಿದೆ. ಅಂದು ಆರು ಎಸೆತಗಳಲ್ಲಿ ಅಂದ್ರೆ ಓವರ್ ನಲ್ಲಿ 14ಕ್ಕೂ ಹೆಚ್ಚು ರನ್ ಬೇಕಿತ್ತು. ಮೊದಲ ನಾಲ್ಕು ಎಸೆತದಲ್ಲಿ ಕೇವಲ 5 ರನ್ ನೀಡಿದೆ. ಈ ಸಮಯದಲ್ಲಿ ಯಾವುದೇ ನೋ ಬಾಲ್ ಅಥವಾ ವೈಡ್  ಎಸೆದಿರಲಿಲ್ಲ. ಅಲ್ಲಿ ನಾನು ನಿಧಾನಗತಿಯಲ್ಲಿಯೂ ಬೌಲಿಂಗ್ ಮಾಡಿರಲಿಲ್ಲ. ಕಾಲಿನಲ್ಲಿ 12 ಸರ್ಜರಿ ಆಗಿದ್ರೂ, ಪ್ರತಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿಯೇ ನನ್ನ ಬಾಲ್ ಹೋಗುತ್ತಿತ್ತು.

  ಹೋಟೆಲ್​ನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ

  ಆ ಸಮಯದಲ್ಲಿ ಇರಾನಿ ಟ್ರೋಫಿನ ಆಟ ಆಡಿದ್ದ ನಾನು, ಆಫ್ರಿಕಾ ಜೊತೆಗಿನ ಸರಣಿಗಾಗಿ ಸಿದ್ಧತೆ ನಡೆಸುತ್ತಿದ್ದೆ. 2013ರ ಸೆಪ್ಟೆಂಬರ್ ನಲ್ಲಿ ಸರಣಿ ನಡೆಯುತ್ತಿತ್ತು. ಆ ಸರಣಿಯಲ್ಲಿ ಭಾಗಿಯಾಬೇಕೆಂಬ ಆಸೆಯಿಂದಾಗಿ ಎಲ್ಲ ರೀತಿಯಲ್ಲೂ ಪ್ರಯತ್ನ ನಡೆಸುತ್ತಿದೆ. ದೊಡ್ಡ ಮಾತುಗಳನ್ನಾಡುತ್ತಿದ್ದೇನೆಂದು ತಿಳಿದುಕೊಳ್ಳಬೇಡಿ. ಸಾಮಾನ್ಯವಾಗಿ ಹೋಟೆಲಿನಲ್ಲಿ ಗೆಳೆಯರ ಜೊತೆ ಪಾರ್ಟಿ ಮಾಡಿದ ಸಂದರ್ಭದಲ್ಲಿ 2 ರಿಂದ 3 ಲಕ್ಷ ಬಿಲ್ ಪಾವತಿಸಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದರು.

  ಇದನ್ನೂ ಓದಿ: ABD - Virat Kohli: ವಿರಾಟ್ ಹರ್ಷೋದ್ಗಾರದ ಭಂಗಿಗಳನ್ನು ತಮ್ಮದೇ ಶೈಲಿಯಲ್ಲಿ ಅನುಕರಿಸಿದ ಎಬಿಡಿ; ನಗೆಗಡಲಲ್ಲಿ ತೇಲಾಡಿದ ತಂಡ

  ಸಂಕಷ್ಟದ ಸಮಯದಲ್ಲಿ ನನ್ನೊಂದಿಗೆ ನಿಂತ ಕುಟುಂಬಸ್ಥರು, ಗೆಳಯರು ಹಾಗೂ ಆಪ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ಬ್ಯಾನ್ ಸಮಯದಲ್ಲಿ ನನ್ನನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೆ. ನನ್ನ ಶಕ್ತಿಯನುಸಾರವಾಗಿ ಸಹಾಯ ಹಸ್ತ ಚಾಚಿದ್ದೇನೆ. ಇಂದು ಅವರೆಲ್ಲ ಆಶೀರ್ವಾದ, ಹಾರೈಕೆ ಮತ್ತು ಪ್ರಾರ್ಥನೆಯಿಂದ ಮತ್ತೆ ಮರಳಿ ಬಂದಿದ್ದೇನೆ ಎಂದು ತಿಳಿಸಿದರು.

  2013ರ ಸ್ಪಾಟ್ ಫಿಕ್ಸಿಂಗ್

  2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೆಲ ಆಟಗಾರರ ಹೆಸರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಕೇಳಿ ಬಂದಿತ್ತು. ಸ್ಪಾಟ್ ಫಿಕ್ಸಿಂಗ್ ಹೆಸರು ಕೇಳಿ ಬರುತ್ತಿದ್ದಂತೆ ಭಾರತದ ಕ್ರೀಡಾಲೋಕ ಅಕ್ಷರಶಃ ಬೆಚ್ಚಿಬಿದ್ದಿತ್ತು. ಈ ಹೆಸರುಗಳಲ್ಲಿ ಕೇರಳ ಮೂಲದ ಶ್ರೀಶಾಂತ್ ಹೆಸರು ಹೆಚ್ಚು ಚರ್ಚೆಗೆ ಒಳಪಟ್ಟಿತ್ತು. ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶ್ರೀಶಾಂತ್ ಆಟದ ಮೇಲೆ ನಿರ್ಬಂಧ ಹಾಕಲಾಯ್ತು. ಬಿಸಿಸಿಐ ನಿರ್ಬಂಧ ಹಿಂಪಡೆದ ಹಿನ್ನೆಲೆ ಶ್ರೀಶಾಂತ್ ಮತ್ತೆ ಮೈದಾನಕ್ಕಿಳಿದಿದ್ದಾರೆ. ಕೇರಳದ ಪ್ರತಿನಿಧಿಸುತ್ತಿರುವ ಶ್ರೀಶಾಂತ್ ದೇಶಿ ಟೂರ್ನಾಮೆಂಟ್ ಗಳಲ್ಲಿ ಆಡುತ್ತಿದ್ದಾರೆ. ಸೈಯದ್ ಮುಸ್ತಾಖ್ ಅಲಿ ಟೂರ್ನಮೆಂಟ್ ಮೂಲಕ ಶ್ರೀಶಾಂತ್ ಕಮ್ ಬ್ಯಾಕ್ ಮಾಡಿದ್ದಾರೆ.

  ವರದಿ: ಮೊಹ್ಮದ್​​ ರಫೀಕ್​ ಕೆ 
  Published by:Kavya V
  First published: