HOME » NEWS » Sports » SPORTS MINISTER KIREN RIJIJU LAUNCHES INDIAS OLYMPIC THEME SONG ZP

#Cheer4India: ಭಾರತದ ಒಲಿಂಪಿಕ್ಸ್ ಸಾಂಗ್ ಬಿಡುಗಡೆ

ಟೋಕಿಯೊ ಒಲಿಂಪಿಕ್ಸ್‌ಗಾಗಿ ತೆರಳುವ ಭಾರತೀಯ ಕ್ರೀಡಾಪಟುಗಳನ್ನು ಇಡೀ ಭಾರತ ಬೆಂಬಲಿಸಿ ಮತ್ತು ಪ್ರೇರೇಪಿಸಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ.

news18-kannada
Updated:June 25, 2021, 2:41 PM IST
#Cheer4India: ಭಾರತದ ಒಲಿಂಪಿಕ್ಸ್ ಸಾಂಗ್ ಬಿಡುಗಡೆ
Olympics
  • Share this:
ಜಪಾನ್​ನಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಶನ್‌ ಆಶಯ ಗೀತೆಯನ್ನು (ಥೀಮ್‌ ಸಾಂಗ್‌) ಬಿಡುಗಡೆಗೊಳಿಸಿದೆ. ಲಕ್ಷ್ ತೇರಾ ಸಾಮ್ನೆ ಹೈ (ಗುರಿ ನಿನ್ನ ಮುಂದಿದೆ...) ಎಂಬ ಧ್ಯೇಯ ವಾಕ್ಯ ಹೊಂದಿರುವ ಈ ಹಾಡಿನ ಮೂಲಕ ಭಾರತೀ ಕ್ರೀಡಾಪಟುಗಳನ್ನು ಹುರಿದುಂಬಿಸುವಂತೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್‌ ರಿಜಿಜು ಮನವಿ ಮಾಡಿದ್ದಾರೆ.

ತು ಥಾನ್‌ಲೇ ಜೀತ್‌ ಕೊ ಅಂಜಾಮ್‌ ದೇ…(ದೃಢವಾಗಿ ನಿಶ್ಚಯದೊಂದಿಗೆ ವಿಜಯಿಶಾಲಿಯಾಗಿ..) ಎಂಬ ಸಾಹಿತ್ಯ ಹೊಂದಿರುವ ಈ ಗೀತೆಯಲ್ಲಿ ನೀರಜ್‌ ಚೋಪ್ರಾ, ಮಣಿಕಾ ಬಾತ್ರಾ, ಮೇರಿ ಕೋಮ್ ಮೊದಲಾದ ಕ್ರೀಡಾಪಟುಗಳು ಕಾಣಿಸಿಕೊಂಡಿರುವುದು ವಿಶೇಷ. ಅಲ್ಲದೆ ಈ ಗೀತೆಯ ಲೋಕಾರ್ಪಣೆ ವೇಳೆ #Cheer4India ಅಭಿಯಾನಕ್ಕೆ ಕ್ರೀಡಾಸಚಿವರು ಚಾಲನೆ ನೀಡಲಾಗಿದೆ.

Youtube Video


ಈ ಥೀಮ್​ ಸಾಂಗ್​ಗೆ ಖ್ಯಾತ ಹಿನ್ನಲೆ ಗಾಯಕ ಮೋಹಿತ್ ಚೌಹಾಣ್ ರಾಗ ಸಂಯೋಜಿಸಿ ಧ್ವನಿ ನೀಡಿದ್ದಾರೆ. ಅಲ್ಲದೆ ಅವರ ಪತ್ನಿ ಶ್ರೀಮತಿ ಪ್ರತ್ನಾ ಗಹಿಲೋಟೆ ಅವರು ಈ ಗೀತೆಗೆ ಸಾಹಿತ್ಯ ಬರೆದಿದ್ದಾರೆ. ಹಾಡಿನ ಲೋಕಾರ್ಪಣೆ ವೇಳೆ ಮಾತನಾಡಿದ ಕ್ರೀಡಾ ಸಚಿವ ಕಿರಣ್ ರಿಜಿಜು "ಟೋಕಿಯೊ ಒಲಿಂಪಿಕ್ಸ್‌ಗಾಗಿ ತೆರಳುವ ಭಾರತೀಯ ಕ್ರೀಡಾಪಟುಗಳನ್ನು ಇಡೀ ಭಾರತ ಬೆಂಬಲಿಸಿ ಮತ್ತು ಪ್ರೇರೇಪಿಸಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಇದೇ ನಿಟ್ಟಿನಲ್ಲಿ ಈ ಗೀತೆಯ ಮೂಲಕ ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಥೀಮ್ ಸಾಂಗ್ ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಿಗೂ ಉತ್ಸಾಹವನ್ನು ತುಂಬುತ್ತದೆ. ಅವರನ್ನು ಹುರಿದುಂಬಿಸುವ ಮೂಲಕ ಪ್ರತಿಯೊಬ್ಬ ಭಾರತೀಯರೂ #Cheer4India ಅಭಿಮಾನದಲ್ಲಿ ಪಾಲ್ಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಕ್ರೀಡಾ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.
Published by: zahir
First published: June 25, 2021, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories