News18 India World Cup 2019

'ಇಂಗ್ಲೆಂಡ್​​ನಲ್ಲಿರುವ 11 ಮಂದಿ ಭಾರತೀಯರನ್ನು ರಕ್ಷಿಸಿ'; ಟೀಂ ಇಂಡಿಯಾ ಸೋಲಿಗೆ ಟ್ವಿಟ್ಟರಿಗರ ಕಿಡಿ

news18
Updated:August 13, 2018, 4:27 PM IST
'ಇಂಗ್ಲೆಂಡ್​​ನಲ್ಲಿರುವ 11 ಮಂದಿ ಭಾರತೀಯರನ್ನು ರಕ್ಷಿಸಿ'; ಟೀಂ ಇಂಡಿಯಾ ಸೋಲಿಗೆ ಟ್ವಿಟ್ಟರಿಗರ ಕಿಡಿ
news18
Updated: August 13, 2018, 4:27 PM IST
ನ್ಯೂಸ್ 18 ಕನ್ನಡ

ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ.

ಇಂಗ್ಲೆಂಡ್ ಸ್ವಿಂಗ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋದ ಭಾರತ, ಆಂಗ್ಲರ  ವಿರುದ್ಧ ಇನ್ನಿಂಗ್ಸ್ ಸೋಲು ಕಂಡು ಮುಖಭಂಗ ಅನುಭವಿಸಿದೆ. ಮತ್ತೊಮ್ಮೆ ಭಾರತದ  ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದಾಗಿ ಕೊಹ್ಲಿ ಪಡೆ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 130 ರನ್​ಗಳಿಗೆ ಆಲೌಟ್ ಆಯಿತು. ಹೀಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಧೂಳೀಪಟ ಮಾಡಿದ ಇಂಗ್ಲೆಂಡ್ 2ನೇ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸಿ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಭಾರತದ ಕಳಪೆ ಪ್ರದರ್ಶನಕ್ಕೆ ಟ್ವಿಟರ್​ನಲ್ಲಿ ಕ್ರೀಡಾಭಿಮಾನಿಗಳು ಹರಿಯಾಯ್ದಿದ್ದಾರೆ.

'ದಯವಿಟ್ಟು ಇಂಗ್ಲೆಂಡ್​​ನಲ್ಲಿರುವ 11 ಮಂದಿ ಭಾರತೀಯರನ್ನು ರಕ್ಷಿಸಿ' ಎಂದು ಸಚಿವೆ ಸುಷ್ಮಾ ಸ್ವರಾಜ್​​ ಅವರಿಗೆ ಪ್ರಶಾಂತ್ ಸಿಂಗ್ ಎಂಬವರು ಮನವಿಮಾಡಿ ಟ್ವೀಟ್ ಮಾಡಿದ್ದಾರೆ.

 ಇನ್ನು ಕಾಮಿಡಿಯನ್ ಪ್ರವೀಣ್ ಎಂಬವರು, 'ನಿಮಗೆ ಧೈರ್ಯವಿದ್ದರೆ ಉಳಿದ ಮೂರು ಟೆಸ್ಟ್ ಪಂದ್ಯಗಳನ್ನು ಭಾರತಕ್ಕೆ ಬಂದು ಆಡಿ' ಎಂದು ಸವಾಲ್ ಹಾಕಿ ವ್ಯಂಗಮಾಡಿದ್ದಾರೆ.

 'ಈ ಹಿಂದೆ ಟೀಂ ಇಂಡಿಯಾ ಸೋತಿತು ಎಂದಾದರೆ ಅದಕ್ಕೆ ಕಾರಣ ಎಂ . ಎಸ್. ಧೋನಿ ಎಂದು ದೂರಲಾಗುತ್ತಿತ್ತು. ಆದರೆ ಧೋನಿ ಈಗ ತಂಡದಲ್ಲಿಲ್ಲ, ಯಾರನ್ನು ದೂರುವುದು ಎಂದು ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ' ಹೀಗೆಂದು ಜಿತೇಂದ್ರ ಎಂಬವರು ಟ್ವೀಟ್ ಮಾಡಿದ್ದಾರೆ.

   

First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...