ಸೆಂಚೂರಿಯನ್ನಲ್ಲಿ 2ನೇ ದಿನ ಭಾರತದ ಮಾನ ಕಾಪಾಡಿದ ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಕೂಡ ಕುತೂಹಲದ ಅಂತ್ಯ ಕಾಣುವ ನಿರೀಕ್ಷೆ ಹುಟ್ಟಿದೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಮೊದಲ ಇನ್ನಿಂಗ್ಸ್ 335 ರನ್​ಗೆ ಅಂತ್ಯಗೊಂಡಿದೆ. ನಿನ್ನೆ 269 ರನ್​ಗೆ 6 ವಿಕೆಟ್ ಕಳೆದುಕೊಂಡಿದ್ದ ಹರಿಣಗಳ ಪಡೆ ಇಂದು ಹೆಚ್ಚು ರನ್ ಸೇರಿಸಲಿಲ್ಲ. ಕೇಶವ್ ಮಹಾರಾಜ್ ಮತ್ತು ರಬಡ ಒಂದಷ್ಟು ರನ್ ಗಳಿಸಿ ತಂಡದ ಸ್ಕೋರನ್ನು 335 ರನ್​ಗೆ ಉಬ್ಬಿಸಿದರು.

cricketnext
Updated:January 14, 2018, 9:31 PM IST
ಸೆಂಚೂರಿಯನ್ನಲ್ಲಿ 2ನೇ ದಿನ ಭಾರತದ ಮಾನ ಕಾಪಾಡಿದ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ (AP photo)
cricketnext
Updated: January 14, 2018, 9:31 PM IST
ಸೆಂಚೂರಿಯನ್(ಜ. 14): ಭಾರತ ಮತ್ತು ದಕ್ಷಿಣ ಆಫ್ರಿಕಾದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 2ನೇ ದಿನವೂ ತುರುಸಿನ ಪೈಪೋಟಿ ಮುಂದುವರಿದಿದೆ. ದಕ್ಷಿಣ ಆಫ್ರಿಕಾವನ್ನು 335 ರನ್​ಗೆ ಆಲೌಟ್ ಮಾಡಿದ ಭಾರತ ತಂಡವು 2ನೇ ದಿನಾಂತ್ಯದಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದೆ. ವಿರಾಟ್ ಕೊಹ್ಲಿಯೊಬ್ಬರೇ ಅಜೇಯ 85 ರನ್ ಗಳಿಸಿ ಟೀಮ್ ಇಂಡಿಯಾಗೆ ಆಧಾರಸ್ತಂಭವಾಗಿದ್ದಾರೆ. ಕೊಹ್ಲಿ ಜೊತೆಗೆ ಹಾರ್ದಿಕ್ ಪಾಂಡ್ಯ ಕ್ರೀಸಿನಲ್ಲಿ ಉಳಿದುಕೊಂಡಿದ್ದಾರೆ. 3ನೇ ದಿನದಂದು ಈ ಇಬ್ಬರು ಆಟಗಾರರು ಎಷ್ಟು ಹೊತ್ತು ಕ್ರೀಸಿನಲ್ಲಿದ್ದು ರನ್ ಗಳಿಸುತ್ತಾರೆ ಎಂಬುದರ ಮೇಲೆ ಭಾರತದ ಪ್ರತಿರೋಧ ನಿಂತಿದೆ.

ನಿನ್ನೆ 269 ರನ್​ಗೆ 6 ವಿಕೆಟ್ ಕಳೆದುಕೊಂಡಿದ್ದ ಹರಿಣಗಳ ಪಡೆ ಇಂದು ಹೆಚ್ಚು ರನ್ ಸೇರಿಸಲಿಲ್ಲ. ಕೇಶವ್ ಮಹಾರಾಜ್ ಮತ್ತು ರಬಡ ಒಂದಷ್ಟು ರನ್ ಗಳಿಸಿ ತಂಡದ ಸ್ಕೋರನ್ನು 335 ರನ್​ಗೆ ಉಬ್ಬಿಸಿದರು. ಭಾರತದ ಪರ ಆರ್.ಅಶ್ವಿನ್ ಮತ್ತು ಇಶಾಂತ್ ಶರ್ಮಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಇಂದು ಬಿದ್ದ 4 ವಿಕೆಟ್ ಪೈಕಿ ಒಂದು ರನ್ನೌಟ್ ಆದರೆ, ಶಮಿ, ಶರ್ಮಾ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಸಂಪಾದಿಸಿದರು. ಇದೇ ವೇಳೆ, ಮೊಹಮ್ಮದ್ ಶಮಿ 100ನೇ ಟೆಸ್ಟ್ ವಿಕೆಟ್ ಕಿತ್ತು ಸಂಭ್ರಮಿಸಿದರು.

ಬ್ಯಾಟಿಂಗ್ ಟ್ರ್ಯಾಕ್ ಎಂದು ಪರಿಗಣಿತವಾದರೂ ವಾಸ್ತವವಾಗಿ ರನ್ ಗಳಿಸಲು ಕಷ್ಟಸಾಧ್ಯವಿರುವ ಈ ಪಿಚ್​ನಲ್ಲಿ ಭಾರತದ ಬ್ಯಾಟುಗಾರರು ಹರಸಾಹ ನಡೆಸಿದರು. ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡಿದ ಕೆ.ಎಲ್.ರಾಹುಲ್ ನಿರಾಸೆ ಮಾಡಿದರು. ಚೇತೇಶ್ವರ್ ಪೂಜಾರ ಮತ್ತೊಮ್ಮೆ ವಿಫಲರಾದರು. 28 ರನ್ನಾಗುವಷ್ಟರಲ್ಲಿ 2 ವಿಕೆಟ್ ಬಿದ್ದಾಗ ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದವರು ಮುರಳಿ ವಿಜಯ್ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ 3ನೇ ವಿಕೆಟ್​ಗೆ 79 ರನ್ ಜೊತೆಯಾಟ ಆಡಿದರು. ಮುರಳಿ ವಿಜಯ್ ನಿರ್ಗಮನದ ಬಳಿಕ ರೋಹಿತ್ ಶರ್ಮಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಪಾರ್ಥಿವ್ ಪಟೇಲ್ 19 ರನ್ ಗಳಿಸಿ ಔಟಾದರು. ಆಗ ತಂಡದ ಸ್ಕೋರು 164 ರನ್. ಆಗಲೂ ಕೂಡ ಭಾರತದ್ದು ಸಂಕಷ್ಟದ ಸ್ಥಿತಿಯೇ. ವಿರಾಟ್ ಕೊಹ್ಲಿ ಜೊತೆಗೂಡಿದ ಮೊದಲ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯ ಮತ್ಯಾವುದೇ ಅವಘಡಕ್ಕೆ ಆಸ್ಪದ ಕೊಡಲಿಲ್ಲ. ಕೊಹ್ಲಿ ಅಜೇಯ 85 ರನ್ ಗಳಿಸಿದರೆ, ಪಾಂಡ್ಯ 11 ರನ್ ಗಳಿಸಿ ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 113.5 ಓವರ್ 335 ರನ್ ಆಲೌಟ್

(ಏಡನ್ ಮಾರ್ಕ್ರಂ 94, ಹಷೀಮ್ ಆಮ್ಲಾ 82, ಫ್ಯಾಫ್ ಡುಪ್ಲೆಸಿಸ್ 63, ಡೀನ್ ಎಲ್ಗಾರ್ 31, ಎಬಿ ಡೀವಿಲಿಯರ್ಸ್ 20 ರನ್ – ಆರ್.ಅಶ್ವಿನ್ 113/4, ಇಶಾಂತ್ ಶರ್ಮಾ 46/3)

ಭಾರತ ಮೊದಲ ಇನ್ನಿಂಗ್ಸ್ 61 ಓವರ್ 183/5
(ವಿರಾಟ್ ಕೊಹ್ಲಿ ಅಜೇಯ 85, ಮುರಳಿ ವಿಜಯ್ 46, ಪಾರ್ಥಿವ್ ಪಟೇಲ್ 19, ಹಾರ್ದಿಕ್ ಪಾಂಡ್ಯ ಅಜೇಯ 11 ರನ್)
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ