• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ಕ್ರಿಕೆಟ್​ ಫ್ಯಾನ್ಸ್​ಗೆ ಗುಡ್​ ನ್ಯೂಸ್; ಶೀಘ್ರದಲ್ಲಿಯೇ ಮಿನಿ IPL ಪ್ರಾರಂಭ, ಈ ಪಟ್ಟಿಯಲ್ಲಿ RCB ಇದ್ಯಾ?

ಕ್ರಿಕೆಟ್​ ಫ್ಯಾನ್ಸ್​ಗೆ ಗುಡ್​ ನ್ಯೂಸ್; ಶೀಘ್ರದಲ್ಲಿಯೇ ಮಿನಿ IPL ಪ್ರಾರಂಭ, ಈ ಪಟ್ಟಿಯಲ್ಲಿ RCB ಇದ್ಯಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಪಿಎಲ್ 2023 (IPL 2023) ಕ್ಕಿಂತ ಮೊದಲು ಮಿನಿ ಐಪಿಎಲ್ ನಡೆಯಲಿದೆ. ಈ ಪಂದ್ಯಾವಳಿಯು ಭಾರತದಲ್ಲಿ ಅಲ್ಲ ದಕ್ಷಿಣ ಆಫ್ರಿಕಾದಲ್ಲಿ (South Africa) ನಡೆಯಲಿದೆ.

  • Share this:

ಐಪಿಎಲ್ 2023 (IPL 2023) ಕ್ಕಿಂತ ಮೊದಲು ಮಿನಿ ಐಪಿಎಲ್ ನಡೆಯಲಿದೆ. ಈ ಪಂದ್ಯಾವಳಿಯು ಭಾರತದಲ್ಲಿ ಅಲ್ಲ ದಕ್ಷಿಣ ಆಫ್ರಿಕಾದಲ್ಲಿ (South Africa) ನಡೆಯಲಿದೆ. ಐಪಿಎಲ್‌ನಂತೆ ದಕ್ಷಿಣ ಆಫ್ರಿಕಾ ಕೂಡ ಟಿ20 ಲೀಗ್ ಆರಂಭಿಸಿದೆ. ಈ ಪಂದ್ಯಾವಳಿಯನ್ನು ಮಿನಿ ಐಪಿಎಲ್ ಎಂದು ಕರೆಯಲಾಗುತ್ತದೆ ಏಕೆಂದರೆ ಈ ಲೀಗ್‌ನಲ್ಲಿ ಆಡುವ 6 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಖರೀದಿಸುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ (MI), ಚೆನ್ನೈ ಸೂಪರ್ ಕಿಂಗ್ಸ್ (CSK), ಡೆಲ್ಲಿ ಕ್ಯಾಪಿಟಲ್ಸ್ (DC), ಸನ್‌ರೈಸರ್ಸ್ ಹೈದರಾಬಾದ್ (SRH), ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ರಾಜಸ್ಥಾನ್ ರಾಯಲ್ಸ್ (RR) ದಕ್ಷಿಣ ಆಫ್ರಿಕಾದ ಟಿ 20 ಲೀಗ್‌ನಲ್ಲಿ ಮಾಲೀಕತ್ವದ ಹಕ್ಕುಗಳನ್ನು ಪಡೆದುಕೊಂಡಿವೆ. ಈ ಪಂದ್ಯವನ್ನು ಮುಂದಿನ ವರ್ಷದ ಜನವರಿಯಲ್ಲಿ ಆಯೋಜಿಸಲಾಗುವುದು.


ಮಿನಿ ಐಪಿಎಲ್ ಗೆ ಸಿದ್ಧತೆ:


Cricbuzz ನ ವರದಿಯ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾದ T20 ಲೀಗ್‌ಗಾಗಿ ವಿವಿಧ IPL ಫ್ರಾಂಚೈಸಿಗಳಾದ 6 ತಂಡಗಳನ್ನು ಖರೀದಿಸಿವೆ ಎಂದು ವರದಿಯಾಗಿದೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ತಂಡದ ಖರೀದಿದಾರರನ್ನು ಸಂಘಟಕರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ ಎಂದು ತಿಳಿದುಬಂದಿದೆ.


ಯಾವ ತಂಡಕ್ಕೆ ಯಾವ ಹೆಸರು?:


ಫ್ರ್ಯಾಂಚೈಸಿಗಳನ್ನು ಈ ತಿಂಗಳ ಕೊನೆಯಲ್ಲಿ ಘೋಷಿಸಬಹುದು. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವನ್ನು ಮುಂಬೈ ಇಂಡಿಯನ್ಸ್‌ಗೆ ಕೇಪ್‌ಟೌನ್, ಚೆನ್ನೈ ಸೂಪರ್ ಕಿಂಗ್ಸ್‌ಗೆ ಜೋಹಾನ್ಸ್‌ಬರ್ಗ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೆಂಚುರಿಯನ್ ಎಂದು ಹೆಸರಿಸಲಾಗುವುದು ಎಂಬ ಮಾಹಿತಿ ಇದೆ. ಐಪಿಎಲ್ 2022 ರಲ್ಲಿ ಪಾದಾರ್ಪಣೆ ಮಾಡಲಿರುವ ಲಕ್ನೋ, ಡರ್ಬನ್ ಫ್ರಾಂಚೈಸಿಗಾಗಿ ಉತ್ಸುಕವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಪೋರ್ಟ್ ಎಲಿಜಬೆತ್ ತಂಡದಲ್ಲಿ ಆಸಕ್ತಿ ಹೊಂದಿದೆ.


ಇದನ್ನೂ ಓದಿ: Reliance Industries: ದಕ್ಷಿಣ ಆಫ್ರಿಕಾ T20 ಕ್ರಿಕೆಟ್‌ ಲೀಗ್‌ನಲ್ಲಿ ಫ್ರಾಂಚೈಸಿ ಖರೀದಿ ಮಾಡಿದ ರಿಲಯನ್ಸ್ ಇಂಡಸ್ಟ್ರೀಸ್‌!


ಮುಂಬೈ-ಚೆನ್ನೈ ಅತಿ ಹೆಚ್ಚು ಬಿಡ್:


ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಖರೀದಿಸಲು ಸುಮಾರು 250 ಕೋಟಿ ರೂ. ಐಪಿಎಲ್ ಮಾದರಿಯ ಪ್ರಕಾರ, ಪ್ರತಿ ತಂಡವು 10 ವರ್ಷಗಳವರೆಗೆ ಫ್ರಾಂಚೈಸಿ ಶುಲ್ಕದ 10 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ.


ಬಿಡ್ಡಿಂಗ್​ ನಲ್ಲಿ ಭಾಗವಹಿಸದ  RCB?:


ಇನ್ನು, ಈ ಮಿನಿ ಐಪಿಎಲ್ ನಲ್ಲಿ ಆರ್​ಸಿಬಿ ತಂಡವು ಭಾಗವಹಿಸುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಆರ್​ಸಿಬಿ ಬಿಡ್ಡಿಂಗ್​ ನಲ್ಲಿ ಭಾಗವಹಿಸಲಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.


ಇದನ್ನೂ ಓದಿ: IND vs ENG: ಪಂತ್​ ಆರ್ಭಟಕ್ಕೆ ನಲುಗಿದ ಆಂಗ್ಲರು, ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ


ಹೇಗಿರಲಿದೆ ಮಿನಿ ಐಪಿಎಲ್:


ಕ್ರಿಕೆಟ್ ಸೌತ್‌ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ ಎಂದು ಕ್ರಿಕೆಟ್ ಸೌತ್‌ ಆಫ್ರಿಕಾ ಮಾಹಿತಿ ನೀಡದೆ. ಆದರೆ ಉಳಿದಂತೆ ಪಂದ್ಯ ಆರಂಭ ಯಾವಾಗ, ಯಾವ ಚಾನಲ್​ ನಲ್ಲಿ ಪ್ರಸಾರವಾಗಲಿದೆ ಎನ್ನುವ ಯಾವ ಮಾಹಿತಿಯೂ ಲಭ್ಯವಾಗಿಲ್ಲ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು