Sourav Ganguly: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ? ಪೊಲಿಟಿಕ್ಸ್​ಗೆ ಎಂಟ್ರಿ ಕೊಡ್ತಾರಾ ದಾದಾ?

ಐಪಿಎಲ್ 2022ರ 15ನೇ ಸೀಸನ್ ಮುಗಿಯುತ್ತಿದ್ದಂತೆ ಸೌರವ್ ಗಂಗೂಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ. ಗಂಗೂಲಿ ಮಾಡಿರುವ ಟ್ವೀಟ್ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸೌರವ್ ಗಂಗೂಲಿ

ಸೌರವ್ ಗಂಗೂಲಿ

 • Share this:
  ಐಪಿಎಲ್ 2022ರ 15ನೇ ಸೀಸನ್ ಮುಗಿಯುತ್ತಿದ್ದಂತೆ ಸೌರವ್ ಗಂಗೂಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ. ಗಂಗೂಲಿ ಮಾಡಿರುವ ಟ್ವೀಟ್ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೌದು, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸೂಚನೆ ನೀಡಿದ್ದು, ಇನ್ನು ಅಧಿಕೃತವಾಗಿ ರಾಜೀನಾಮೆ ಕೊಡುವುದೊದಮೆ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಗಂಗೂಲಿ ಯಾವುದೇ ಪ್ರತಿಕ್ರೀಯೆ ಈವರೆಗೂ ನೀಡಿಲ್ಲ. ಒಮ್ಮೆ ಏನಾದರೂ ರಾಜೀನಾಮೆ ನೀಡಿದ್ದಲ್ಲಿ ಬಿಸಿಸಿಐನ ನೂತನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಗಂಗೂಲಿ ಅವರು 2019 ರ ಅಕ್ಟೋಬರ್‌ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಅವರು ಬಂಗಾಳ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದರು.

  ರಾಜೀನಾಮೆ ಸುಳಿವು ಕೊಟ್ರಾ ದಾದಾ?:

  ಇನ್ನು, ಟ್ವೀಟ್ ಮಾಡುವ ಮೂಲಕ ಬಿಸಿಸಿಐ ಗೆ ರಾಜೀನಾಮೆ ಕೋಡುವ ಸುಳಿವನ್ನು ಕೊಟ್ರಾ ದಾದಾ ಎಂಬ ಅನುಮಾನ ಮೂಡಿದ್ದು, ರಾಜಕೀಯಕ್ಕೆ ಪ್ರವೇಶಿಸುತ್ತಾರೋ ಎಂಬ ಅನುಮಾನಾ ವ್ಯಕ್ತವಾಗುತ್ತಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘1992ರಲ್ಲಿ ನನ್ನ ಕ್ರಿಕೆಟ್ ಪಯಣ ಆರಂಭಿಸಿದ್ದು 2022ಕ್ಕೆ 30 ವರ್ಷಗಳು ಪರೈಸಲಿದೆ. ಅಲ್ಲಿಂದ ಇಲ್ಲಿಯವರೆಗೆ ಕ್ರಿಕೆಟ್ ನನ್ನ ಜೀವನಕ್ಕೆ ತುಂಬಾ ನೀಡಿದೆ.

  ಅದ್ಕಕೂ ಹೆಚ್ಚಾಗಿ ನನಗೆ ನಿಮ್ಮೆಲ್ಲರ ಬೆಂಬಲ ದೊರಕಿದೆ. ಹೀಗಾಗಿ ಇನ್ನ ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು. ಇನ್ನು, ನಾನು ಇದೀಗ ಹೊಸದನ್ನು ಆರಂಭಿಸಲು ಯೋಚಿಸುತ್ತಿದ್ದೇನೆ. ಇದರಿಂದ ಬಹಳಷ್ಟು ಜನರಿಗೆ ಉಪಕಾರ ಮಾಡಲು ಬಯಸುತ್ತಿದ್ದೇನೆ. ಹೀಗಾಗಿ ಈ ನನ್ನ ಹೊಸ ಪಯಣದಲ್ಲಿ ನಿಮ್ಮೆಲ್ಲರ ಬೆಂಬಲ ಹೀಗೆ ಇರಲಿ‘ ಎಂದು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: MS Dhoni: ಧೋನಿ ವಿರುದ್ಧ FIR ದಾಖಲು, ಚೆಕ್ ಬೌನ್ಸ್ ಪ್ರಕರಣದಲ್ಲಿ ಕ್ಯಾಪ್ಟನ್ ಕೂಲ್

  ಗಂಗೂಲಿ ರಾಜೀನಾಮೆ ನೀಡಿಲ್ಲ:

  ಇನ್ನು, ಈಗಾಗಲೇ ಎಲ್ಲಡೆ ಗಂಗೂಲಿ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಎಲ್ಲಡೆ ಕೇಳುಬರುತ್ತಿದ್ದ ಬೆನ್ನಲ್ಲೇ ಇದಕ್ಕೆ ಬಿಸಿಸಿಐ ಮಂಡಳಿ ಕಾರ್ಯಾಧ್ಯಕ್ಷ ಜಯ್​ ಶಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಗಂಗೂಲಿ ಅವರು ಯಾವುದೇ ರಾಜೀನಾಮೆಯನ್ನೂ ನೀಡಿಲ್ಲ ಎಂದು ಶಾ ತಿಳಸಿರುವುದಾಗಿ ANI ಸುದ್ದಿ ಸಂಸ್ಥೆ ಟ್ವಿಟ್ರ್ ಮೂಲಕ ತಿಳಿಸಿದೆ.

  ಗಂಗೂಲಿ ಅಧಿಕಾರವಧಿ ಮುಗಯಿತಾ?:

  ಬಿಸಿಸಿಐನ ಹೊಸ ಸಂವಿಧಾನದ ಪ್ರಕಾರ, ರಾಜ್ಯ ಕ್ರಿಕೆಟ್ ಪ್ರಾಧಿಕಾರ ಅಥವಾ ಬಿಸಿಸಿಐನಲ್ಲಿ 6 ವರ್ಷಗಳ ಅಧಿಕಾರಾವಧಿಯ ನಂತರ ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿಗೆ ಹೋಗುವುದು ಕಡ್ಡಾಯವಾಗಿದೆ. ಗಂಗೂಲಿ ಮತ್ತು ಶಾ ಅಕ್ಟೋಬರ್ 2019 ರಲ್ಲಿ ಅಧಿಕಾರ ವಹಿಸಿಕೊಂಡರು. ಅದಕ್ಕೂ ಮೊದಲು ಗಂಗೂಲಿ ಪಶ್ಚಿಮ ಬಂಗಾಳದಲ್ಲಿ ಮತ್ತು ಜೈ ಶಾ ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

  ಅವರು ಬಿಸಿಸಿಐಗೆ ನೇಮಕಗೊಂಡಾಗ, ರಾಜ್ಯ ಮತ್ತು ರಾಷ್ಟ್ರೀಯ ಘಟಕಗಳಲ್ಲಿ 6 ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಅವರಿಗೆ ಕೇವಲ ಒಂಬತ್ತು ತಿಂಗಳು ಮಾತ್ರ ಉಳಿದಿತ್ತು. ಹೀಗಾಗಿ ಈ ಕುರಿತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. 9 ಆಗಸ್ಟ್ 2018 ರಿಂದ ಅನ್ವಯವಾಗುವ ಕೂಲಿಂಗ್ ಆಫ್ ಅವಧಿಯ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಪದಾಧಿಕಾರಿಗಳ ಅಧಿಕಾರಾವಧಿಯನ್ನು ವಿಸ್ತರಿಸುವ AGM ನ ನಿರ್ಧಾರದ ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಲಾತ್ತು.

  ಇದನ್ನೂ ಓದಿ: Sourav Ganguly: ಹೊಸ ಮನೆ ಖರೀದಿಸಿದ ಸೌರವ್ ಗಂಗೂಲಿ, 48 ವರ್ಷಗಳ ನಂತರ ವಿಳಾಸ ಬದಲಿಸಿದ ದಾದಾ

  ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ದಾದಾ?:

  ಇದರ ನಡುವೆ ಗಂಗೂಲಿ ಅವರು ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಹೌದು, ಕೆಲ ದಿನಗಳ ಹಿಂದೆ ಬಿಜೆಪಿ ಯ ಅಮಿತ್ ಶಾ ಹಾಗೂ ಗಂಗೂಲಿ ಅವರು ಭೇಟಿಯಾಗಿದ್ದರು. ಅಲ್ಲದೇ ಶಾ ಅವರನ್ನು ಭೊಜಕ್ಕೂ ಕರೆದಿದ್ದರು. ಇದು ಆ ವೇಳೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇದಕ್ಕೆ ಗಂಗೂಲಿ ಸ್ಪಷ್ಟನೆ ನೀಡಿದ್ದರು.
  Published by:shrikrishna bhat
  First published: