Sourav Ganguly: ಗಂಗೂಲಿ- ಜೈಯ್​ ಶಾ ಅಧಿಕಾರವಧಿ ವಿಸ್ತರಣೆ, ಮಹತ್ವದ ಆದೇಶ ನೀಡಿದ ಸುಪ್ರೀಂ ಕೋರ್ಟ್

BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI ) ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ಅಂತಿಮ ತೀರ್ಪುನ್ನು ನೀಡಿದೆ. ಈ ಮೂಲಕ ಸೌರವ್ ಗಂಗೂಲಿ (Sourav Ganguly) ಮತ್ತು ಜೈಯ್​ ಶಾ (Jay Shah) ಅವರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ. 

ಗಂಗೂಲಿ- ಜಯ್​ ಶಾ

ಗಂಗೂಲಿ- ಜಯ್​ ಶಾ

  • Share this:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI ) ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ಅಂತಿಮ ತೀರ್ಪುನ್ನು ನೀಡಿದೆ. ಈ ಮೂಲಕ ಸೌರವ್ ಗಂಗೂಲಿ (Sourav Ganguly) ಮತ್ತು ಜೈಯ್​ ಶಾ (Jay Shah) ಅವರಿಗೆ ಬಿಗ್​ ರಿಲೀಫ್​ ಸಿಕ್ಕಂತಾಗಿದೆ.  ಈ ಮೂಲಕ ಗಂಗೂಲಿ ಮತ್ತು ಜೈಯ್​ ಶಾ ಅಧಿಕಾರವಧಿ ವಿಸ್ತರಣೆ ಆಗಿದೆ. ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಯಲ್ಲಿರುವ ಅಧಿಕಾರಿಗಳ ಅವಧಿಗೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಬಿಸಿಸಿಐ ನ್ಯಾಯಾಲಯದ ಅನುಮತಿ ಕೋರಿತ್ತು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿದ ತೀರ್ಪಿನಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಯಲ್ಲಿರುವ ಅಧಿಕಾರಿಗಳ ಅವಧಿ ಮತ್ತು ಕೂಲಿಂಗ್-ಆಫ್ ಅವಧಿಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಲಿಸಿ, BCCI ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಳ್ಳಬಹುದೆಂದು ಇದೀಗ ಅಂತಿಮವಾಗಿ ತೀರ್ಪನ್ನು ನೀಡಿದೆ.

ಅಂತಿಮ ತೀರ್ಪು ನೀಡಿದ ಸುಪ್ರೀಂ:

ಹೌದು, ಕಳೆದ ಸುಮಾರು 3 ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿತ್ತು. ಆದರೆ ಇಂದು ಸುಪ್ರೀಂ ಅಂತಿಮ ತೀರ್ಪು ನೀಡಿದ್ದು, ಬಿಸಿಸಿಐ ಮನವಿಯನ್ನು ಸ್ವೀಕರಿಸಿದೆ. ಈ ಮೂಲಕ ಅಧಿಕಾರಾವಧಿಗೆ ಸಂಬಂಧಿಸಿದಂತೆ ಮಂಡಳಿಯು ಪ್ರಸ್ತಾಪಿಸಿದ ತಿದ್ದುಪಡಿಗಳಿಗೆ ಅನುಮತಿ ನೀಡಿದೆ. ಇದರಿಂದಾಗಿ ಗಂಗೂಲಿ ಮತ್ತು ಜಯ್​ ಶಾ ಅವರು ತಮ್ ತಮ್ಮ ಹುದ್ದೆಗಳಲ್ಲಿ ಇನ್ನೂ 3 ವರ್ಷಗಳ ಕಾಲ ಮುಂದುವರೆಯಲಿದ್ದಾರೆ.

ಏನಿದು ಪ್ರಕರಣ:

ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಸಂವಿಧಾನ ಬದಲಾವಣೆ ಮಾಡಲಾಗಿದೆ. ಆ ಸಮಯದಲ್ಲಿ, ಈ ಪ್ರಕರಣದ ಮೂಲ ಅರ್ಜಿದಾರ ಆದಿತ್ಯ ವರ್ಮಾ ಅವರು ಆರಂಭದಲ್ಲಿ ಈ ವಿಷಯವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದರು. ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಬಿಸಿಸಿಐ ಸಂವಿಧಾನದ ಪ್ರಕಾರ, ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಬಿಸಿಸಿಐನಲ್ಲಿ ತಲಾ ಮೂರು ವರ್ಷಗಳ ಕಾಲ ಹುದ್ದೆ ಹೊಂದಿರುವ ವ್ಯಕ್ತಿಗೆ ಮೂರು ವರ್ಷಗಳ ಕೂಲಿಂಗ್ ಅವಧಿ ಕಡ್ಡಾಯವಾಗಿದೆ.

ಇದನ್ನೂ ಓದಿ: MS Dhoni: ನನಗೆ ಅವಕಾಶಗಳು ದೊರಕದಿರಲು ಧೋನಿಯೇ ಕಾರಣ , ಕ್ಯಾಪ್ಟನ್​ ಕೂಲ್ ವಿರುದ್ಧ ಮಾಜಿ CSK ಆಟಗಾರನ ಗಂಭೀರ ಆರೋಪ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ದೃಷ್ಟಿಯಿಂದ ಈ ಮನವಿಯು ಮಹತ್ವದ್ದಾಗಿತ್ತು.  ಏತನ್ಮಧ್ಯೆ, ಈ ಹಿಂದೆ ಈ ಪ್ರಕರಣದ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್. ವಿ ರಾಮಣ್ಣ ಅವರ ಪೀಠದಲ್ಲಿದ್ದರು. ಆದರೆ ಈಗ ಅದನ್ನು ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ವಹಿಸಲಾಗಿತ್ತು.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಎಜುಕೇಷನ್​ ಏನು ಗೊತ್ತಾ? ಹಿಟ್​ಮ್ಯಾನ್​ಗೂ ಸೌತ್​ಗೂ ಇದೆ ನಂಟು

ಅಧಿಕಾರಾವಧಿ-ಕೂಲಿಂಗ್ ಆಫ್ ನಿಯಮ ಎಂದರೇನು?:

ಇನ್ನು, ಹಲವರಿಗೆ ಈ ಕುರಿತು ಗೊಂದಲಗಳಿರಬಹುದು. ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹುದ್ದೆಯಲ್ಲಿರುವ ಅಧಿಕಾರಿಗಳ ಅವಧಿ ಮತ್ತು ಕೂಲಿಂಗ್-ಆಫ್ ಅವಧಿಗೆ ಸಂಬಂಧಿಸಿದ ಹಳೆಯ ನಿಯಮಗಳನ್ನು ಸಡಿಲಿಸಿ, BCCI ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಳ್ಳಬಹುದೆಂದು ಸುಪ್ರೀಂ ತಿಳಿಸಿದೆ. ಆದರೆ ಪದಾಧಿಕಾರಿಗಳು ಸತತ 6 ವರ್ಷಗಳಿಗಿಂತ ಹೆಚ್ಚು ಕಾಲ ಬಿಸಿಸಿಐ ಹುದ್ದೆಯಲ್ಲಿ ಇರುವಂತಿಲ್ಲ. ಹೊಸ ಸಂವಿಧಾನದ ಪ್ರಕಾರ 6 ವರ್ಷಗಳ ಅಧಿಕಾರದ ನಡೆಸಿದ ಬಳಿಕ 3 ವರ್ಷಗಳ ಕೂಲಿಂಗ್​ ಆಫ್​ ಅವಧಿ ಪೂರ್ಣಗೊಳಿಸಬೇಕು ಎಂದು ಕಡ್ಡಾಯವಾಗಿತ್ತು.
Published by:shrikrishna bhat
First published: