ರೇಪ್ ಆರೋಪ ಮಾಡಿದ್ದ ಯುವತಿ ಜೊತೆಯೇ ವಿವಾಹವಾದ ಭಾರತದ ಪ್ಲೇಯರ್

news18
Updated:August 7, 2018, 3:37 PM IST
ರೇಪ್ ಆರೋಪ ಮಾಡಿದ್ದ ಯುವತಿ ಜೊತೆಯೇ ವಿವಾಹವಾದ ಭಾರತದ ಪ್ಲೇಯರ್
news18
Updated: August 7, 2018, 3:37 PM IST
ನ್ಯೂಸ್ 18 ಕನ್ನಡ

ನವ ದೆಹಲಿ: ಭಾರತದ ಟೇಬಲ್ ಟೆನ್ನಿಸ್ ಆಟಗಾರ ಸೌಮ್ಯಜಿತ್ ಘೋಷ್ ಅವರು ನಾಲ್ಕು ತಿಂಗಳ ಬಳಿಕ ತಾನು ಅತ್ಯಾಚಾರ ಮಾಡಿರುವೆ ಎಂದು ಆರೋಪ ಮಾಡಿದ ಯುವತಿಯನ್ನೇ ವಿವಾಹವಾಗಿದ್ದಾರೆ.

ಅಂತರಾಷ್ಟ್ರೀಯಾ ಟೇಬಲ್ ಟೆನಿಸ್ ಸಂಸ್ಥೆ ರ್ಯಾಂಕಿಂಗ್​ನಲ್ಲಿ ಶ್ರೇಷ್ಠ 58ನೇ ಸ್ಥಾನ ಪಡೆದಿರುವ 25 ವರ್ಷ ಪ್ರಾಯದ ಸೌಮ್ಯಜಿತ್ ಅವರ ಮೇಲೆ ಕಳೆದ ಮಾರ್ಚ್​​ನಲ್ಲಿ 18 ವರ್ಷ ಪ್ರಾಯದ ಯುವತಿ ಅತ್ಯಾಚಾರ ಆರೋಪ ಹೊರಿಸಿದ್ದು, ಪ. ಬಂಗಾಳದ ಬರಾಸತ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂದರ್ಭ ಸೌಮ್ಯಜಿತ್ ಅವರು ಜರ್ಮನಿಯ ಲೀಗ್​ನಲ್ಲಿ ಆಡುತ್ತಿದ್ದರು. ಬಳಿಕ ಈ ಪ್ರಕರಣದ ಸಂಬಂದ ಏಷ್ಯಯನ್ ಗೇಮ್ಸ್​​ನಲ್ಲಿ ಇವರಿಗೆ ಆಡಲು ಅವಕಾಶ ಲಭಿಸಿಲ್ಲ. ಅಷ್ಟೇ ಅಲ್ಲದೆ ರಾಷ್ಟ್ರಿಯಾ-ಅಂತ್ರಾಷ್ಟ್ರಿಯಾ ಪಂದ್ಯದಿಂದಲೂ ಇವರನ್ನು ಹೊರ ಹಾಕಲಾಗಿತ್ತು.

ಆದರೆ ಸದ್ಯ ಬಂಧನದ ಭೀತಿಯಿಂದ ಸೌಮ್ಯಜಿತ್ ಘೋಷ್ ಅವರು ಕೋಲ್ಕತ್ತಾಗೆ ಬಂದು ಆರೋಪ ಮಾಡಿರುವ ಯುವತಿಯನ್ನೇ ವಿವಾಹವಾಗಿ ವಿವಾದಕ್ಕೆ ತೆರೆ ಎಳೆದಿದ್ದಾರೆ.

'ನಾಲ್ಕು ತಿಂಗಳ ಹಿಂದೆ ಈ ಆರೋಪ ಕೇಳಿಬಂದಾಗ ಆಕೆಗೂ ಚಿಕ್ಕ ವಯಸ್ಸಾಗಿತ್ತು, ನನಗೂ ಚಿಕ್ಕವಯಸ್ಸಾಗಿತ್ತು. ಆದರೆ ಈಗ ಹಿಂದಿನದನ್ನೆಲ್ಲ ಯೋಚಿಸಲು ಸಮಯವಿಲ್ಲ. ಕೋರ್ಟ್​ ಕೇಸ್ ಆದಷ್ಟು ಬೇಗ ಮುಗಿದು ಟೇಬಲ್ ಟೆನ್ನಿಸ್ ಆಟಕ್ಕೆ ನಾನು ಮರಳಬೇಕು ಹಾಗೂ ನಾನು ಮರಳುತ್ತೇನೆಂಬ ವಿಶ್ವಾಸವಿದೆ' ಎಂದು ಸೌಮ್ಯಜಿತ್ ಹೇಳಿದ್ದಾರೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...