ಕೆಲವೊಮ್ಮೆ ಗೆಲ್ಲುತ್ತೇವೆ, ಸೋತಾಗ ಪಾಠ ಕಲಿಯುತ್ತೇವೆ; ಫೇಸ್​ಬುಕ್​​​ನಲ್ಲಿ ಕೊಹ್ಲಿ ಪೋಸ್ಟ್

news18
Updated:August 14, 2018, 5:50 PM IST
ಕೆಲವೊಮ್ಮೆ ಗೆಲ್ಲುತ್ತೇವೆ, ಸೋತಾಗ ಪಾಠ ಕಲಿಯುತ್ತೇವೆ; ಫೇಸ್​ಬುಕ್​​​ನಲ್ಲಿ ಕೊಹ್ಲಿ ಪೋಸ್ಟ್
  • News18
  • Last Updated: August 14, 2018, 5:50 PM IST
  • Share this:
ನ್ಯೂಸ್ 18 ಕನ್ನಡ

ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ತನ್ನ 2ನೇ ಟೆಸ್ಟ್​ನಲ್ಲೂ ಕಳಪೆ ಆಟವನ್ನು ಪ್ರದರ್ಶಿಸಿದ ಫಲವಾಗಿ 5 ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಸತತ ಎರಡು ಪಂದ್ಯದಲ್ಲಿ ಸೋಲುಂಡಿದೆ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದೆ. ಜೊತೆಗೆ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಫೇಸ್​ಬುಕ್ ಖಾತೆಯ ಮೂಲಕ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.

'ಕೆಲವೊಂದು ಸಲ ನಾವು ಜಯ ಸಾಧಿಸತ್ತೇವೆ. ಇನ್ನೂ ಕೆಲವೊಮ್ಮ ಪಾಠ ಕಲಿಯುತ್ತೇವೆ. ಆದರೆ ಎಂದಿಗೂ ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ನಾವು ನಿಮ್ಮನ್ನ ಬಿಟ್ಟು ಕೊಡುವುದಿಲ್ಲ. ಅಂತೆಯೆ ನೀವು ನಮ್ಮನ್ನು ಬಿಟ್ಟುಕೊಡಬಾರದು' ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.ಈಗಾಗಲೇ ಮಾಡಿದ ತಪ್ಪಿನ ಬಗ್ಗೆ ನಮಗೆ ಅರಿವಾಗಿದೆ. ಈ ತಪ್ಪಿಂದ ಸಾಕಷ್ಟು ಕಲಿತಿದ್ದೇವೆ. ಇಂತಹ ತಪ್ಪುಗಳನ್ನು ಮುಂದಿನ ಪಂದ್ಯದಲ್ಲಿ ಮಾಡುವುದಿಲ್ಲ. ಸದ್ಯ ಉಳಿದಿರುವ 3ಟೆಸ್ಟ್ ಪಂದ್ಯಗಳಲ್ಲಿ ಸರಣಿ ವಶ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲವಾದರು, 2-1 ಅಂತರಕ್ಕೆ ತರುವ ವಿಶ್ವಾಸ ನಮಗಿದೆ ಎಂದು ಕೊಹ್ಲಿ ಹೇಳಿದ್ದಾರೆ.
First published: August 14, 2018, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading