ಸಾಧನೆಗೆ ಬಡತನ ಅಡ್ಡಿಯಾಗುತ್ತಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ಧ ಯುವ ಆಟಗಾರ್ತಿಗೆ ಹರಿದುಬಂತು ನೆರವಿನ ಮಹಾಪೂರ..!

Muskan Yadav: 2018 ರ ನವೆಂಬರ್‌ನಲ್ಲಿ ಕೊರಿಯಾದಲ್ಲಿ ನಡೆದ ಮೂರನೇ ಜೂನಿಯರ್ ಸಾಫ್ಟ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 64 ಮಂದಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಮುಸ್ಕಾನ್ ಹಾರಿಸಿದ್ದರು.

zahir | news18-kannada
Updated:September 22, 2019, 12:59 PM IST
ಸಾಧನೆಗೆ ಬಡತನ ಅಡ್ಡಿಯಾಗುತ್ತಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ಧ ಯುವ ಆಟಗಾರ್ತಿಗೆ ಹರಿದುಬಂತು ನೆರವಿನ ಮಹಾಪೂರ..!
muskan yadav
  • Share this:
ಸೆಪ್ಟೆಂಬರ್ 17 ರಂದು ವಿದ್ಯಾರ್ಥಿ, ಸಾಫ್ಟ್​ ಟೆನಿಸ್ ಆಟಗಾರ್ತಿ ಮುಸ್ಕಾನ್ ಯಾದವ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಚೀನಾದಲ್ಲಿ ನಡೆಯಲಿರುವ ಸಾಫ್ಟ್​ ಟೆನಿಸ್ ಟೂರ್ನಿಗೆ ಮುಸ್ಕಾನ್ ಆಯ್ಕೆಯಾಗಿದ್ದರು. ಆದರೆ ನನಗೆ ಆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮದು ಬಡ ಕುಟುಂಬ ಎಂದು ಯುವ ಆಟಗಾರ್ತಿ ಬಿಕ್ಕಿ ಬಿಕ್ಕಿ ಅತ್ತಿದ್ದರು. 

ಮಾರ್ಚ್ 23 ರಿಂದ 31 ರವರೆಗೆ ಲಖನೌದಲ್ಲಿ ನಡೆದ 16 ನೇ ಸೀನಿಯರ್ ಸಾಫ್ಟ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಪದಕಕ್ಕೆ ಮುತ್ತಿಟ್ಟಿದ್ದ ಮುಸ್ಕಾನ್ ಯಾದವ್ ತಮ್ಮ ಸಾಧನೆಗೆ ಬಡತನ ಅಡ್ಡಿಯಾಗುತ್ತಿರುವುದನ್ನು ತಿಳಿಸಿ ಕಣ್ಣೀರಿಟ್ಟಿದ್ದರು.  ಅಕ್ಟೋಬರ್ 25 ರಿಂದ ನವೆಂಬರ್ 1 ರವರೆಗೆ ಚೀನಾದಲ್ಲಿ ನಡೆಯಲಿರುವ ಸಾಫ್ಟ್ ಟೆನಿಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದ ಆಟಗಾರ್ತಿಗೆ ಹಣಕಾಸಿನ ಅಭಾವ ಕಾಡಿತ್ತು.

ನನಗೆ ಭಾರತವನ್ನು ಪ್ರತಿನಿಧಿಸಬೇಕು. ಆದರೆ ನಾವು ಬಡವರು. ನಾನು ಈ ಚಾಂಪಿಯನ್​ಶಿಪ್​ ಭಾಗವಹಿಸದಿದ್ದರೆ ಆ ಅವಕಾಶವನ್ನು ನನ್ನ ವಿರುದ್ಧ ಸೋತ ಆಟಗಾರ್ತಿಯರಿಗೆ ಲಭಿಸುತ್ತದೆ. ಕಳೆದ ಬಾರಿ ವಿದೇಶಿ ಚಾಂಪಿಯನ್​ಶಿಪ್ ಭಾಗವಹಿಸಲು ನನ್ನ ತಾಯಿ ಚಿನ್ನದ ಸರವನ್ನು ಅಡವಿಟ್ಟಿದ್ದರು. ಆದರೆ ಈ ಬಾರಿ ನಮ್ಮಲ್ಲಿ ಏನೂ ಇಲ್ಲ. ಯಾರೂ ಕೂಡ ಸಹಾಯ ಮಾಡುತ್ತಿಲ್ಲ ಎಂದು ಉತ್ತರ ಪ್ರದೇಶದ ಈ ಆಟಗಾರ್ತಿ ಕಣ್ಣೀರು ಹಾಕಿದ್ದರು.

2018 ರ ನವೆಂಬರ್‌ನಲ್ಲಿ ಕೊರಿಯಾದಲ್ಲಿ ನಡೆದ ಮೂರನೇ ಜೂನಿಯರ್ ಸಾಫ್ಟ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ 64 ಮಂದಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿ ಭಾರತದ ಕೀರ್ತಿ ಪತಾಕೆಯನ್ನು ಮುಸ್ಕಾನ್ ಹಾರಿಸಿದ್ದರು. ಆದರೆ ಈ ಬಾರಿ ಚಾಂಪಿಯನ್​ಶಿಪ್​ ಗೆಲ್ಲಲೇಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಪಯಣ ವೆಚ್ಚ ಭರಿಸಲು ಆರ್ಥಿಕ ತೊಂದರೆ ಎದುರಿಸುತ್ತಿರುವುದಾಗಿ ಅತ್ತಿದ್ದ ಮುಸ್ಕಾನ್ ವಿಡಿಯೋ ರಾತ್ರೋರಾತ್ರಿ ವೈರಲ್ ಆಗಿತ್ತು.

ಇದೀಗ ಈ ಬಡ ಆಟಗಾರ್ತಿಯ ಕನಸಿಗೆ ಸ್ಟೇಟ್ ಫೆಡರೇಶನ್ ಆಫ್ ಸಾಫ್ಟ್ ಟೆನಿಸ್ ಸಂಸ್ಥೆ ಕೈ ಜೋಡಿಸಿದೆ. ಅಷ್ಟೇ ಅಲ್ಲದೆ ಮುಸ್ಕಾನ್​ಗೆ ಪ್ರಯಾಣಕ್ಕೆ ಬೇಕಾದ ಹಣವನ್ನು ಚೆಕ್ ಮೂಲಕ ಪಾವತಿಸಿದ್ದಾರೆ. ಇದರೊಂದಿಗೆ ಯುವ ಕ್ರೀಡಾಪಟುಗೆ ಪ್ರಾಯೋಜಕತ್ವವನ್ನು ನೀಡಲು ಕೆಲವರು ಮುಂದಾಗಿದ್ದಾರೆ.

ಮುಸ್ಕಾನ್ ಯಾದವ್


ಮುಸ್ಕಾನ್ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು ಸಹಾಯ ಹಸ್ತ ಚಾಚಿತು. ಚೀನಾದಲ್ಲಿ ನಡೆಯಲಿರುವ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಇದೀಗ ಫೆಡರೇಶನ್ 1.20 ಲಕ್ಷ ರೂ. ಮುಸ್ಕಾನ್ ಅವರ ಖಾತೆಗೆ ಠೇವಣಿ ಮಾಡಿದೆ ಎಂದು ಹೇಳಿದ್ದಾರೆ.ಎಂಎಲ್​ಸಿ ಬಸುದೇವ್ 50 ಸಾವಿರ ಚೆಕ್ ನೀಡಿದರು
ಉತ್ತರ ಪ್ರದೇಶ ವಿಧಾನ ಪರಿಷತ್ ಬಸುದೇವ್ ಯಾದವ್ ಅವರು ಮುಸ್ಕಾನ್​ ಅವರಿಗೆ 50,000 ರೂ. ಧನ ಸಹಾಯ ಮಾಡಿದ್ದಾರೆ. ಹಾಗೆಯೇ ಮುಂದಿನ ಖರ್ಚುಗಳನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಚಿನ್ನದ ಪದಕದೊಂದಿಗೆ ಭಾರತಕ್ಕೆ ಮರಳಬೇಕೆಂದು ಇದೇ ವೇಳೆ ಬಸುದೇವ್ ಹಾರೈಸಿದ್ದಾರೆ.

ಕ್ಯಾಬಿನೆಟ್ ಸಚಿವರಿಂದ 25 ಸಾವಿರ ರೂ.
ಇನ್ನು ಉತ್ತರ ಪ್ರದೇಶ ಕ್ಯಾಬಿನೆಟ್ ಸಚಿವ ನಂದ್ ಗೋಪಾಲ್ ಗುಪ್ತಾ ನಂದಿ ವಿದೇಶದಿಂದಲೇ ಯುವ ಆಟಗಾರ್ತಿಗೆ 25 ಸಾವಿರ ರೂ. ಧನ ಸಹಾಯ ಒದಗಿಸಿದ್ದಾರೆ. ವಿದೇಶಿ ಪ್ರವಾಸದಲ್ಲಿರುವ ಸಚಿವರು ತಮ್ಮ ಕಚೇರಿಗೆ ಕರೆ ಮಾಡಿ ಮುಸ್ಕಾನ್‌ಗೆ ಸಹಾಯ ಮಾಡುವಂತೆ ನಿರ್ದೇಶಿಸಿದ್ದಾರೆ. ಕೈಲಾಶ್‌ಪುರಿ ಕಾಲೋನಿಯಲ್ಲಿರುವ ಮುಸ್ಕಾನ್ ಅವರ ನಿವಾಸಕ್ಕೆ ಆಗಮಿಸಿದ ಸಮಿತಿಯ ನಿಯೋಗ 25 ಸಾವಿರ ರೂ. ಹಸ್ತಾಂತರಿಸಿದೆ.

ಇದನ್ನೂ ಓದಿ: ನಿಮ್ಮ ಮೊಬೈಲ್ ಕಳುವಾದರೆ ಏನು ಮಾಡಬೇಕು: ಈಗ ಫೋನ್​ಗಳನ್ನು ಪತ್ತೆ ಹಚ್ಚುವುದು ಮತ್ತಷ್ಟು ಸುಲಭ

ವಿದ್ಯಾರ್ಥಿ ಸಂಘದ ಪ್ರಯತ್ನ
ಅಲಹಾಬಾದ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಖಿಲೇಶ್ ಯಾದವ್, ಮಾಜಿ ಅಧ್ಯಕ್ಷ ರಿಚಾ ಸಿಂಗ್, ಮಾಜಿ ಉಪಾಧ್ಯಕ್ಷ ಆದಿಲ್ ಹಮ್ಜಾ ಸೇರಿದಂತೆ ವಿವಿಧ ಅಧಿಕಾರಿಗಳ ಪ್ರಯತ್ನದಿಂದ ಹಲವಾರು ಸಂಸ್ಥೆಗಳು, ಸಾರ್ವಜನಿಕ ಪ್ರತಿನಿಧಿಗಳಿಂದ ಮುಸ್ಕಾನ್ ಅವರಿಗೆ ಸಾವಿರಾರು ರೂಪಾಯಿ ಆರ್ಥಿಕ ನೆರವು ಸಿಕ್ಕಿದೆ. ಅವರಲ್ಲಿ, ರೋಟರಿ ಕ್ಲಬ್‌ನ ಎಸ್‌ಪಿ ಜಿಲ್ಲಾಧ್ಯಕ್ಷ ಚಿತ್ರವನಾಥ ಯಾದವ್, ಸಮಾಜವಾದಿ ವಿದ್ಯಾರ್ಥಿ ಪರಿಷತ್ತಿನ ಮಾಜಿ ರಾಜ್ಯ ಅಧ್ಯಕ್ಷ ಅತುಲ್ ಪ್ರಧಾನ್ ಸೇರಿ ಬಡ ಆಟಗಾರ್ತಿಗೆ 50,000 ರೂ ನೀಡಿದ್ದಾರೆ. ಹಾಗೆಯೇ ರೋಟರಿ ಕ್ಲಬ್​ ಮುಸ್ಕಾನ್ ಅವರಿಗೆ ಮುಂದಿನ ದಿನಗಳಲ್ಲಿ ಸ್ಪೋನ್ಸರ್ ಮಾಡಲು ನಿರ್ಧರಿಸಿದ್ದಾರೆ.

First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading