• Home
  • »
  • News
  • »
  • sports
  • »
  • Virat Kohli: ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತಿರಾ

Virat Kohli: ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತಿರಾ

 ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಇನ್ಸ್ಟಾಗ್ರಾಂ ನಲ್ಲಿ ಹಾಕುವ ಒಂದು ಪೋಸ್ಟ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ತಿಳಿಸಿದರೆ ನೀವು ಶಾಕ್ ಆಗ್ತಿರಾ.

  • Share this:

ಭಾರತ ತಂಡದ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಪ್ರಸ್ತುತ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಅವರು ಶತಕ ಬಾರಿಸಿ ಮೂರುವರೆ ವರ್ಷಕ್ಕೂ ಹೆಚ್ಚು ಕಾಲ ಕಳೆದಿದೆ. ಇತ್ತೀಚೆಗಿನ ಇಂಗ್ಲೆಂಡ್ (England) ಪ್ರವಾಸದಲ್ಲೂ ಅವರಿಗೆ ದೊಡ್ಡ ಮೊತ್ತ ಸಿಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅನೇಕ ಹಿರಿಯ ಆಟಗಾರರು ತಂಡದಲ್ಲಿ ಅವರ ಸ್ಥಾನವನ್ನು ಪ್ರಶ್ನಿಸುತ್ತಿದ್ದಾರೆ. ಮೈದಾನದಲ್ಲಿ ಕೆಟ್ಟ ಫಾರ್ಮ್‌ನಲ್ಲಿರುವ ವಿರಾಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಖತ್ ಫಾರ್ಮ್‌ನಲ್ಲಿದ್ದಾರೆ. ಹೌದು, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಪ್ರಾಯೋಜಿತ ಪೋಸ್ಟ್ ಗೆ ಕೋಟಿ ಕೋಟಿ ಹಣ ಪಡೆಯುತ್ತಾರೆ. ಈ ಕುರಿತು hopperhq 2022 ರ Instagram ಶ್ರೀಮಂತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಿಂದ ವಿರಾಟ್ ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಸೂಪರ್ ಹಿಟ್ ಎಂದು ಸಾಬೀತುಪಡಿಸಿದ್ದಾರೆ.


ಇನ್ಸ್ಟಾಗ್ರಾಂ ನಲ್ಲಿ ಕೊಹ್ಲಿಯೇ ಟಾಪ್​:


ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಇನ್ಸ್ಟಾಗ್ರಾಂ ನಲ್ಲಿ ಹಾಕುವ ಒಂದು ಪೋಸ್ಟ್​ಗೆ ಬರೋಬ್ಬರಿ 8 ಕೋಟಿ 70 ಲಕ್ಷ ರೂ ಪಡೆಯುತ್ತಾರೆ (ಪ್ರಾಯೋಜಕತ್ವದ ಪೋಸ್ಟ್). ಈ ಮೂಲಕ ಒಂದೇ ಪೋಸ್ಟ್ ಮೂಲಕ ಅತಿ ಹೆಚ್ಚು ಆದಾಯ ಗಳಿಸಿದ ಏಷ್ಯನ್ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. hopperhq 2022 ರ Instagram ಶ್ರೀಮಂತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಿಂದ ವಿರಾಟ್ ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಸೂಪರ್ ಹಿಟ್ ಎಂದು ಸಾಬೀತುಪಡಿಸಿದ್ದಾರೆ.


ವಿರಾಟ್ ಕಳೆದ ವರ್ಷ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 5 ಕೋಟಿ ಚಾರ್ಜ್ ಮಾಡುತ್ತಿದ್ದರು. ಅಲ್ಲದೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನ ಪಡೆದಿದ್ದರು. ಒಂದು ವರ್ಷದಲ್ಲಿ ಅವರ ಶುಲ್ಕ 3 ಕೋಟಿ 40 ಲಕ್ಷ ಹೆಚ್ಚಾಗಿದೆ. ಅವರ ವಿಶ್ವ ರ್ಯಾಂಕಿಂಗ್ ಕೂಡ ಸುಧಾರಿಸಿದ್ದು, 14ನೇ ಸ್ಥಾನಕ್ಕೆ ಜಿಗಿದಿದ್ದಾರೆ.


ಇದನ್ನೂ ಓದಿ: Unbreakable Records: ಟೀಂ ಇಂಡಿಯಾ ಆಟಗಾರರ ಹೆಸರಿನಲ್ಲಿರುವ ಮುರಿಯಲಾಗದ ದಾಖಲೆಗಳಿವು!


ಯಾರಾರು ಎಷ್ಟು ಸಂಭಾವನೆ ಪಡೆಯುತ್ತಾರೆ:


ವಿಶ್ವಾದ್ಯಂತ ಆಟಗಾರರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ವಿರಾಟ್ ಸಂಖ್ಯೆ ಇದೆ. ರೊನಾಲ್ಡೊ ಪ್ರತಿ ಪೋಸ್ಟ್‌ಗೆ 19.17 ಕೋಟಿ ಗಳಿಸಿದರೆ ಮೆಸ್ಸಿ ಪ್ರತಿ ಪೋಸ್ಟ್‌ಗೆ 14.21 ಕೋಟಿ ಗಳಿಸುತ್ತಾರೆ. ಇನ್ನು, ವಿರಾಟ್ ಕೊಹ್ಲಿ ನಂತರ, ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಪರ್ಹ್ಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ಈ 'ದೇಸಿ ಹುಡುಗಿ' ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ 3.38 ಕೋಟಿ ರೂಪಾಯಿ ಸಂಪಾದಿಸುತ್ತಾಳೆ. ವಿಶ್ವ ಪಟ್ಟಿಯಲ್ಲಿ ಪ್ರಿಯಾಂಕಾ 27ನೇ ಸ್ಥಾನದಲ್ಲಿದ್ದಾರೆ.


ಇನ್ಸ್ಟಾಗ್ರಾಮ್ ಫಾಲೋವರ್ಸ್ ಗಳಲ್ಲಿಯೂ ಕೊಹ್ಲಿಯೇ ಕಿಂಗ್:


ವಿರಾಟ್ ಕೊಹ್ಲಿ 20 ಕೋಟಿಗೂ ಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ 46.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಲಿಯೋನೆಲ್ ಮೆಸ್ಸಿ 35.1 ಕೋಟಿ ಅನುಯಾಯಿಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: Team India: ಟಿ20 ವಿಶ್ವಕಪ್‌ನಲ್ಲಿ ಈ ಆಟಗಾರನೇ ಟೀಂ ಇಂಡಿಯಾದ ಟ್ರಂಪ್ ಕಾರ್ಡ್​ ಎಂದ ಭಾರತದ ಮಾಜಿ ಆಟಗಾರ


ವಿರಾಟ್ ಬೆನ್ನಿಗೆ ನಿಂತ ದಿನೇಶ್ ಕಾರ್ತಿಕ್:


ಕೊಹ್ಲಿ ಟೀಂ ಇಂಡಿಯಾಗೆ ಅದ್ಭುತ ವಿಜಯಗಳನ್ನು ನೀಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ ಕೊಹ್ಲಿಗೆ ವಿಶ್ರಾಂತಿ ಸಿಕ್ಕಿತ್ತು. ಅವರು ಸಂಪೂರ್ಣವಾಗಿ ರೀಚಾರ್ಜ್ ಆಗಿ ಹಿಂತಿರುಗುತ್ತಾರೆ' ಎಂದು ಕಾರ್ತಿಕ್ ಹೇಳಿದ್ದಾರೆ. ಈ ಮೂಲಕ ಕಾರ್ತಿಕ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ.

Published by:shrikrishna bhat
First published: