60 ಎಸೆತಗಳಲ್ಲಿ ಶತಕ: ಮುಂದುವರೆದ ಸ್ಪೃತಿ ಮಂದಾನ ಅಬ್ಬರದ ಆಟ

news18
Updated:August 3, 2018, 11:36 PM IST
60 ಎಸೆತಗಳಲ್ಲಿ ಶತಕ: ಮುಂದುವರೆದ ಸ್ಪೃತಿ ಮಂದಾನ ಅಬ್ಬರದ ಆಟ
news18
Updated: August 3, 2018, 11:36 PM IST
ನ್ಯೂಸ್ 18 ಕನ್ನಡ

ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಕಿಯಾ ಮಹಿಳಾ ಟಿ-20 ಸೂಪರ್ ಲೀಗ್ ಟೂರ್ನಿಯಲ್ಲಿ ತಮ್ಮ ಅಬ್ಬರ ಮುಂದುವರೆಸಿದ್ದಾರೆ. ವೆಸ್ಟರ್ನ್ ಸ್ಟ್ರೊಂ ತಂಡದ ಸ್ಮೃತಿ ಅವರು ಇಂದು ನಡೆದ ಲ್ಯಾನ್ಸಾಶೈರ್ ಥಂಡರ್ ವಿರುದ್ಧದ ಪಂದ್ಯದಲ್ಲಿ ಕೇವಲ 60 ಎಸೆತದಲ್ಲಿ ಶತಕ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ.

ಲ್ಯಾನ್ಸಾಶೈರ್ ತಂಡ ಸೆಟ್ಟರ್​​ವೈಟ್ ಅವರ ಅಜೇಯ 85 ರನ್​​ಗಳ ನೆರವಿನಿಂದ ನಿಗದಿತ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 153 ರನ್ ಬಾರಿಸಿತ್ತು. 154 ರನ್​​ಗಳ ಗುರಿ ಬೆನ್ನಟ್ಟಿದ ವೆಸ್ಟರ್ನ್ ಸ್ಟ್ರೊಂ ತಂಡಕ್ಕೆ ಸ್ಮೃತಿ ಮಂದಾನ ಸಿಡಿಸಿಲಬ್ಬರದ ಬ್ಯಾಟಿಂಗ್ ನಡೆಸಿ ಜಯ ತಂದು ಕೊಟ್ಟಿದ್ದಾರೆ. 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸ್​ನೊಂದಿಗೆ 102 ರನ್ ಸಿಡಿಸಿ ಮಂದಾನ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಮೂಲಕ 18.2 ಓವರ್​ನಲ್ಲೇ 3 ವಿಕೆಟ್ ಕಳೆದುಕೊಂಡು ವೆಸ್ಟರ್ನ್​​​ ಸ್ಟರೋಮ್​​​ ತಂಡ 154 ರನ್​ ಗಳಿಸಿ ಗೆಲುವಿನ ನಗೆ ಬೀರಿದೆ.
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...