'ಕೊಹ್ಲಿ-ಸ್ಮೃತಿ' ಇಬ್ಬರ ಜೆರ್ಸಿ ನಂಬರ್ ಸೇಮ್: ಚಹಾಲ್ ಟಿವಿಯಲ್ಲಿ ಮುದ್ದಿನ ಮಂದಾನ ಹೇಳಿದ್ದೇನು?

ಮುದ್ದುಮುಖದ ಚೆಲುವೆ ಸ್ಮೃತಿ ಮಂದಾನ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಾಲ್​ರ 'ಚಹಾಲ್ ಟಿವಿ'ಯಲ್ಲಿ ಮಾತನಾಡಿದ್ದು, ಕೆಲವು ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ.

Vinay Bhat | news18
Updated:February 7, 2019, 4:20 PM IST
'ಕೊಹ್ಲಿ-ಸ್ಮೃತಿ' ಇಬ್ಬರ ಜೆರ್ಸಿ ನಂಬರ್ ಸೇಮ್: ಚಹಾಲ್ ಟಿವಿಯಲ್ಲಿ ಮುದ್ದಿನ ಮಂದಾನ ಹೇಳಿದ್ದೇನು?
ಸ್ಮೃತಿ ಮಂದಾನ- ವಿರಾಟ್ ಕೊಹ್ಲಿ
Vinay Bhat | news18
Updated: February 7, 2019, 4:20 PM IST
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಮೈದಾನದಲ್ಲಿ ಎಷ್ಟೇ ರಫ್​ ಆಗಿದ್ದರು ಮೈದಾಮನದ ಹೊರಗಡೆ ಮಾತ್ರ ತುಂಬಾನೆ ಜಾಲಿಯಾಗಿರುತ್ತಾರೆ. ಮೊನ್ನೆಯಷ್ಟೆ ಐಸಿಸಿ ಏಕದಿನ ಕ್ರಿಕೆಟ್ ರ್ಯಾಂಕಿಂಗ್​​ನಲ್ಲಿ 751 ಅಂಕದೊಂದಿಗೆ ಸ್ಮೃತಿ ನಂಬರ್ 1 ಸ್ಥಾನ ಪಡೆದುಕೊಂಡಿದ್ದರು.

ಸದ್ಯ ಈ ಮುದ್ದುಮುಖದ ಚೆಲುವೆ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಯಜುವೇಂದ್ರ ಚಹಾಲ್​ರ 'ಚಹಾಲ್ ಟಿವಿ'ಯಲ್ಲಿ ಮಾತನಾಡಿದ್ದು, ಕೆಲವು ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಜೆರ್ಸಿ ನಂಬರ್ ಬಗ್ಗೆ ಮಾತನಾಡಿರುವ ಸ್ಮೃತಿ, 'ಮೊದಲು ನನ್ನ ಜೆರ್ಸಿಗೆ ನಾನು 7 ನಂಬರ್ ಅನ್ನು ಆಯ್ಕೆ ಮಾಡಿಕೊಂಡಿದ್ದೆ. ಯಾಕೆಂದರೆ ಸ್ಕೋಲ್​​ನಲ್ಲಿ ನನ್ನ ಹಾಜರಿ ನಂಬರ್ 7 ಆಗಿತ್ತು. ಆದರೆ, ಅದಗಾಲೆ 7 ನಂಬರ್ ಅನ್ನು ಬೇರೆಯವರು ಆಯ್ಕೆ ಮಾಡಿದ್ದರು'.

ಇದನ್ನೂ ಓದಿ: ವಿರಾಟ್​-ಅನುಷ್ಕಾ ಕಾಡಿನಲ್ಲಿರುವಾಗ ಫೋಟೋ ಕ್ಲಿಕ್​ ಮಾಡಿದ್ದು ಅನಿಲ್​ ಕುಂಬ್ಳೆ!

'ಬಳಿಕ ಬಿಸಿಸಿಐ ನಿಮ್ಮ ಹುಟ್ಟುಹಬ್ಬದ ದಿನಾಂಕ 18 ಅನ್ನು ಆಯ್ಕೆ ಮಾಡಿ ಎಂದು ಸೂಚಿಸಿದರು. ಹಾಗಾಗಿ ಬಳಿಕ 18 ನಂಬರ್ ಅನ್ನು ಆರಿಸಿದೆ. ಆದರೆ, 18 ನಂಬರ್ ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ ಎಂಬುದು ನನಗೆ ಆಗ ತಿಳಿದಿರಲಿಲ್ಲ' ಎಂದು ಚಹಾಲ್ ಟಿವಿಯಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಇದೇವೇಳೆ ಚಹಾಲ್ ಅವರು, 'ನಿಮ್ಮ ಬ್ಯಾಟಿಂಗ್ ಸ್ಪೂರ್ತಿ ಯಾರು?, ಇಷ್ಟು ಚೆನ್ನಾಗಿ ಬ್ಯಾಟಿಂಗ್ ಹೇಗೆ ಮಾಡುತ್ತೀರಿ?' ಎಂದು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಮಂದಾನ, 'ನೀವು ನ್ಯೂಜಿಲೆಂಡ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಆಡಿದ್ದನ್ನು ನೋಡಿ ನಾನು ಬ್ಯಾಟಿಂಗ್ ಕಲಿತುಕೊಂಡೆ, ನನಗೆ ಬ್ಯಾಟಿಂಗ್ ಸ್ಪೂರ್ತಿ ನೀವೆ' ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Loading...

ಇದನ್ನೂ ಓದಿ: ಕಾಫಿ ವಿವಾದ: ಹಾರ್ದಿಕ್-ರಾಹುಲ್ ವಿರುದ್ಧ ದಾಖಲಾಯಿತು ಎಫ್​​ಐಆರ್​​​

 ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಭಾರತ ಕೇವಲ 92 ರನ್​ಗೆ ಆಲೌಟ್ ಆಗಿತ್ತು. ಈ ಪಂದ್ಯದಲ್ಲಿ ಚಹಾಲ್ 16 ರನ್ ಬಾರಿಸಿದ್ದೆ ತಂಡದ ಆಟಗಾರರ ಗರಿಷ್ಠ ಸ್ಕೋರ್ ಆಗಿತ್ತು.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...