• Home
 • »
 • News
 • »
 • sports
 • »
 • ಸೂಪರ್ ಲೀಗ್; ಆಂಗ್ಲರ ನಾಡಲ್ಲಿ ದಾಖಲೆ ಬರೆದ ಸ್ಮೃತಿ ಮಂದಾನ

ಸೂಪರ್ ಲೀಗ್; ಆಂಗ್ಲರ ನಾಡಲ್ಲಿ ದಾಖಲೆ ಬರೆದ ಸ್ಮೃತಿ ಮಂದಾನ

 • News18
 • Last Updated :
 • Share this:

  ನ್ಯೂಸ್ 18 ಕನ್ನಡ

  ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಮೆನ್ಸ್ ಸೂಪರ್​ ಲೀಗ್​ ಟಿ-20 ಟೂರ್ನಮೆಂಟ್​ನಲ್ಲಿ ಭಾರತದ ಸ್ಟಾರ್ ಕ್ರಿಕೆಟರ್​ ಸ್ಮೃತಿ ಮಂದಾನ ಅವರು ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

  ವೆಸ್ಟ್ರನ್ ಸ್ಟಾರ್ಮ್​​ ತಂಡವನ್ನು ಪ್ರತಿನಿಧಿಸುತ್ತಿರುವ ಮಂದಾನ ಅವರು ಕಳೆದ ಆರು ಪಂದ್ಯಗಳಲ್ಲೂ ಮಿಂಚಿನ ಪ್ರದರ್ಶನ ತೋರಿ ಟೂರ್ನಮೆಂಟ್​ನಲ್ಲಿ ಒಟ್ಟಾರೆ 338 ರನ್​ ಕಲೆಹಾಕಿ ಅತಿ ಹೆಚ್ಚು ರನ್​ ಕಲೆಹಾಕಿದ್ದಾರೆ. ಮಂದಾನ ಅವರು ಮೊದಲ ಪಂದ್ಯದಲ್ಲಿ 48 ರನ್ ಬಾರಿಸಿದ್ದರೆ, ಎರಡನೇ ಪಂದ್ಯದಲ್ಲಿ 37, ಮೂರನೇ ಪಂದ್ಯದಲ್ಲಿ ಅಜೇಯ 51, ನಾಲ್ಕನೇ ಪಂದ್ಯದಲ್ಲಿ ಅಜೇಯ 43 ರನ್​ ಗಳಿಸಿದ್ದಾರೆ. ಅಂತೆಯೆ 5ನೇ ಪಂದ್ಯದಲ್ಲಿ ಕೇವಲ 60 ಎಸೆತಗಳಲ್ಲಿ ಶತಕ ಸಿಡಿಸಿದ್ದರೆ, 6ನೇ ಪಂದ್ಯದಲ್ಲಿ 56 ರನ್ ಬಾರಿಸಿದ್ದಾರೆ.

  ಇಷ್ಟೇ ಅಲ್ಲದೆ ಟೂರ್ನಮೆಂಟ್​ನಲ್ಲಿ ಸದ್ಯ ಅತಿ ಹೆಚ್ಚು ಸಿಕ್ಸರ್, ಬೌಂಡರಿಗಳು ಸೇರಿದಂತೆ, ಬ್ಯಾಟಿಂಗ್ ಸರಾಸರಿ ಹಾಗೂ ಸ್ಟ್ರೈಕ್​ರೇಟ್​ನಲ್ಲಿ ಸ್ಮೃತಿ ಮಂದಾನ ಅವರೇ ಟಾಪ್​​ನಲ್ಲಿದ್ದಾರೆ.

  ವೆಸ್ಟರ್ನ್​​ ಸ್ಟೋಮ್ ಪರ ಮೂರು ಆವೃತ್ತಿಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ್ತಿಯರು:

  2018: ಸ್ಮೃತಿ ಮಂದಾನ-338*

  2017: ರಾಚೆಲ್ ಪ್ರೀಸ್ಟ್- 261

  2016: ಸ್ಟೇಫಾನಿ ಟೇಲರ್- 289

   


  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು