ಸಿರಾಜ್ ಮಾರಕ ಬೌಲಿಂಗ್; 2ನೇ ಇನ್ನಿಂಗ್ಸ್​ನಲ್ಲೂ ಆಫ್ರಿಕನ್ ಬ್ಯಾಟ್ಸ್​ಮನ್​ಗಳ ಪರದಾಟ

news18
Updated:August 6, 2018, 6:15 PM IST
ಸಿರಾಜ್ ಮಾರಕ ಬೌಲಿಂಗ್; 2ನೇ ಇನ್ನಿಂಗ್ಸ್​ನಲ್ಲೂ ಆಫ್ರಿಕನ್ ಬ್ಯಾಟ್ಸ್​ಮನ್​ಗಳ ಪರದಾಟ
news18
Updated: August 6, 2018, 6:15 PM IST
ನ್ಯೂಸ್ 18 ಕನ್ನಡ

ಬೆಂಗಳೂರು (ಆ. 06): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಎ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ನಡುವಣ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ 338 ರನ್​​ಗಳ ಮುನ್ನಡೆಯೊಂದಿಗೆ 584 ರನ್​ಗೆ ಡಿಕ್ಲೇರ್ ಮಾಡಿಕೊಂಡರೆ, ಎರಡನೇ ಇನ್ನಿಂಗ್ಸ್​​ನಲ್ಲಿ ದ. ಆಫ್ರಿಕಾ ಎ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ಈ ಮೂಲಕ ಆಫ್ರಿಕನ್ನರು 239 ರನ್​ಗಳ ಹಿನ್ನಡೆಯಲ್ಲಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ದ. ಆಫ್ರಿಕ 246 ರನ್​ಗೆ ಆಲೌಟ್ ಆಗಿದ್ದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಪೃಥ್ವಿ ಷಾ ಅವರ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅವರ ದ್ವಿಶತಕದ ನೆರವಿನಿಂದ ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 411 ರನ್​ ಗಳಿಸಿತ್ತು. ಮೂರನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. 220 ರನ್ ಸಿಡಿಸಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅಗರ್ವಾಲ್ ಇಂದು ಕೇವಲ 2 ರನ್ ಗಳಿಸಿ 222 ರನ್​ಗೆ ಔಟ್ ಆದರು. ಬಳಿಕ ಹನುಮನ್ ವಿಹಾರಿ 54 ಹಾಗೂ ಶ್ರೀಕರ್ ಭರತ್ 64 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್​ಮನ್​ಗಳು ಬೇಗನೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಭಾರತ ಎ 8 ವಿಕೆಟ್ ಕಳೆದಕೊಂಡು 584 ರನ್​ ಗಳಿಸಿದ್ದ ವೇಳೆ ಡಿಕ್ಲೇರ್ ಮಾಡಿಕೊಂಡಿತು. ದ. ಆಫ್ರಿಕಾ ಎ ಪರ ಹೆಂಡ್ರಿಕ್ಸ್ 3 ವಿಕೆಟ್ ಕಿತ್ತರೆ, ಒಲಿವಿಯರ್ ಹಾಗೂ ಡೇನ್ ಪಿಡ್ಟ್ ತಲಾ 2 ವಿಕೆಟ್ ಪಡೆದರು.

ಬಳಿಕ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಆಫ್ರಿಕಾಕ್ಕೆ ಮೊಹಮ್ಮದ್ ಸಿರಾಜ್ ಆಘಾತ ನೀಡಿದ್ದು ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಸಾರೆಲ್ ಎರ್ವೇ ಕೇವಲ 3 ರನ್​​ಗೆ ಔಟ್ ಆದರು. ಪೀಟರ್ ಮಲನ್ ಹಾಗೂ ನಾಯಕ ಖಯಾ ಜಂಡೋ ಶೂನ್ಯಕ್ಕೆ ತಮ್ಮ ಇನ್ನಿಂಗ್ಸ್​ ಕೊನೆಗೊಳಿಸಿದರೆ, ಮುತುಸ್ಯಾಮಿ 41 ರನ್​ಗೆ ಔಟ್ ಆದರು. ಸದ್ಯ ಹಂಜಾ 46 ರನ್ ಬಾರಿಸಿ ಹಾಗೂ ರೂಡಿ ಸೆಕಂಡ್ 4 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು ಅಂತಿಮ ದಿನದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತ ಎ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಕಿತ್ತಿದ್ದಾರೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ