ಆನ್​ಫೀಲ್ಡ್​ನಲ್ಲೂ ಕೂಲ್- ಆಫ್ ಫೀಲ್ಡ್​ನಲ್ಲೂ ಸಿಂಪಲ್: ಬೀದಿನಾಯಿಗಳಿಗೆ ಧೋನಿಯಿಂದ ವಿಶಿಷ್ಠ ತರಭೇತಿ

news18
Updated:June 18, 2018, 7:57 PM IST
ಆನ್​ಫೀಲ್ಡ್​ನಲ್ಲೂ ಕೂಲ್- ಆಫ್ ಫೀಲ್ಡ್​ನಲ್ಲೂ ಸಿಂಪಲ್: ಬೀದಿನಾಯಿಗಳಿಗೆ ಧೋನಿಯಿಂದ ವಿಶಿಷ್ಠ ತರಭೇತಿ
news18
Updated: June 18, 2018, 7:57 PM IST
ನ್ಯೂಸ್ 18 ಕನ್ನಡ

ವಿಶ್ವ ಕ್ರಿಕೆಟ್​​​ನ ಕೂಲ್ ಆಟಗಾರ ಎನಿಸಿಕೊಂಡಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಾನೆಷ್ಟೇ ದೊಡ್ಡ ವ್ಯಕ್ತಿ​ ಆದರು ಅವರ ವ್ಯಕ್ತಿತ್ವ ಮಾತ್ರ ತುಂಬಾನೆ ಸರಳ. ಭಾರತಕ್ಕೆ ಮೂರು ಮಹಾನ್ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟರು ಕೂಡ ಅಹಂ, ಆಡಂಬರ, ಐಷಾರಾಮಿ ಬದುಕಿನಿಂದ ಬಹಳ ದೂರ ಉಳಿದಿದ್ದಾರೆ.  ಸರಳ ಜೀವಿ, ಶಾಂತಿಧೂತ ಎಂಬ ಪದಕ್ಕೆ ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಭಾಷ್ಯಬರೆದ ಜೀವಂತ ದಂತಕಥೆ ಎಂದರೆ ಅದು ಎಂ. ಎಸ್. ಧೋನಿ ಎನ್ನಬಹುದು.

ಆದರೆ ಆಫ್ ಫೀಲ್ಡ್​ನಲ್ಲಿ ಧೋನಿ ಅವರು ತುಂಬಾನೇ ಸರಳವ್ಯಕ್ತಿ. ಭಾರತೀಯ ಕ್ರಿಕೆಟ್​ನಲ್ಲಿ ದಶಕಗಳ ಕಾಲ ನಾಯಕನಾಗಿ ಆಳ್ವಿಕೆ ನಡೆಸಿದರು, ಆ ಅಹಂ ಅನ್ನು ಹೊರಜಗತ್ತಿನಲ್ಲಿ ಧೋನಿ ಅವರು ಎಂದಿಗೂ ಕೂಡ ತೋರಿಸಿಕೊಂಡವರಲ್ಲ. ಧೋನಿ ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಅದಕ್ಕಾಗಿಯೇ ತಮ್ಮ ಮನೆಯಲ್ಲಿ ಧೋನಿ ಅವರು ಬೀದಿನಾಯಿಗಳಿಗೂ ಆಶ್ರಯ ಕಲ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಈ ನಾಯಿಗಳಿಗೆ ವಿಶಿಷ್ಠ ರೀತಿಯಲ್ಲಿ ಫಿಟ್ನೆಸ್ ತರಬೇತಿಯನ್ನೂ ನೀಡುತ್ತಾರೆ. ಬೀದಿ ನಾಯಿಗಳಿಗೆ ತರಭೇತಿ ನೀಡುವ ವಿಡಿಯೋವನ್ನು ಧೋನಿ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮೈದಾನದಲ್ಲಿ ಶ್ವಾನದಳದವರ ಮುದ್ದಾದ ನಾಯಿ ಕಂಡರೆ ಧೊನಿ ಅವರು ಒಮ್ಮೆ ಮೈದಡವದೆ ಬಿಡುವುದಿಲ್ಲ. ಇದನ್ನು ನೋಡಿದರೆ ಧೋನಿ ಅವರಿಗೆ ನಾಯಿಗಳ ಮೇಲಿರುವ ಕಾಳಜಿ ಎಂತಹುದು ಎಂಬುದು ತಿಳಿಯುತ್ತದೆ.

 
Loading...

ZOYA(Dutch shepherd) does some training and LILY(husky) does the cheering job


A post shared by M S Dhoni (@mahi7781) on


 A post shared by M S Dhoni (@mahi7781) on


 
ಧೋನಿ ಅವರ ಬಳಿ ಐಷಾರಾಮಿ ಕಾರು, ಬೈಕ್​ಗಳಿವೆ. ಆದರೆ ಧೋನಿಗೆ ಅದು ಬೇಕಿಲ್ಲ. ಸೆಕ್ಯೂರಿಟಿ ಬಯಸದೆ ಒಬ್ಬಂಟಿಯಾಗಿ ಬೈಕ್ ರೈಡಿಂಗ್ ಮಾಡುವ ಧೋನಿ ಅವರು, ಬೈಕ್ ಕೈ ಕೊಟ್ಟರೆ ಸ್ಪ್ಯಾನರ್ ಹಿಡಿದು ಬೈಕ್ ರಿಪೇರಿ ಮಾಡಲು ಇಳಿದು ಬಿಡುತ್ತಾರೆ. ಹೀಗಾಗಿಯೇ ಧೋನಿಯವರು ಎಲ್ಲೇ ಕಾಣಿಸಿಕೊಂಡರು, ಅಭಿಮಾನಿಗಳು ಪ್ರೀತಿಯಿಂದ ಅಪ್ಪುಗೆ ನೀಡಿ, ಮಾಹಿಯವರ ಕಾಲು ಮುಟ್ಟಿ ನಮಸ್ಕರಿಸಲು ಮುಗಿಬೀಳುವುದು.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...