ರಾಹುಲ್-ಪಾಂಡ್ಯ ಬದಲು ಇಬ್ಬರು ಯುವ ಆಟಗಾರರು ಟೀಂ ಇಂಡಿಯಾ ಸೇರ್ಪಡೆ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಏಕದಿನ ಸರಣಿ ಆಡುತ್ತಿದೆ. ಜ.  15 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ವಿಜಯ್ ಹಾಗೂ ಶುಭ್​​ಮನ್ ತಂಡ ಸೇರಲಿದ್ದಾರೆ.

Vinay Bhat | news18
Updated:January 13, 2019, 10:57 AM IST
ರಾಹುಲ್-ಪಾಂಡ್ಯ ಬದಲು ಇಬ್ಬರು ಯುವ ಆಟಗಾರರು ಟೀಂ ಇಂಡಿಯಾ ಸೇರ್ಪಡೆ
(Image credits: BCCI)
Vinay Bhat | news18
Updated: January 13, 2019, 10:57 AM IST
ಖಾಸಗಿ ಚಾನೆಲ್​​​ನ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯ ಹಾಗೂ ಕೆ ಎಲ್ ರಾಹುಲ್ ಸದ್ಯ ಟೀಂ ಇಂಡಿಯಾದಿಂದ ಹೊರ ಬಿದ್ದಿದ್ದಾರೆ.

ಇವರ ಬದಲಾಗಿ ಆಲ್ರೌಂಡರ್ ವಿಜಯ್ ಶಂಕರ್ ಮತ್ತು ಯುವ ಬ್ಯಾಟ್ಸ್​ಮನ್​ ಶುಭ್​​ಮನ್​​ ಗಿಲ್​ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ​ಪಾಂಡ್ಯ ಹಾಗೂ ರಾಹುಲ್ ಹೇಳಿಕೆಗೆ ಸಂಬಂಧಿಸಿದಂತೆ ಬಿಸಿಸಿಐ ವಿಚಾರಣೆ ಮುಗಿಯುವವರೆಗೆ ತಂಡದಿಂದ ಅಮಾನತು ಮಾಡಿದೆ.

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಏಕದಿನ ಸರಣಿ ಆಡುತ್ತಿದೆ. ಜ.  15 ರಂದು ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ವಿಜಯ್ ಹಾಗೂ ಶುಭ್​​ಮನ್ ತಂಡ ಸೇರಲಿದ್ದಾರೆ. ಇದರ ಜೊತೆಗೆ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗೂ ಗಿಲ್-ವಿಜಯ್ ತಂಡದಲ್ಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

ಇದನ್ನೂ ಓದಿ: ಸುಮಾರು 1 ವರ್ಷದ ಬಳಿಕ ಧೋನಿ ಬ್ಯಾಟ್​ನಿಂದ ಬಂತು ಅರ್ಧಶತಕ

ವಿಜಯ್ ಆಸೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದರೆ, ಶುಬ್​​ಮನ್​ ನ್ಯೂಜಿಲೆಂಡ್​ ಸರಣಿಯಲ್ಲಿ ಆಡಲಿದ್ದಾರೆ. ಜ. 23 ರಂದು ಭಾರತ ಕಿವೀಸ್ ಪ್ರವಾಸ ಆರಂಭಿಸಲಿದೆ.

ನಿನ್ನೆ (ಜ.12) ಭಾರತ ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿದ್ದು, ರೋಹಿತ್ ಅವರ ಅಮೋಘ ಶತಕ ಹಾಗೂ ಧೋನಿ ಅವರ ಅರ್ಧಶತಕದ ಹೊರತಾಗಿಯು ಸೋಲುಂಡಿದೆ.

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ