• Home
  • »
  • News
  • »
  • sports
  • »
  • Shubman Gill: ಶುಭಮನ್ ಗಿಲ್‌ಗೆ ನಿದ್ದೆ ಮಾಡೋದಕ್ಕೆ ಬಿಡದವರು ಯಾರು! ರೋಹಿತ್ ಇಂಟರ್‌ವ್ಯೂನಲ್ಲಿ ಗುಟ್ಟು ರಟ್ಟು

Shubman Gill: ಶುಭಮನ್ ಗಿಲ್‌ಗೆ ನಿದ್ದೆ ಮಾಡೋದಕ್ಕೆ ಬಿಡದವರು ಯಾರು! ರೋಹಿತ್ ಇಂಟರ್‌ವ್ಯೂನಲ್ಲಿ ಗುಟ್ಟು ರಟ್ಟು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Shubman Gill: ಶುಭ್‌ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಗಳಿಸಿದರು. ಬಳಿಕ ಯುವ ಆಟಗಾರರ ಸಂದರ್ಶನ ಮಾಡಿದ ನಾಯಕ ರೋಹಿತ್​ ಶರ್ಮಾ, ಅನೇಕ ಆಸಕ್ತಿಕರ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

  • Share this:

ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜನವರಿ 18 ರಂದು ಆರಂಭವಾಗಿದೆ. ಮೊದಲ ಪಂದ್ಯವನ್ನು ಭಾರತ 12 ರನ್‌ಗಳಿಂದ ಜಯ ಸಾಧಿಸಿದೆ. ಶುಭ್‌ಮನ್ ಗಿಲ್ (Shubman Gill) 208 ರನ್‌ಗಳ ಭರ್ಜರಿ ಆಟವಾಡಿದರು. ಪಂದ್ಯದ ನಂತರ ರೋಹಿತ್ ಶರ್ಮಾ (Rohit Sharma), ಇಶಾನ್ ಕಿಶನ್ (Ishan Kishan) ಮತ್ತು ಶುಭಮನ್ ಗಿಲ್ ಅವರನ್ನು 200 ಕ್ಲಬ್‌ಗೆ ಸ್ವಾಗತಿಸಿದರು. ಆಗ ಮೂವರ ನಡುವೆ ನಡೆದ ಸಂದರ್ಶನದ ವಿಡಿಯೋ ಇದೀಗ ಸಾಂಆಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋವನ್ನು ಬಿಸಿಸಿಐ ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಗಿಲ್​ ಹಾಗೂ ಕಿಶನ್​ ಅನೇಕ ರಹಸ್ಯಗಳು ಬಹಿರಂಗಪಡಿಸಿದ್ದಾರೆ.


ಕಿಶನ್​ ರಾತ್ರಿಯೆಲ್ಲಾ ನಿದ್ರೆ ಮಾಡಲು ಬಿಡಲ್ಲ:


ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಶುಭಮನ್ ಗಿಲ್ ಮತ್ತು ಇಶಾನ್ ರೋಹಿತ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ರೋಹಿತ್​ ಶರ್ಮಾ ಅವರು ಇಶಾನ್ ಮತ್ತು ಗಿಲ್‌ ಬಳಿ ನಿಮ್ಮ ಪೂರ್ವ ಪಂದ್ಯದ ದಿನಚರಿ ಏನು ಎಂದು ಕೇಳಿದರು. ಈ ಪ್ರಶ್ನೆಗೆ ಉತ್ತರಿಸಿದ ಶುಭ್​ಮನ್ ಗಿಲ್ ಅವರು, 'ನನ್ನ ಪಂದ್ಯದ ಪೂರ್ವ ದಿನಚರಿಯನ್ನು ಇಶಾನ್ ಕಿಶನ್ ಹಾಳುಮಾಡಿದ್ದಾರೆ. ಏಕೆಂದರೆ ಕಿಶನ್ ನನಗೆ ಮಲಗಲು ಬಿಡುವುದಿಲ್ಲ. ಅವರು ಐಪ್ಯಾಡ್‌ನಲ್ಲಿ ಇಯರ್‌ಪಾಡ್‌ ಬಳಸದೆಯೇ ಸಿನಿಮಾವನ್ನು ನೋಡುತ್ತಿರುತ್ತಾರೆ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.



ದ್ವಿಶತಕದ ಬಳಿಕ 3 ಪಂದ್ಯದಲ್ಲಿ ಡ್ರಾಫ್​:


ಸಂದರ್ಶನದ ವೇಳೆ ರೋಹಿತ್, ದ್ವಿಶತಕ ಬಾರಿಸಿದ ನಂತರ ನೀವು ಮೂರು ಪಂದ್ಯಗಳನ್ನು ಆಡಲಿಲ್ಲ ಎಂದು ಇಶಾನ್‌ಗೆ ಕೇಳಿದ್ದಾರೆ. ಈ ಬಗ್ಗೆ ಇಶಾನ್ ಉತ್ತರಿಸಿದ್ದು, ಸಹೋದರ ನೀನು ಕ್ಯಾಪ್ಟನ್ ಎನ್ನುವ ಮೂಲಕ ತಮಾಷೆಯಾಗಿ ಉತ್ತರಿಸಿದ್ದಾರೆ. ಇದನ್ನು ಕೇಳಿದ ರೋಹಿತ್ ಮತ್ತು ಗಿಲ್​ ಜೋರಾಗಿ ನಕ್ಕು ಸುಮ್ಮನಾಗಿದ್ದಾರೆ. ಇಶಾನ್ ಕಿಶನ್ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಆದರೆ ಆ ನಂತರ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಒಂದೇ ಒಂದು ಅವಕಾಶ ಸಿಗಲಿಲ್ಲ.


ಇದನ್ನೂ ಓದಿ: World Cup 2023: ಏಕದಿನ ವಿಶ್ವಕಪ್​ನಿಂದ ಟೀಂ ಇಂಡಿಯಾದ 9 ಆಟಗಾರರು ಔಟ್​? ಬಿಸಿಸಿಐ ಮಹತ್ವದ ನಿರ್ಧಾರ!


ಇಶಾನ್ ಕಿಶನ್ ಬಳಿಕ ಗಿಲ್ ದ್ವಿಶತಕ:


ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ 149 ಎಸೆತಗಳಲ್ಲಿ 208 ರನ್ ಗಳಿಸಿದ್ದರು. ಅವರು ತಮ್ಮ ಅದ್ಭುತ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮೊದಲು ಇಶಾನ್ ಕಿಶನ್ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು.




ಕೊಹ್ಲಿ- ಧವನ್ ದಾಖಲೆ ಉಡೀಸ್​:


ಶುಭ್​ಮನ್ ಗಿಲ್​ ಏಕದಿನದಲ್ಲಿ ಅತಿ ವೇಗವಾಗಿ 1000 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು 19ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ 24 ಇನ್ನಿಂಗ್ಸ್‌ಗಳಲ್ಲಿ ಭಾರತದ ಪರ 1000 ಏಕದಿನ ರನ್ ಪೂರೈಸಿದ್ದರು. ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ದ್ವಿಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಈ ವೇಳೆ ಅವರು ಇಶಾನ್ ಕಿಶನ್ ಅವರ ದಾಖಲೆಯನ್ನು ಮುರಿದಿದ್ದಾರೆ.

Published by:shrikrishna bhat
First published: