Shubman Gill-Sara Tendulkar: ಸಚಿನ್ ಪುತ್ರಿ ಜೊತೆ ಬ್ರೇಕಪ್ ಮಾಡಿಕೊಂಡ್ರಾ ಶುಭಮನ್ ಗಿಲ್, ಏನಿದು ಸಾರಾ ಕಹಾನಿ?

Shubman Gill-Sara Tendulkar: ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಕ್ರಿಕೆಟಿಗ ಶುಭ್‌ಮನ್ ಗಿಲ್ ಸಂಬಂಧದ ಕುರಿತು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುತ್ತದೆ. ಆದರೆ ಇದೀಗ ಇವರಿಬ್ಬರ ನಡುವೆ ಬ್ರೇಕಪ್​ ಆಗಿದೆ ಎಂಬ ಸುದ್ದಿ ಒಂದು ಹರಿದಾಡುತ್ತಿದೆ.

ಶುಭಮನ್ ಗಿಲ್​-ಸಾರಾ ತೆಂಡೂಲ್ಕರ್

ಶುಭಮನ್ ಗಿಲ್​-ಸಾರಾ ತೆಂಡೂಲ್ಕರ್

  • Share this:
ಟೀಂ ಇಂಡಿಯಾದ ಸ್ಟಾರ್ ಓಪನರ್ ಶುಭಮನ್ ಗಿಲ್ (Shubman Gill)  ಭಾರತ ಮತ್ತು ಜಿಂಬಾಬ್ವೆ  (IND vs ZIM)  ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡದುಕೊಂಡರು. ಜೊತೆಗೆ ಕೊನೆಯ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಶತಕವನ್ನೂ ಗಳಿಸಿದರು. ಈ ಸರಣಿಯಲ್ಲಿ ಶುಭಮನ್ ಒಟ್ಟು 245 ರನ್ ಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇದೀಗ ಶುಭ್‌ಮನ್ ತಮ್ಮ ವೈಯಕ್ತಿಕ ಜೀವನದ ಕುರಿತು ಸುದ್ದಿಯಾಗಿದ್ದಾರೆ. ಹೌದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಮತ್ತು ಶುಭಮನ್ ಗಿಲ್​ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಇದಕ್ಕೆ ಇವರಿಬ್ಬರೂ ಈವರೆಗೂ ಯಾವ ಪ್ರತಿಕ್ರಿಯೆಗಳನ್ನೂ ನೀಡಿಲ್ಲ. ಆದರೆ ಇದೀಗ ಈ ಯುವ ಜೋಡಿ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಎಲ್ಲಡೆ ಕೇಳಿಬರುತ್ತಿದೆ.

ಸಾರಾ-ಶುಭಮನ್ ನಡುವೆ ಬ್ರೇಕಪ್?:

ಹೌದು, ಇವರಿಬ್ಬರ ನಡುವಿನ ಸಂಬಂಧದ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಸಹ ಇಬ್ಬರೂ ನಡುವೆ ಲವ್ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಅದೇ ರೀತಿ ಇದೀಗ ಈ ಯುವ ಜೋಡಿ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಎಲ್ಲಡೆ ಕೇಳಿಬರುತ್ತಿದೆ. ಹೌದು, ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಇಬ್ಬರೂ ಬ್ರೇಕಪ್ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಾರಾ-ಶುಭಮನ್ ಫೋಸ್ಟ್


ಶುಭಮನ್ ಮತ್ತು ಸಾರಾ ತೆಂಡೂಲ್ಕರ್ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಪೋಸ್ಟ್‌ಗಳಿಗೆ ಕಾಮೆಂಟ್, ಟ್ಯಾಗ್ ಮಾಡುತ್ತಿದ್ದರು. ಏತನ್ಮಧ್ಯೆ, 2019 ರಲ್ಲಿ, ಅವರಿಬ್ಬರ ನಡುವಿನ ಸಂಬಂಧದ ಕುರಿತು ಮಾತುಗಳು ಕೇಳಿಬಂದಿತ್ತು. ನೆಟ್ಟಿಗರು ಇಬ್ಬರ ಮೀಮ್‌ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಎರಡೂ ಹೆಸರುಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದವು. ಆದರೆ ಸಾರಾ ಮತ್ತು ಶುಬಮನ್​ ಯಾರೂ ಈ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೂ ಮುನ್ನ ಟೀಂ ಇಂಡಿಯಾಗೆ ಹೊಸ ಕೋಚ್​, ದ್ರಾವಿಡ್​ ಸ್ಥಾನ ತುಂಬಿದವರು ಯಾರು?

ಸಾಮಾಜಿಕ ಜಾಲತಾಣದಲ್ಲಿ ಸಾರಾ  ಫುಲ್ ಆ್ಯಕ್ಟೀವ್:

ಸಾರಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿರುತ್ತಾರೆ. ಸಾರಾ ಮಾಡೆಲಿಂಗ್​ನಲ್ಲಿ ಕೂಡಾ ಆಸಕ್ತಿ ಹೊಂದಿದ್ದಾರೆ. ಸಾರಾ ಅವರು ತಮ್ಮ ಫೋಟೋಗಳನ್ನು ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಾರಾ ಅವರಿಗೆ ಲಕ್ಷಾಂತರ ಫಾಲೋವರ್ಸ್ ಗಳಿದ್ದಾರೆ.

ಇದನ್ನೂ ಓದಿ: KL Rahul Atiya Shetty wedding: ಶೀಘ್ರದಲ್ಲೇ ರಾಹುಲ್​-ಆತಿಯಾ ಕಲ್ಯಾಣೋತ್ಸವ! ಬಿಗ್​ ನ್ಯೂಸ್​ ಕೊಟ್ಟ ಭಾವಿ ಮಾವ ಸುನೀಲ್​ ಶೆಟ್ಟಿ

ಶುಭಮನ್ ಗಿಲ್ ಐಪಿಎಲ್ 2019 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಅಲ್ಲದೇ ಇದೀಗ ಅವರು ಟೀಂ ಇಂಡಿಯಾಗೂ ಪಾದಾರ್ಪಣೆ ಮಾಡಿದ್ದು, ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೇ ಕೊನೆಯ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಭಾರತದ ಪರ ಶತಕ ಸಿಡಿಸಿದ 41ನೇ ಆಟಗಾರರಾದರು. ಇನ್ನು, ಗಿಲ್ ಈ ಹಿಂದೆ ಟೆಸ್ಟ್ ಮತ್ತು ODI ಎರಡರಲ್ಲೂ ಕೆಲವು ಸಂದರ್ಭಗಳಲ್ಲಿ 90ರನ್​ ಗಳಿಸಿ ಔಟ್ ಆಗುತ್ತಿದ್ದರು. ಆದರೆ, ಶತಕ ಬಾರಿಸುವಲ್ಲಿ ವಿಫಲರಾಗುತ್ತಿದ್ದರು. ಅಲ್ಲದೇ ಗಿಲ್​ ಅವರ ಈ ಸಾಧನೆಗೆ ಅವರ ಅಭಿಮಾನಿಗಳು ಮತ್ತು  ಮಾಜಿ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:shrikrishna bhat
First published: