Shubman Gill: ‘ಸಾರಾ’ಗೆ ಮಿಡಿದ ಗಿಲ್ ದಿಲ್! ಸಚಿನ್ ಪುತ್ರಿ ಬಳಿಕ ಶುಭ್‌ಮನ್‌ ಸಂ'ಸಾರ' ಸೇರ್ತಾರಾ ಈ ಬೆಡಗಿ?

Shubman Gill: ಜಿಂಬಾಬ್ವೆ ವಿರುದ್ದ ಭರ್ಜರಿ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಶುಭ್​ಮನ್ ಗಿಲ್, ಸದ್ಯ ಲವ್ ವಿಷಯದಿಂದ ಸುದ್ದಿಯಾಗುತ್ತಿದ್ದಾರೆ. ಅದರಲ್ಲಿಯೂ ಈ ಬಾರಿಯೂ ಸಾರಾ ಎಂಬ ಹೆಸರಿನೊಂದಿಗೆ ಗಿಲ್ ಹೆಸರು ಥಳುಕು ಹಾಕಿಕೊಂಡಿದೆ ಎಂಬುದೇ ಇಲ್ಲಿ ವಿಶೇಷ! ಹಾಗಿದ್ರೆ ಗಿಲ್‌ ಬೋಲ್ಡ್ ಆಗಿದ್ದು ಯಾರಿಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕ್ರಿಕೆಟಿಗರಿಗೂ ಮತ್ತು ಬಾಲಿವುಡ್​ ಮಂದಿಗೂ ಮೊದಲಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ನಂಟು ಇರುತ್ತಲೇ ಇದೆ. ಹೌದು, ಬಾಲಿವುಡ್​ ನಟಿಯರ ಜೊತೆ ಟೀಂ ಇಂಡಿಯಾ ಆಟಗಾರರ ಪ್ರೇಮ ಪ್ರಸಂಗಗಳು, ಮದುವೆಗಳು ಎಲ್ಲವನ್ನೂ ಕೇಳುತ್ತಲೇ ಇರುತ್ತೇವೆ. ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ತಾರೆಯರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು ಸಂತೋಷದಿಂದ ಇದ್ದಾರೆ. ಆದರೆ ಇದೀಗ ಭಾರತ ತಂಡದ ಯುವ ಆಟಗಾರನೊಬ್ಬನ ಹೆಸರು ಬಾಲಿವುಡ್​ ಬೆಡಗಿಯರ ಜೊತೆ ಥಳುಕು ಹಾಕಿಕೊಳ್ಳುತ್ತಿದೆ. ಟೀಂ ಇಂಡಿಯಾದ ಯುವ ಆಟಗಾರ ಶುಭ್​ಮನ್ ಗಿಲ್​ ಹೆಸರು ಇದೀಗ ಬಾಲಿವುಡ್​ ನಟಿಯರೊಂದಿಗೆ ಸೇರಿಕೊಳ್ಳುತ್ತಿದ್ದು, ಸಖತ್ ಸದ್ದು ಮಾಡುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಗಿಲ್​ ಹೆಸರು ಇಬ್ಬರು ಸಾರಾ ಎನ್ನುವವರ ಜೊತೆ ಕೇಳಿಬರುತ್ತಿದೆ.

ಸಾರಾ ಜೊತೆ ಗಿಲ್​ ಡೇಟಿಂಗ್​:

ಹೌದು, ಟಿಂ ಇಂಡಿಯಾದ ಯುವ ಆಟಗಾರ ಶುಭ್​ಮನ್​ ಗಿಲ್​ ಇದೀಗ ಸಖತ್​ ಚರ್ಚೆಯಲ್ಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗಿಲ್​ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ಬ್ರೇಕಪ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಗಿಲ್​ ಹೆಸರು ಮತ್ತೆ ಸಾರಾ ಜೊತೆ ಸೇರಿಕೊಂಡಿದೆ. ಆದರೆ ಈ ಬಾರಿ ಸಾರಾ ಸಚಿನ್​ ಪುತ್ರಿ ಜೊತೆ ಅಲ್ಲಾ ಬದಲಿಗೆ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಜೊತೆ.


ಇವರಿಬ್ಬರೂ ರೆಸ್ಟೋರೆಂಟ್​​ ಒಂದರಲ್ಲಿ ಡಿನ್ನರ್ ಮಾಡುತ್ತಿರುವ ವಿಡಿಯೋವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ಸಾರಾ ಅಲಿ ಖಾನ್ ಮತ್ತು ಶುಭ್​ಮನ್ ಗಿಲ್​ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಸಖತ್ ವೈರಲ್ ಆಗಿದೆ. ಆದರೆ ಈ ಕುರಿತು ಈವರೆಗೂ ಗಿಲ್​ ಅಥವಾ ಸಾರಾ ಅಧಿಕೃತವಾಗಿ ಹೇಳಿಕೊಂಡಿಲ್ಲ.

ಇದನ್ನೂ ಓದಿ: Shubman Gill: 3ನೇ ವಯಸ್ಸಿನಲ್ಲೇ ಕ್ರಿಕೆಟ್​ ಆರಂಭ, ಹೇಗಿದೆ ನೋಡಿ ಶುಭ್​ಮನ್ ಗಿಲ್​ ಲೈಫ್​ಸ್ಟೈಲ್​

ಸಾರಾ-ಸಾರಾ ಏನಿದು ಗಿಲ್​ ಮರ್ಮ:

ಇಂತಹದೊಂದು ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಗಿಲ್​ ಮೊದಲು ಸಚಿನ್ ಪುತ್ರಿ ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಎಲ್ಲಡೆ ವೈರಲ್ ಆಗಿತ್ತು. ಅದಾದ ಬಳಿಕ ಇದೀಗ ಸಾರಾ ಅಲಿ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ನೆಟ್ಟಿಗರು ಗಿಲ್​ ಅವರಿಗೆ ಸಾರಾ ಎಂಬ ಹೆಸರಿನೊಂಡಿಗೆ ಸಾರಾ ಎಂಬ ಹೆಸರು ಹೆಚ್ಚು ಸೂಕ್ತವಾಗಿದೆ ಎಂದೆಲ್ಲಾ ತಮಾಷೆಯಾಗಿ ಟ್ರೋಲ್​ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಮೀಮ್ಸ್ ಗಳು ಸಖತ್ ವೈರಲ್ ಆಗುತ್ತಿದೆ.

ಸಾರಾ ಜೊತೆ ಗಿಲ್​ ಹೆಸರು ಕೇಳಿಬರುತ್ತಿದ್ದಂತೆ ನೆಟ್ಟಿಗರು ಸಖತ್​ ತಮಾಷೆಯ ಮೀಮ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ಒಬ್ಬರು ಸಾರಾ ಹೆಸರಿನಿಂದ ಗಿಲ್​ ಗೊಂದಲಕ್ಕೆ ಒಳಗಾಗಿದ್ದಾರೆ ಎಂಬ ರೀತಿಯಲ್ಲಿ ಟ್ರೋಲ್​ ಮಾಡಿದ್ದಾರೆ.

ಇನ್ನೊಂದು ಟ್ವೀಟ್​ನಲ್ಲಿ ಧೂಮ್ ಸಿನಿಮಾದ ಕ್ಯಾರಟಕ್ಟರ್​ ಬಳಸಿಕೊಂಡು ಗಿಲ್​ ಮೊದಲು ಸಾರಾ ಅವರನ್ನು ನೋಡಿದ ತಕ್ಷಣ ಅವರ ಕಲ್ಪನೆ ಹೇಗಿರುತ್ತದೆ ಎಂದು ಮೀಮ್ಸ್ ಮಾಡಿದ್ದು, ಸಖತ್ ವೈರಲ್ ಆಗಿದೆ.

ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಗಿಲ್​  ಕಾಲ್ ಮಾಡುವಾಗ ಕಾಲಿಂಗ್​ ಸಾರಾ ಎಂದಲ್ಲಿ ಪೋನ್​ ಸಹ ಕನ್​ಫ್ಯೂಸ್​ ಆಗಿ ಯಾವ ಸಾರಾ ಎಂದು ಕೇಳುತ್ತದೆ ಎಂಬ ರೀತಿ ತಮಾಷೆಯ ಮೀಮ್ಸ್ ಮಾಡಿದ್ದಾರೆ.
Published by:shrikrishna bhat
First published: