Shubman Gill: ಗುಜರಾತ್ ತಂಡಕ್ಕೆ ವಿದಾಯ ಹೇಳಿದ್ರಾ ಶುಭಮನ್ ಗಿಲ್? GT ಟ್ವೀಟ್ ವೈರಲ್

ಶುಭ್​ಮನ್ ಗಿಲ್

ಶುಭ್​ಮನ್ ಗಿಲ್

Shubman Gill: ಐಪಿಎಲ್ 15ನೇ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶುಬ್‌ಮನ್ ಗಿಲ್ ತಂಡವನ್ನು ತೊರೆದಿದ್ದಾರೆಯೇ? ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಚರ್ಚೆ ನಡೆಯುತ್ತಿದೆ.

  • Share this:

ಐಪಿಎಲ್ 15ನೇ (IPL) ಸೀಸನ್ ನಲ್ಲಿ ಬಿಸಿಸಿಐ (BCCI) ಎರಡು ಹೊಸ ತಂಡಗಳನ್ನು ಸೇರಿಸಿಕೊಂಡಿದೆ. ಅವುಗಳಲ್ಲಿ ಒಂದು ಲಕ್ನೋ ಸೂಪರ್‌ಜೈಂಟ್ಸ್ (Lucknow Super Giants) ಮತ್ತು ಇನ್ನೊಂದು ಗುಜರಾತ್ ಟೈಟಾನ್ಸ್ (Gujarat Titans). ಈ ಪೈಕಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಆಡಿದ ಗುಜರಾತ್ ಈ ವರ್ಷದ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡಿತು. ಮೊದಲ ಐಪಿಎಲ್ ಟೂರ್ನಿಯನ್ನು ಆಡಿದ ಈ ತಂಡ ತನ್ನ ಅತ್ಯುತ್ತಮ ಪ್ರದರ್ಶನ ನೀಡಿ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತು. ಗುಜರಾತ್ ಟೈಟಾನ್ಸ್‌ನ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಈ ಟೂರ್ನಿಯಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಆದರೆ ಇದೇ ಗಿಲ್ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದಿದ್ದಾರಾ? ಹೀಗೊಂದು ಪ್ರಶ್ನೆ ಮೂಡುತ್ತದೆ. ಇದಕ್ಕೆ ಕಾರಣ ಗುಜರಾತ್ ಫ್ರಾಂಚೈಸಿಯ ಟ್ವೀಟ್.


ಅನುಮಾನ ಹುಟ್ಟಿಸಿದ GT ಟ್ವೀಟ್​:


ಹೌದು, ಗುಜರಾತ್ ಟೈಟಾನ್ಸ್ ಟ್ವೀಟ್‌ನಲ್ಲಿ, ಫ್ರಾಂಚೈಸಿ ಮೂಲಕ, ನಿಮ್ಮ ಪ್ರಯಾಣವು ಅವಿಸ್ಮರಣೀಯವಾಗಿದೆ. ನಿಮ್ಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇವೆ ಎಂದು ಬರೆದು ಟ್ವೀಟ್​ ಮಾಡಿದೆ. ಇದಾದ ಬಳಿಕ ಈ ಟ್ವೀಟ್​ ಅನ್ನು ರೀ ಟ್ವೀಟ್ ಮಾಡಿರುವ ಶುಭ್​ಮನ್ ಗಿಲ್​ ಸಂತೋಷದ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಗಿಲ್ ನಿಜವಾಗಿಯೂ ಗುಜರಾತ್ ಫ್ರಾಂಚೈಸಿಗೆ ವಿದಾಯ ಹೇಳಿದ್ದಾರೆಯೇ? ಇಲ್ಲವದಾದಲ್ಲಿ ಇದು ಪ್ರಚಾರ ಕಾರ್ಯಕ್ರಮದ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.ಐಪಿಎಲ್​ನಲ್ಲಿ ಶುಭ್​ಮನ್ ಗಿಲ್​ ಪ್ರದರ್ಶನ:


ಐಪಿಎಲ್‌ನ ಕೊನೆಯ ಋತುವಿನಲ್ಲಿ, 23 ವರ್ಷದ ಶುಭಮನ್ ಗಿಲ್ 16 ಪಂದ್ಯಗಳಲ್ಲಿ 483 ರನ್ ಗಳಿಸಿದ್ದರು. ಇದರಲ್ಲಿ 4 ಅರ್ಧಶತಕಗಳೂ ಸೇರಿದ್ದವು. ಅದಕ್ಕೂ ಮೊದಲು, ಅವರು 2018 ರಲ್ಲಿ 19 ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಅವರು 74 ಐಪಿಎಲ್ ಪಂದ್ಯಗಳಲ್ಲಿ 32 ಸರಾಸರಿಯಲ್ಲಿ 14 ಅರ್ಧಶತಕಗಳೊಂದಿಗೆ 1900 ರನ್ ಗಳಿಸಿದ್ದಾರೆ. ಇದರ ನಡುವೆ ಗಿಲ್‌ಗಾಗಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪೈಪೋಟಿ ನಡೆಸುತ್ತಿವೆ ಎಂಬ ವರದಿಗಳಿವೆ.


ಇದನ್ನೂ ಓದಿ: IND vs AUS: ಆಸೀಸ್​ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ತಂಡದಿಂದ ಸ್ಟಾರ್ ​ಬೌಲರ್​ ಔಟ್​


ಸಾರಾ-ಶುಭಮನ್ ನಡುವೆ ಬ್ರೇಕಪ್?:


ಶುಭ್​ಮನ್ ಗಿಲ್​ ಮತ್ತು ಸಾರಾ ತೆಂಡೂಲ್ಕರ್  ನಡುವಿನ ಸಂಬಂಧದ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಸಹ ಇಬ್ಬರೂ ನಡುವೆ ಲವ್ ಇದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಅದೇ ರೀತಿ ಈ ಯುವ ಜೋಡಿ ನಡುವೆ ಬ್ರೇಕಪ್ ಆಗಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿತ್ತು. ಆದರೆ ಈ ಕುರಿತು ಈವರೆಗೂ ಇವರಿಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ,


ಇದರ ನಡುವೆ ಶುಭ್​ಮನ್ ಗಿಲ್ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದರು, ನಂತರ ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.


ಇದನ್ನೂ ಓದಿ: IND vs AUS: ಭಾರತ-ಆಸ್ಟ್ರೇಲಿಯಾ ಸರಣಿ; ಸ್ಥಳ, ಸಮಯ, ಲೈವ್ ಸ್ಟ್ರೀಮಿಂಗ್ ಕುರಿತ ಸಂಪೂರ್ಣ ವಿವರ


ಟೀಂ ಇಂಡಿಯಾದಲ್ಲಿ ಮಿಂಚುತ್ತಿರುವ ಯಂಗ್​ ಪ್ಲೇಯರ್:


ಶುಭ್​ಮನ್ ಗಿಲ್ ಅವರು 2020 ರಲ್ಲಿ ಭಾರತಕ್ಕಾಗಿ ತಮ್ಮ ಚೊಚ್ಚಲ ಟೆಸ್ಟ್ ಮತ್ತು 2019 ರಲ್ಲಿ ODI ಗೆ ಪಾದಾರ್ಪಣೆ ಮಾಡಿದರು. ಶುಭ್​ಮನ್ ಇದುವರೆಗೆ 11 ಟೆಸ್ಟ್ ಪಂದ್ಯಗಳಲ್ಲಿ 30.47ರ ಸರಾಸರಿಯಲ್ಲಿ 579 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಏಕದಿನದಲ್ಲಿ, ಅವರು 9 ಪಂದ್ಯಗಳಲ್ಲಿ 71.28 ರ ಸರಾಸರಿಯಲ್ಲಿ 499 ರನ್ ಗಳಿಸಿದ್ದಾರೆ.

First published: