IPL 2022: KKR ತಂಡಕ್ಕೆ ಯಂಗ್​ & ಎನರ್ಜಿಟಿಕ್​​ ಕ್ಯಾಪ್ಟನ್​! ಈ ಸಲ ಕಪ್​ ಗೆಲ್ಲೋದು ನಾವೇ ಎಂದ ಶ್ರೇಯಸ್​ ಅಯ್ಯರ್​

ಹೌದು, ಕಳೆದ ಬಾರಿ ನಡೆದ ಆಟಗಾರರ ಆಕ್ಷನ್ ಪ್ರಕ್ರಿಯೆಯಲ್ಲಿ ಕೆ.ಕೆ.ಆರ್(KKR) ಫ್ರ್ಯಾಂಚೈಸಿಯು ಐಯ್ಯರ್ ಅವರನ್ನು ಬರೋಬ್ಬರಿ 12.25 ಕೋಟಿ ರೂಪಾಯಿಗೆ ಖರೀದಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಅಷ್ಟೆ ಅಲ್ಲದೆ, ಈ ಬಾರಿಯ ಐಪಿಎಲ್ ಸರಣಿಯಲ್ಲಿ ಕೋಲ್ಕತ್ತಾ ತಂಡವನ್ನು ಶ್ರೇಯಸ್ ಅವರು ನಾಯಕ(Captain)ನಾಗಿಯೂ ಮನ್ನಡೆಸಲಿದ್ದಾರೆ.

ಶ್ರೇಯಸ್​ ಅಯ್ಯರ್​, ಬ್ರೆಂಡನ್ ಮೆಕಲಮ್

ಶ್ರೇಯಸ್​ ಅಯ್ಯರ್​, ಬ್ರೆಂಡನ್ ಮೆಕಲಮ್

 • Share this:
  ಈಗಾಗಲೇ ನಿಮಗೆಲ್ಲ ಗೊತ್ತಿರುವಂತೆ 2022ನೇ ಐಪಿಎಲ್(IPL) ಆವೃತ್ತಿಗಾಗಿ ಭರ್ಜರಿ ಹರಾಜು(Auction) ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಹಲವರು ಅಮೋಘವಾದ ಮೊತ್ತಕ್ಕೆ ವಿವಿಧ ತಂಡಗಳನ್ನು ಸೇರಿಕೊಂಡಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡವನ್ನು ಐಪಿಎಲ್‌ನಲ್ಲಿ ಮುನ್ನಡೆಸಿದ್ದ ಭಾರತೀಯ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಶ್ರೇಯಸ್ ಐಯ್ಯರ್(Shreyas Ayyar) ಅವರು ಈ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್(Kolkatta Night Riders) ತಂಡ ಸೇರಿಕೊಂಡಿದ್ದಾರೆ. ಹೌದು, ಕಳೆದ ಬಾರಿ ನಡೆದ ಆಟಗಾರರ ಆಕ್ಷನ್ ಪ್ರಕ್ರಿಯೆಯಲ್ಲಿ ಕೆ.ಕೆ.ಆರ್(KKR) ಫ್ರ್ಯಾಂಚೈಸಿಯು ಐಯ್ಯರ್ ಅವರನ್ನು ಬರೋಬ್ಬರಿ 12.25 ಕೋಟಿ ರೂಪಾಯಿಗೆ ಖರೀದಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಅಷ್ಟೆ ಅಲ್ಲದೆ, ಈ ಬಾರಿಯ ಐಪಿಎಲ್ ಸರಣಿಯಲ್ಲಿ ಕೋಲ್ಕತ್ತಾ ತಂಡವನ್ನು ಶ್ರೇಯಸ್ ಅವರು ನಾಯಕ(Captain)ನಾಗಿಯೂ ಮನ್ನಡೆಸಲಿದ್ದಾರೆ.

  ಕೆಕೆಆರ್​ ಬಗ್ಗೆ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ ಹೇಳಿದ್ದೇನು?

  ಈ ಮಧ್ಯೆ ಕೋಲ್ಕತ್ತಾ ತಂಡಕ್ಕೆ ಪ್ರಥಮ ಬಾರಿ ನಾಯಕನಾದ ಮೇಲೆ ತಮ್ಮ ಮನದಾಳದಿಂದ ಮಾತನಾಡಿರುವ ಶ್ರೇಯಸ್ ಅವರು ತಂಡದ ಪ್ರತಿಯೊಬ್ಬ ಆಟಗಾರ ಪ್ರೇರಣೆಗೊಳ್ಳುವಂತಹ ಮಾತನ್ನೊಂದನ್ನು ಆಡಿದ್ದಾರೆ. ಶ್ರೇಯಸ್ ಅವರು ತಮ್ಮ ತಂಡಕ್ಕೆ ಸಂಬಂಧಿಸಿದಂತೆ "ಒಂದು ತಂಡವಾಗಿ ನಾವೆಲ್ಲರೂ ಪರಸ್ಪರರ ಕಾಳಜಿವಹಿಸಬೇಕು" ಎಂದು ಹೇಳಿದ್ದಾರೆ. ಕೋಲ್ಕತ್ತ ತಂಡದ ನಾಯಕನಾಗಿ ತಂಡಕ್ಕೆ ಮಾಡಿದ ತಮ್ಮ ಚೊಚ್ಚಲ ಭಾಷಣದಲ್ಲಿ ಶ್ರೇಯಸ್, "ತಂಡದ ಪ್ರತಿಯೊಬ್ಬರೂ ಪರಸ್ಪರರ ಕಾಳಜಿ ವಹಿಸಬೇಕು ಹಾಗೂ ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲೂ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಇರಬೇಕು" ಎಂದು ಹೇಳಿದ್ದಾರೆ.

  ಆಟಗಾರರಿಗೆ ಹುಮ್ಮಸ್ಸು ನೀಡಿದ  ಕ್ಯಾಪ್ಟನ್​ ಶ್ರೇಯಸ್​!

  ಕೆಕೆಆರ್ ತಂಡವು ತನ್ನ ನಾಯಕ ಪ್ರಥಮ ಬಾರಿಗೆ ತನ್ನ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಅನ್ನು ಹಂಚಿಕೊಂಡಿದೆ. ಇದರಲ್ಲಿ ಶ್ರೇಯಸ್ ಅವರು ತಂಡದ ಆಟಗಾರರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ಹಾಗೂ ಅವರನ್ನು ಉತ್ತೇಜಿಸುತ್ತಿರುವುದನ್ನು ಕಾಣಬಹುದಾಗಿದೆ.

  ಇದನ್ನೂ ಓದಿ: ಬೂಮ್ರಾಗಿಂತ ಡೇಂಜರ್ ಇವ್ರು! ಮ್ಯಾಚ್ ಉಲ್ಟಾ ಆಗೋಕೆ ಒಂದೇ ಒಂದು ಬಾಲ್ ಸಾಕು!

  ‘ಪ್ರತಿಯೊಬ್ಬರಲ್ಲೂ ನಾಯಕನನ್ನು ನೋಡುತ್ತೇನೆ’

  ಶ್ರೇಯಸ್ ಅವರು ತಮ್ಮ ತಂಡವನ್ನು ಉದ್ದೇಶಿಸುತ್ತ, "ನಿಮ್ಮನ್ನೆಲ್ಲ ನೋಡಿ ನನಗೆ ತುಂಬ ಸಂತಸವಾಗಿದೆ. ನನಗೆ ಗೊತ್ತು ಇದು ನಾವೆಲ್ಲರೂ ಕೂಡಿಕೊಂಡು ಸಮಯ ಕಳೆಯಬೇಕಾದ ಸಂದರ್ಭವಲ್ಲ, ನನಗೆ ಗೊತ್ತಿದೆ ನಮಗೆ ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸರಿಯಾದ ಸಮಯಾವಕಾಶ ಸಿಕ್ಕಿಲ್ಲ ಎಂದು, ಆದಾಗ್ಯೂ ನಾನು ನಿಮ್ಮೆಲ್ಲರನ್ನೂ ನೋಡಿದಾಗ ನಿಮ್ಮಲ್ಲಿ ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣಗಳಿರುವುದನು ನಾನು ಕಾಣಬಲ್ಲೆ" ಎಂದಿದ್ದಾರೆ.

  ಆಟಗಾರರಿಗೆ ಕಿವಿ ಮಾತು ಹೇಳಿದ ಶ್ರೇಯಸ್​ ಅಯ್ಯರ್​!

  "ಒಂದು ತಂಡವಾಗಿ ನಾವು ಪ್ರತಿಯೊಬ್ಬರೂ ಪರಸ್ಪರರ ಬಗ್ಗೆ ಕಾಳಜಿವಹಿಸಬೇಕು, ಏಕೆಂದರೆ ಇದು ಸುಲಭ ಮಾರ್ಗವಲ್ಲ. ಕಷ್ಟಕರ ಸವಾಲುಗಳು ಎದುರಾಗಬಹುದು, ಒಮ್ಮೆ ಕೆಟ್ಟ ಸಂದರ್ಭ ಬಂದರೆ ಇನ್ನೊಮ್ಮೆ ಒಳ್ಳೆಯ ಸಮಯ ಬರಬಹುದು. ಹಾಗಾಗಿ ಈ ಪಯಣದಲ್ಲಿ ನಾವು ಪ್ರತಿಯೊಬ್ಬರೂ ಪರಸ್ಪರ ಬೆನ್ನಿಗೆ ನಿಲ್ಲಬೇಕು ಹಾಗೂ ಬಾಹ್ಯವಾಗಿ ಬರುವ ಒತ್ತಡ ಭರಿತ ನಿರೀಕ್ಷೆಗಳು ನಮ್ಮ ಮನದಲ್ಲಿ ಸುಳಿಯದಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ನಾವೇ ಇರುತ್ತೇವೆ. ಹಾಗಾಗಿ ನಮ್ಮ ಪರಸ್ಪರರ ಬೆಂಬಲ ನಮ್ಮನ್ನು ಮುನ್ನಡೆಸುತ್ತದೆ" ಎಂದು ನಾಯಕನಾಗಿ ಶ್ರೇಯಸ್ ಅವರು ತಮ್ಮ ತಂಡದ ಆಟಗಾರರಿಗೆ ಕಿವಿ ಮಾತನ್ನು ಹೇಳಿದ್ದಾರೆ.

  ಇದನ್ನೂ ಓದಿ: ನಮ್ಮ RCB ತಂಡದ ಮಾಲೀಕರು ಯಾರು? ನಿಮಗೆ ಗೊತ್ತಿಲ್ಲದ ಮಾಹಿತಿ ಇದು!

  ಇದೇ ಮಾರ್ಚ್ 26 ರಂದು ಕೆಕೆಆರ್ ತನ್ನ ಪಂದ್ಯವನ್ನು ಬಲಿಷ್ಠ ಸಿಎಸ್‌ಕೆ ತಂಡದೊಂದಿಗೆ ಆಡಲಿದೆ. ಈ ಸಂದರ್ಭದಲ್ಲಿ ತಂಡದ ಆಟಗಾರರಿಗೆ ಸ್ಫೂರ್ತಿ ನೀಡಿರುವ ಶ್ರೇಯಸ್ ಅವರು ಆಟಗಾರರನ್ನು ಉದ್ದೇಶಿಸಿ "ಕೇವಲ ಒತ್ತಡವಲ್ಲದೆ ನಾವು ಪ್ರತಿಯೊಬ್ಬರೂ ಆಟದಲ್ಲಿ ಆನಂದ ಹೊಂದುವುದು ಅಷ್ಟೆ ಮಹತ್ವವಾಗಿದೆ. ಹಾಗಾಗಿ ನಿಮ್ಮ ನಿಮ್ಮ ಆಟದಲ್ಲಿ ನೀವೇ ಒಬ್ಬರಿಗೊಬ್ಬರು ಸವಾಲು ಹಾಕುತ್ತ ಆಟ ಆನಂದಿಸಿ, ಚೆನ್ನೈ ಸೂಪರ್ ಕಿಂಗ್ಸ್ ಜೊತೆ ನಡೆಯುವ ಪಂದ್ಯದಲ್ಲಿ ನಮಗೆ ಯಾವ ಖೇದಗಳು ಇರದಂತೆ ನೋಡಿಕೊಳ್ಳೋಣ" ಎಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ.
  Published by:Vasudeva M
  First published: