ಅಭಿಮಾನಿಗಳ ಒತ್ತಾಯ; ಟೆಸ್ಟ್​ ಕ್ರಿಕೆಟ್​ಗೆ​ ರೀ ಎಂಟ್ರಿ ಕೊಡ್ತಾರಾ ಧೋನಿ..?

news18
Updated:August 5, 2018, 6:14 PM IST
ಅಭಿಮಾನಿಗಳ ಒತ್ತಾಯ; ಟೆಸ್ಟ್​ ಕ್ರಿಕೆಟ್​ಗೆ​ ರೀ ಎಂಟ್ರಿ ಕೊಡ್ತಾರಾ ಧೋನಿ..?
news18
Updated: August 5, 2018, 6:14 PM IST
ವಿನಯ್ ಭಟ್, ನ್ಯೂಸ್ 18 ಕನ್ನಡ

ಇಂಗ್ಲೆಂಡ್​​ನ ಎಡ್ಜ್​​​​ಬಾಸ್ಟ್​​ನ್​​ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ಭಾರೀ ಮುಖಭಂಗವಾಗಿದೆ. 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಕಾಯ್ದುಕೊಂಡು ಸಾವಿರದ ಟೆಸ್ಟ್​ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಮಧ್ಯೆ ಟೀಂ ಇಂಡಿಯಾಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಕೀಪರ್​​ ಸಮಸ್ಯೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಎಂ. ಎಸ್ ಧೋನಿ 2014ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಬಳಿಕ ಧೋನಿ ಸ್ಥಾನ ತುಂಬಲು ಯಾವೊಬ್ಬ ವಿಕೆಟ್ ಕೀಪರ್ ಕೂಡಾ ಟೀಂ ಇಂಡಿಯಾಗೆ ಸಿಗುತ್ತಿಲ್ಲ. ಧೋನಿ ವಿದಾಯದ ಬಳಿಕ ವೃದ್ದಿಮಾನ್ ಸಾಹ ತಂಡಕ್ಕೆ ಸೇರಿಕೊಂಡರಾದರೂ ಆಡಿದ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಧೋನಿ ನಿವೃತ್ತಿ ಬಳಿಕ 29 ಟೆಸ್ಟ್ ಪಂದ್ಯವನ್ನಾಡಿರುವ ಸಾಹ ಒಟ್ಟು 1017 ರನ್ ಕಲೆಹಾಕಿದ್ದಾರೆ. ವಿಕೆಟ್ ಕೀಪಿಂಗ್​ನಲ್ಲಿ 69 ಕ್ಯಾಚ್ ಹಾಗೂ 10 ಸ್ಟಂಪ್ ಇವರ ಖಾತೆಯಲ್ಲಿದೆ. ಒಟ್ಟು 3 ಶತಕ ಬಾರಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ 117 ರನ್ ಬಾರಿಸಿದ್ದು ಇವರ ಗರಿಷ್ಠ ಸ್ಕೋರ್ ಆಗಿದೆ.

ಸದ್ಯ ಸಾಹ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಇಂಗ್ಲೆಂಡ್ ಟೆಸ್ಟ್​​ಗೆ ದಿನೇಶ್ ಕಾರ್ತಿಕ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಆದರೆ ಇಂಗ್ಲೆಂಡ್ ವಿರುದ್ಧ ಕಾರ್ತಿಕ್ ವಿಕೆಟ್ ಕೀಪಿಂಗ್ ಮಾಡಲು ಪರದಾಡುತ್ತಿದ್ದು, ಬ್ಯಾಟಿಂಗ್​​ನಲ್ಲೂ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕಾರ್ತಿಕ್ ಗಳಿಸಿದ್ದು ಒಟ್ಟು 20 ರನ್​. ಮೊದಲ ಇನ್ನಿಂಗ್ಸ್​ನಲ್ಲಿ ಶೂನ್ಯಕ್ಕೆ ನಿರ್ಗಮಿಸಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ 20 ರನ್ ಬಾರಿಸಿದ್ದಾರಷ್ಟೆ. ಹೀಗಾಗೆ ಕಾರ್ತಿಕ್ ಕಳಪೆ ಆಟದ ಬಗ್ಗೆ ಸಿಟ್ಟಿಗೆದ್ದಿರುವ ಟ್ವಿಟರಿಗರು ಟೆಸ್ಟ್​​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಧೋನಿ ಮರಳಿ ಬರುವಂತೆ ಬೇಡಿಕೆಯಿಟ್ಟಿದ್ದಾರೆ.

ಧೋನಿಯ ಕೆಲ ಅಭಿಮಾನಿಗಳು ಅವರು ಟೆಸ್ಟ್​​ ಕ್ರಿಕೆಟ್​ಗೆ ಮರಳುವಂತೆ ಒತ್ತಾಯಿಸಿದರೆ, ಇನ್ನೂ ಕೆಲವರು ಕಾರ್ತಿಕ್​ಗೆ ಟಿಪ್ಸ್​ ಕೊಡುವಂತೆ ಸಲಹೆ ಮಾಡಿದ್ದಾರೆ. ಅಲ್ಲದೆ ಧೋನಿ ಅವರು ತಂಡದಲ್ಲಿ ಇರುತ್ತಿದ್ದರೆ 31 ರನ್​ಗಳನ್ನು ಪಡೆದು ಸುಲಭವಾಗಿ ಜಯ ಸಾಧಿಸಬಹುದಿತ್ತು ಎಂಬ ಮಾತುಗಳು ಟ್ವಿಟರ್​ನಲ್ಲಿ ಕೇಳಿ ಬಂದಿವೆ.

    2004ರಲ್ಲಿ ಟೀಂ ಇಂಡಿಯಾ ಸೇರಿಕೊಂಡ ಧೋನಿ ಕೀಪಿಂಗ್ ಜೊತೆಗೆ ತಂಡದ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದರು. ಟೆಸ್ಟ್​​ನಲ್ಲಿ ಒಟ್ಟು 90 ಪಂದ್ಯಗಳನ್ನಾಡಿರುವ ಧೋನಿ 4, 876 ರನ್​ ಕಲೆಹಾಕಿದ್ದಾರೆ. ಧೋನಿ ಗರಿಷ್ಠ ಸ್ಕೋರ್ 224 ಆಗಿದ್ದು, 256 ಕ್ಯಾಚ್ ಹಾಗೂ 38 ಸ್ಟಂಪ್ ಮಾಡಿದ್ದಾರೆ. ನಾಯಕನಾಗಿ ಒಟ್ಟು 60 ಟೆಸ್ಟ್ ಪಂದ್ಯವನ್ನು ಮುನ್ನಡೆಸಿರುವ ಧೋನಿ ಇವುಗಳಲ್ಲಿ 27 ಪಂದ್ಯವನ್ನು ಗೆದ್ದಿದ್ದರೆ 18 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಉಳಿದ 15 ಪಂದ್ಯದಲ್ಲಿ ಡ್ರಾ ಆಗಿದೆ. ಅಲ್ಲದೆ ಧೋನಿ ಬಿಟ್ಟರೆ ವಿಕೆಟ್ ಕೀಪಿಂಗ್​ನಲ್ಲಿ ಈವರೆಗೆ ಯಾರೊಬ್ಬರೂ ಶಾಶ್ವತವಾಗಿ ನೆಲೆಯೂರಿಲ್ಲ.

ಧೋನಿ ನಿವೃತ್ತಿ ಬಳಿಕ ನಮನ್ ಓಜಾ, ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್​​ ಅವರು ವಿಕೆಟ್ ಕೀಪಿಂಗ್ ಮಾಡಿದ್ದರು. ಆದರೆ ಇವರು ಅನುಭವಿಗಳೇ ಹೊರತು ಕೀಪಿಂಗ್-ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಬಿಸಿಸಿಐಗೆ ಸದ್ಯ ಟೆಸ್ಟ್​ ಕ್ರಿಕೆಟ್​ನಲ್ಲಿ ವಿಕೆಟ್ ಕೀಪಿಂಗ್ ಬಗ್ಗೆ ತಲೆನೋವು ಶುರುವಾಗಿದೆ. ಅಂತೆಯೇ ಮುಂದಿನ ದಿನಗಳಲ್ಲಿ ಏಕದಿನ ಕ್ರಿಕೆಟ್​ಗೆ ಧೋನಿ ನಿವೃತ್ತಿ ಘೋಷಿಸಿದ ಬಳಿಕ ಧೋನಿ ಸ್ಥಾನಕ್ಕೆ ಯಾರು ಆಯ್ಕೆ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ದಿನೇಶ್ ಕಾರ್ತಿಕ್ ಕಳಪೆ ಆಟದ ಬಗ್ಗೆ ಸಿಡಿಮಿಡಿಗೊಂಡ ಕ್ರಿಕೆಟ್ ಅಭಿಮಾನಿಗಳು:

    
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...