Ravichandran Ashwin| ಟೆಸ್ಟ್ ಕ್ರಿಕೆಟ್‌ನಲ್ಲಿ ತಂದೆ ಆಡುತ್ತಿದ್ದಾರೆಯೇ ಎಂದು ದೂರದರ್ಶಕದಲ್ಲಿ ವೀಕ್ಷಿಸಿದ ಸ್ಪಿನ್ ಬೌಲರ್ ಅಶ್ವಿನ್ ಪುತ್ರಿ

ಕೊನೆಗೂ ಆ ಪುಟ್ಟ ಮಗಳಿಗೆ ತನ್ನ ಅಪ್ಪ ಆಟದ ಮೈದಾನದಲ್ಲಿ ಕಂಡರೆ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಎಲ್ಲರಿಗೂ ತಿಳಿದೇ ಇದೆ. ಇದನ್ನು ನೋಡಿ ನೆಟ್ಟಿಗರು ತುಂಬಾನೇ ಖುಷಿಯಾಗಿದ್ದಾರೆ ಮತ್ತು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ ಪುತ್ರಿ.

ರವಿಚಂದ್ರನ್ ಅಶ್ವಿನ್ ಪುತ್ರಿ.

  • Share this:

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವಂತಹ ನಾಲ್ಕನೇ ಟೆಸ್ಟ್ ಪಂದ್ಯವು ಗುರುವಾರದಂದು ದಿ ಓವಲ್ ನಲ್ಲಿ ಶುರುವಾಗಿದ್ದು, ಭಾರತ ಟೆಸ್ಟ್ ಕ್ರಿಕೆಟ್ ತಂಡದಿಂದ ಸ್ಪಿನ್ ಬೌಲರ್ ಆದ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಹಲವು ಜನ ಅಭಿಮಾನಿಗಳು ಬೇಸರಗೊಂಡಿದ್ದಾರೆ ಮತ್ತು ತಂಡದ ನಿರ್ಧಾರದ ಬಗ್ಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಂತಹ ನಿರ್ಧಾರದ ಬಗ್ಗೆ ತುಂಬಾ ಜನರು ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ, ಈ ವಿಷಯಕ್ಕೆ ಒಂದು ವಿರಾಮ ನೀಡುವಂತೆ ಅಶ್ವಿನ್ ಅವರ ಹೆಂಡತಿ ಪ್ರೀತಿ ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಅವರ ಪುಟ್ಟ ಮಗಳು ಅವರ ಅಪ್ಪ ನಾಲ್ಕನೆಯ ಟೆಸ್ಟ್ ನಲ್ಲಿ ಆಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ತುಂಬಾ ಕುತೂಹಲದಿಂದ ಓವಲ್ ಮೈದಾನದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿರುವಂತಹ ಸ್ಥಳದಿಂದ ದೂರದರ್ಶಕದ ಮೂಲಕ ನೋಡುತ್ತಿರುವಂತಹ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.


    ಕೊನೆಗೂ ಆ ಪುಟ್ಟ ಮಗಳಿಗೆ ತನ್ನ ಅಪ್ಪ ಆಟದ ಮೈದಾನದಲ್ಲಿ ಕಂಡರೆ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಎಲ್ಲರಿಗೂ ತಿಳಿದೇ ಇದೆ. ಇದನ್ನು ನೋಡಿ ನೆಟ್ಟಿಗರು ತುಂಬಾನೇ ಖುಷಿಯಾಗಿದ್ದಾರೆ ಮತ್ತು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.


    ಆ ಏಳು ಸೆಕೆಂಡುಗಳ ವೀಡಿಯೋ ತುಣುಕಿನಲ್ಲಿ ಮಗಳು ಅಪ್ಪನನ್ನು ತಂಡದಲ್ಲಿದ್ದಾರೆಯೇ ಎಂದು ತುಂಬಾ ಕುತೂಹಲದಿಂದ ನೋಡುತ್ತಿದ್ದಾರೆ. ಈ ವೀಡಿಯೋವನ್ನು ಹಂಚಿಕೊಳ್ಳುತ್ತಾ ಶೀರ್ಷಿಕೆಯಲ್ಲಿ “ಅಶ್ವಿನ್ ಅವರನ್ನು ಹುಡುಕುತ್ತಿದ್ದಾಳೆ” ಎಂದು ಬರೆದಿದ್ದರು. ಈ ವೀಡಿಯೋವನ್ನು ತುಂಬಾ ಜನರು ವೀಕ್ಷಿಸಿದ್ದು, 13,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು “ತುಂಬಾ ಚೆನ್ನಾಗಿದೆ”, “ಶಾಟ್ ಆಫ್ ದಿ ಸಿರೀಸ್” ಎಂದು ಪ್ರತಿಕ್ರಿಯಿಸಿದರೇ, ಇನ್ನೂ ಕೆಲವರು ಅಶ್ವಿನ್ ಅವರನ್ನು ತಂಡದಿಂದ ಕೈಬಿಡಬಾರದಿತ್ತು ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.


    ಅಶ್ವಿನ್ ಅವರನ್ನು ತಂಡದಿಂದ ಹೊರಗಿಟ್ಟಿರುವಂತಹ ಭಾರತೀಯ ಆಯ್ಕೆದಾರರ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ರಾಜಕಾರಿಣಿ ಶಶಿ ತರೂರ್ ಅವರು "ಇಂಗ್ಲೆಂಡ್ ನ ಅತ್ಯಂತ ಸ್ಪಿನ್ ಸ್ನೇಹಿ ಮೈದಾನದಲ್ಲಿ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ”, ಎಂದು ಬರೆದಿದ್ದಾರೆ.


    ಇದನ್ನೂ ಓದಿ: Ind vs Eng 4th Test; ಭಾರತ- ಇಂಗ್ಲೆಂಡ್ 4ನೇ ಟೆಸ್ಟ್ ಕ್ರಿಕೆಟ್ ವೇಳೆ 3ನೇ ಬಾರಿ ಪಿಚ್ ಒಳಗೆ ನುಗ್ಗಿದ ಜಾರ್ವೊ!

    ಈ ತಂಡವು ನಂಬಲ ಸಾಧ್ಯವಾಗಿದೆ. ನೀವು ನಿಮ್ಮ ಐದು ಅತ್ಯುತ್ತಮ ಬೌಲರ್ ಗಳನ್ನು ಆಯ್ಕೆ ಮಾಡುತ್ತೀರಿ, ಅದರಲ್ಲಿ ಅಶ್ವಿನ್ ಮೊದಲ ಅಥವಾ ಎರಡನೇ ಹೆಸರಾಗಿರಬೇಕು. ಓವಲ್ ನಲ್ಲಿ ಅವರನ್ನು ಮತ್ತು ವೇಗದ ಬೌಲರ್ ಆದ ಮೊಹಮ್ಮದ್ ಸಮಿ ಅವರನ್ನು ತಂಡದಿಂದ ಕೈಬಿಟ್ಟಿರುವುದು, ಒಂದು ರೀತಿಯಲ್ಲಿ ಸೋಲನ್ನು ಒಪ್ಪಿಕೊಂಡಂತೆ” ಎಂದು ಬರೆದಿದ್ದಾರೆ.


    ಮತ್ತೊಂದೆಡೆ, ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಭಾರತ ತಂಡದ ಆಯ್ಕೆಯ ತರ್ಕವನ್ನು ಪ್ರಶ್ನಿಸಿದ್ದಾರೆ. ಸರಣಿಯು 1-1 ಸಮವಾಗಿದೆ, ಇಂತಹ ಸಂದರ್ಭದಲ್ಲಿ ಇಂತಹ ಬೌಲರ್ ಅನ್ನು ಕೈಬಿಟ್ಟಿದ್ದಾರೆ ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ.


    ಇದನ್ನೂ ಓದಿ: ಒಳಉಡುಪಿನಲ್ಲಿ ಓಡಾಡಿದ್ದನ್ನು ಆಕ್ಷೇಪಿಸಿದ ಸಹ ಪ್ರಯಾಣಿಕನ ಚಿನ್ನದ ಸರ ಕಸಿದ ಬಿಹಾರದ ಶಾಸಕ: ಕೇಸ್ ದಾಖಲು

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: