Rishabh Pant: ಸ್ವಲ್ಪ ಸಣ್ಣ ಆದರೆ ಆತ ಮಾಡೆಲ್ ಆಗಬಹುದು, ರಿಷಭ್ ಪಂತ್​ಗೆ ಸಲಹೆ ನೀಡಿದ ಪಾಕ್​ ಮಾಜಿ ಆಟಗಾರ

ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಪಾಕಿಸ್ತಾನ ತಂಡದ ಲೆಜೆಂಡರಿ, ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್ ಟೀಮ್ ಇಂಡಿಯಾದ ರೋಚಕ ಬ್ಯಾಟ್ಸ್ ಮನ್ ಮತ್ತು ಕೀಪರ್ ರಿಷಭ್ ಪಂತ್ ಅವರನ್ನು ಹಾಡಿ ಹೊಗಳಿದ್ದಾರೆ.

ರಿಷಬ್ ಪಂತ್

ರಿಷಬ್ ಪಂತ್

  • Share this:
ಇತ್ತೀಚಿಗೆ ನಡೆದ ಇಂಗ್ಲೆಂಡ್ (England) ವಿರುದ್ಧದ ಒನ್ ಡೇ ಕ್ರಿಕೆಟ್ ಪಂದ್ಯದಲ್ಲಿ (Cricket Match) ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಬ್ಬರು ತಮ್ಮ ಮಿಂಚಿನ ಪ್ರದರ್ಶನದ ಮೂಲಕ ಕಪ್ ಗೆದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ರಿಷಭ್ ಪಂತ್ (Rishabh Pant) ಮತ್ತು ಹಾರ್ದಿಕ್ ಪಾಂಡ್ಯ (Hardik Pandya ರನ್ ಮಳೆ ಸುರಿಸಿ ಪಂದ್ಯವನ್ನು ಗೆಲ್ಲಿಸಿದ್ದರು. ಭಾನುವಾರ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ 113 ಎಸೆತಗಳಲ್ಲಿ 16 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿ ಔಟಾಗದೆ 125 ರನ್ ಗಳಿಸಿ 260 ರನ್‌ಗಳ ಗುರಿಯನ್ನು ಕೇವಲ ಎಂಟು ಓವರ್‌ಗಳು ಬಾಕಿ ಇರುವಾಗಲೇ ಬೆನ್ನಟ್ಟಲು ಸಹಾಯ ಮಾಡಿದರು.

ರಿಷಭ್ ಪಂತ್ ಅವರನ್ನು ಹಾದಿ ಹೊಗಳಿದ ಶೊಯೇಬ್‌ ಅಖ್ತರ್
ಈ ಬಗ್ಗೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಪಾಕಿಸ್ತಾನ ತಂಡದ ಲೆಜೆಂಡರಿ, ಮಾಜಿ ವೇಗದ ಬೌಲರ್ ಶೊಯೇಬ್ ಅಖ್ತರ್ ಟೀಮ್ ಇಂಡಿಯಾದ ರೋಚಕ ಬ್ಯಾಟ್ಸ್ ಮನ್ ಮತ್ತು ಕೀಪರ್ ರಿಷಭ್ ಪಂತ್ ಅವರನ್ನು ಹಾಡಿ ಹೊಗಳಿದ್ದಾರೆ.

ರಿಷಭ್ ಒಬ್ಬ ಭಯವಿಲ್ಲದ ಕ್ರಿಕೆಟ್ ಆಟಗಾರ, ಎದುರಾಳಿ ತಂಡವನ್ನು ಎದುರಿಸಲು ಅವರು ತಮ್ಮ ಬತ್ತಳಿಕೆಯಲ್ಲಿ ಹಲವು ಶಾಟ್ ಗಳನ್ನು ಇಟ್ಟುಕೊಂಡಿದ್ದಾರೆ. ಪಂತ್ ಏಕಾಂಗಿ ಹೋರಾಟ ಭಾರತಕ್ಕೆ ಸರಣಿ ಗೆಲ್ಲಲು ಕಾರಣವಾಯಿತು ಎಂದು ಅಖ್ತರ್ ಹೇಳಿದ್ದಾರೆ. "ರಿಷಭ್ ಪಂತ್ ನಿರ್ಭೀತ ಕ್ರಿಕೆಟಿಗ. ಅವರು ಕಟ್ ಶಾಟ್, ಪುಲ್ ಶಾಟ್, ರಿವರ್ಸ್ ಸ್ವೀಪ್, ಸ್ಲಾಗ್ ಸ್ವೀಪ್ ಮತ್ತು ಪ್ಯಾಡಲ್ ಸ್ವೀಪ್ ಹೊಂದಿದ್ದಾರೆ. ರಿಷಬ್ ಆಸ್ಟ್ರೇಲಿಯಾದಲ್ಲಿ (ಟೆಸ್ಟ್) ಪಂದ್ಯವನ್ನು ಗೆದ್ದ ನಂತರ ಇಂಗ್ಲೆಂಡ್‌ ವಿರುದ್ಧದ ಪಂದ್ಯ ಗೆಲುವಿಗೂ ಕಾರಣರಾದರು" ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

ಫಿಟ್ನೆಸ್ ಬಗ್ಗೆ ಪಂತ್ ಗೆ ಸಲಹೆ ನೀಡಿದ ಅಖ್ತರ್
ಆದಾಗ್ಯೂ, ಅಖ್ತರ್ ಫಿಟ್ನೆಸ್ ಬಗ್ಗೆ ಪಂತ್ ಗೆ ಸಲಹೆ ಕೂಡ ನೀಡಿದ್ದಾರೆ. ಮಾಜಿ ಹಿರಿಯ ಪಾಕಿಸ್ತಾನಿ ಆಟಗಾರ ಅಖ್ತರ್, ಪಂತ್ ಗೆ ಫಿಟ್ನೆಸ್ ಬಗ್ಗೆ ಗಮನಹರಿಸಲು ಮತ್ತು ಸ್ವಲ್ಪ ತೂಕವನ್ನು ಇಳಿಸುವಂತೆ ಒತ್ತಾಯಿಸಿದ್ದಾರೆ. ಆತನಿಗಿನ್ನೂ 24 ವರ್ಷ, ಸ್ವಲ್ಪ ತೂಕ ಕಳೆದುಕೊಂಡರೆ ಮಾಡೆಲ್ ಆಗಬಹುದು ಮತ್ತು ಕೋಟಿಗಟ್ಟಲೆ ಸಂಪಾದಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs WI: ಸಚಿನ್​ ಹೆಸರಿನಲ್ಲಿದ್ದ ದಾಖಲೆ ಮುರಿದ ಯುವ ಆಟಗಾರ! 2 ವರ್ಷ ಬಿಟ್ಕೊಂಡು ಬಂದ್ರೂ ಅದೇ ಖದರ್​​​

“ರಿಷಬ್ ಪಂತ್ ಸ್ವಲ್ಪ ಅಧಿಕ ತೂಕ ಹೊಂದಿದ್ದಾರೆ. ಅದನ್ನು ಆತ ನೋಡಿಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಭಾರತದ ಮಾರುಕಟ್ಟೆ ದೊಡ್ಡದು. ಸ್ವಲ್ಪ ತೂಕ ಇಳಿಸಿಕೊಂಡರೆ ಚೆಂದ ಕಾಣುತ್ತಾನೆ. ಮಾಡೆಲ್ ಕೂಡ ಆಗಬಹುದು, ಜಾಹೀರಾತುಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ, ಕೋಟಿ ಕೋಟಿ ಹಣ ಸಂಪಾದಿಸಬಹುದು ಎಂದು ಹೇಳಿದ್ದಾರೆ.

ಮ್ಯಾಚ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ರಿಷಭ್
ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿನಲ್ಲಿ ರಿಷಭ್ ಪಂತ್ ನಿರ್ಣಾಯಕ ಆಟವಾಡಿದ್ದರು. ಭಾನುವಾರ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಐದು ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಬ್ಯಾಟಿಂಗ್ ಮಾಡಿದ ನಂತರ, ಇಂಗ್ಲೆಂಡ್ ಕೇವಲ 259 ರನ್ ಗಳಿಸಲು ಸಾಧ್ಯವಾಯಿತು, ನಾಯಕ ಜೋಸ್ ಬಟ್ಲರ್ 60 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಇದನ್ನೂ ಓದಿ:  Virat Kohli: ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಹಾಕುವ ಒಂದು ಪೋಸ್ಟ್​ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಕೇಳಿದ್ರೆ ಶಾಕ್ ಆಗ್ತಿರಾ

260 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮೆನ್ ಇನ್ ಬ್ಲೂ ತಂಡವು ಗೆದ್ದಿತಾದರೂ, ಅಗ್ರ ಮೂರು ಆಟಗಾರರಾದ ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿದರು. ಇವರ ನಂತರ ಬಂದ ರಿಷಭ್ ಮ್ಯಾಚ್ ಗತಿಯನ್ನೇ ಬದಲಾಯಿಸಿ ಕಪ್ ಗೆಲ್ಲುವಲ್ಲಿ ಮುಖ್ಯ ಪಾತ್ರವಹಿಸಿದರು. ಇನ್ನೂ ಭಾರತೀಯ ಬೌಲರ್‌ಗಳಿಗೆ ಸಂಬಂಧಿಸಿದಂತೆ, ಹಾರ್ದಿಕ್ ಪಾಂಡ್ಯ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದರು. ಹಾರ್ದಿಕ್ 4 ವಿಕೆಟ್ ಪಡೆದುಕೊಳ್ಳುವ ಜೊತೆಗೆ ರನ್ ಮಳೆ ಸಹ ಸುರಿಸಿದರು.
Published by:Ashwini Prabhu
First published: