• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Bollywood Movie: ಬಾಲಿವುಡ್​ ಸಿನಿಮಾದಲ್ಲಿ ಪಾಕ್ ಆಟಗಾರ! ಬೇರೆ ಹೀರೋನೆ ಇಲ್ವಾ ಅಂದ್ರು ನೆಟ್ಟಿಗರು

Bollywood Movie: ಬಾಲಿವುಡ್​ ಸಿನಿಮಾದಲ್ಲಿ ಪಾಕ್ ಆಟಗಾರ! ಬೇರೆ ಹೀರೋನೆ ಇಲ್ವಾ ಅಂದ್ರು ನೆಟ್ಟಿಗರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Shoaib Akhtar: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಮ್ಮ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಇದೀಗ ಅವರು ಹೊಸ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

  • Share this:

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಅವರು ಕ್ರಿಕೆಟ್ ಮೈದಾನದ ಹೊರಗೂ ಅನೇಕ ವಿಷಯಗಳಲ್ಲಿ ಗಮನ ಸೆಳೆದಿದ್ದಾರೆ. ಪ್ರಸ್ತುತ, ಅವರು ಸಾಮಾನ್ಯವಾಗಿ ಕ್ರಿಕೆಟ್ (Cricket) ವಿದ್ಯಮಾನಗಳ ಕುರಿತು ಮಾತನಾಡುತ್ತಿರುತ್ತಾರೆ. ಇತರ ಕ್ರಿಕೆಟಿಗರಂತೆ ಶೋಯೆಬ್ ಅಖ್ತರ್ ಕೂಡ ಬಾಲಿವುಡ್ (Bollywood Movie) ಬಗ್ಗೆ ಆಸಕ್ತಿ ಹೊಂದಿದ್ದಾರೆ. ಈಗ 18 ವರ್ಷಗಳ ಹಿಂದೆ ಬಾಲಿವುಡ್ ಚಿತ್ರವೊಂದರಲ್ಲಿ ತನಗೆ ಪ್ರಮುಖ ಪಾತ್ರದ ಆಫರ್ ಬಂದಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಬಾಲಿವುಡ್ ಚಿತ್ರ ಗ್ಯಾಂಗ್‌ಸ್ಟರ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ನನಗೆ ಆಫರ್ ಬಂದಿತ್ತು ಎಂದು ಅಖ್ತರ್ ಹೇಳಿದ್ದಾರೆ.


ಬಾಲಿವುಡ್​ ಚಿತ್ರದಲ್ಲಿ ಅಖ್ತರ್:


ಹೌದು, ಅಖ್ತರ್​ ಅವರಿಗೆ ಬಾಲಿವುಡ್​ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ. 2005ರ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ ಸಿನಿಮಾ ‘ಗ್ಯಾಂಗ್‌ಸ್ಟರ್‌‘ ಗಾಗಿ ಅಖ್ತರ್ ಅವರನ್ನು ಸಂಪರ್ಕಿಸಲಾಗಿತ್ತಂತೆ. ಈ ಕುರಿತು ಮಾತನಾಡಿರುವ ಅವರು, ‘ನನ್ನನ್ನು ಬಾಲಿವುಡ್​ ಸಿನಿಮಾ ನಿರ್ದೇಶಕ ಮಹೇಶ್ ಭಟ್ ಸಂಪರ್ಕಿಸಿದ್ದರು. ಆದರೆ ಸಿನಿಮಾ ನಿರ್ಮಾಣ ತಂಡದೊಂದಿಗೆ ವಿವಾದ ಉಂಟಾಗಿ ಈ ಯೋಜನೆಯಿಂದ ದೂರ ಸರಿದಿದ್ದೆ‘ ಎಂದು ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅನೇಕ ಸಂದರ್ಭಗಳಲ್ಲಿ, ಅವರು ಭಾರತೀಯ ಆಟಗಾರರನ್ನು ಬೆಂಬಲಿಸುವುದನ್ನು ಸಹ ನೋಡಿದ್ದೇವೆ.


ಸದಾ ಸುದ್ದಿಯಲ್ಲಿರುವ ಆಟಗಾರ:


ಶೋಯೆಬ್ ಅಖ್ತರ್ ಹೆಸರು ಸದ್ಯ ಮತ್ತೊಂದು ಕಾರಣಕ್ಕೆ ಚರ್ಚೆಯಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಲವು ಬದಲಾವಣೆಗಳಾಗಿವೆ. ಇದರಲ್ಲಿ ನಾನು ಪಿಸಿಬಿ ಅಧ್ಯಕ್ಷನಾಗಲು ಬಯಸುತ್ತೇನೆ ಮತ್ತು ಪಾಕಿಸ್ತಾನಕ್ಕೆ ಸೂಪರ್‌ಸ್ಟಾರ್‌ಗಳನ್ನು ಸೃಷ್ಟಿಸಲು ಬಯಸುತ್ತೇನೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ನನ್ನ ದೇಶಕ್ಕೆ 50 ಸೂಪರ್‌ಸ್ಟಾರ್‌ಗಳನ್ನು ಸಿದ್ಧಪಡಿಸಲು ನಾನು ಬಯಸುತ್ತೇನೆ ಎಂದಿದ್ದರು.


ಇದನ್ನೂ ಓದಿ: IPL 2023: RCB ತಂಡಕ್ಕೆ ಬಿಗ್ ಶಾಕ್! ಲಂಕಾ ಸ್ಟಾರ್ ಆಟಗಾರ ಐಪಿಎಲ್​ನಿಂದ ಔಟ್​?


ಶೋಯೆಬ್ ವೃತ್ತಿ ಜೀವನ:


47 ವರ್ಷದ ಶೋಯೆಬ್ ಅಖ್ತರ್ 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅವರು 46 ಟೆಸ್ಟ್, 163 ODI ಮತ್ತು 15 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ನಲ್ಲಿ 178, ಏಕದಿನದಲ್ಲಿ 247 ಮತ್ತು ಟಿ20ಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 450ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.


ಭಾರತೀಯ ಆಟಗಾರರ ಪರ ನಿಂತಿದ್ದ ಅಖ್ತರ್​:


ಇನ್ನು, ಶೋಯೆಬ್​ ಅಖ್ತರ್​ ಅನೇಕ ಬಾರಿ ಭಾರತೀಯ ಆಟಗಾರರ ಪರ ಮಾತನಾಡಿದ್ದಾರೆ.  ವಿರಾಟ್ ಫಾರ್ಮ್​ ನಲ್ಲಿ ಇರದ ವೇಳೆ ಮಾಜಿ ಕ್ರಿಕೆಟಿಗರು ಠೀಕಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ್ದರು. ಅವರು, ‘ವಿರಾಟ್ ಕೊಹ್ಲಿ ಒಬ್ಬ ಅಪ್ರತಿಮ ಕ್ರಿಕೆಟಿಗ ಮತ್ತು ಅವರಿಗೆ ಕನಿಷ್ಠ ಗೌರವವನ್ನು ನೀಡಬೇಕು. ಹೀಗಾಗಿ ಅವರ ಕುರಿತು ಯಾರೂ ಸಹ ಟೀಕೆ ಮಾಡುವುದನ್ನು ನಿಲ್ಲಿಸಬೇಕಿದೆ‘ ಎಂದು ಹೇಳಿದ್ದರು.
ನಾವು ಅಭಿಪ್ರಾಯಗಳನ್ನು ಹೇಳುವ ಮುನ್ನ ಚಿಕ್ಕ ಮಕ್ಕಳು ತಮ್ಮನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಎಲ್ಲಾ ಹಿರಿಯ ಆಟಗಾರರು ನೆನಪಿನಲ್ಲಿಟ್ಟುಕೊಳ್ಳಬೇಕು. ಒಬ್ಬ ಪಾಕಿಸ್ತಾನಿಯಾಗಿ ಹೇಳುವುದಾದರೆ, ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ‘ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು.


ಕೊಹ್ಲಿ ಮಾತ್ರವಲ್ಲದೇ ಧೋನಿ ಕುರಿತೂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರಂತೆ, ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ಶೋಯೆಬ್ ಅಖ್ತರ್, ಅದೊಂದು ಯುಗ ಎಂದು ಬಣ್ಣಿಸಿದ್ದಾರೆ. ರಾವಲ್ಪಿಂಡಿ ಎಕ್ಸ್​ಪ್ರೆಸ್ ಧೋನಿಯನ್ನು ಕ್ರಿಕೆಟ್​ನ ಒಂದು ಯುಗದ ಹೆಸರು ಎಂದು ವರ್ಣಿಸಿದ್ದಾರೆ. ಪಾಕ್ ಮಾಜಿ ವೇಗಿಯ ಈ ಉತ್ತರಕ್ಕೆ ತಲಾ ಫ್ಯಾನ್ಸ್​ ಫುಲ್ ಫಿದಾ ಆಗಿದ್ದರು.

Published by:shrikrishna bhat
First published: