• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Shikhar Dhawan: ಟೆಸ್ಟ್​ ಕ್ರಿಕೆಟ್​ನಿಂದ ಧವನ್​ ನಿವೃತ್ತಿ? ಮಹತ್ವದ ಸುಳಿವು ನೀಡಿದ ಗಬ್ಬರ್ ಸಿಂಗ್​

Shikhar Dhawan: ಟೆಸ್ಟ್​ ಕ್ರಿಕೆಟ್​ನಿಂದ ಧವನ್​ ನಿವೃತ್ತಿ? ಮಹತ್ವದ ಸುಳಿವು ನೀಡಿದ ಗಬ್ಬರ್ ಸಿಂಗ್​

ಶಿಖರ್ ಧವನ್

ಶಿಖರ್ ಧವನ್

Shikhar Dhawan: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಮುನ್ನಡೆ ಸಾದಿಸಿದೆ. ಅದರೆ ಈ ಸರಣಿಯಲ್ಲಿ ಸಂಪೂರ್ಣ ತಂಡದ ಬದಲಿಗೆ ಕೆಲ ಆಟಗಾರರು ಮಿಂಚುತ್ತಿದ್ದಾರೆ.

  • Share this:

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡ ಆಸ್ಟ್ರೇಲಿಯಾ (IND vs AUS) ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ಸರಣಿಯಲ್ಲಿ ಟೀಂ ಇಂಡಿಯಾ (Team India) 2-0 ಮುನ್ನಡೆ ಕಾಯ್ದುಕೊಂಡಿದೆ. ಆದರೆ ತಂಡದ ಆಯ್ಕೆ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಫಾರ್ಮ್‌ನಲ್ಲಿ ಇಲ್ಲದ ಆರಂಭಿಕ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul) ದೊಡ್ಡ ವಿಷಯವಾಗಿ ಮಾರ್ಪಟ್ಟಿದ್ದಾರೆ. ಇದರ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಆಕಾಶ್ ಚೋಪ್ರಾ ನಡುವೆ ಸಾಕಷ್ಟು ಚರ್ಚೆಗಳು ನಡೆದಿವೆ. ರಾಹುಲ್ ಬದಲಿಗೆ ಇತರ ಕೆಲವು ಆಟಗಾರರ ದಾಖಲೆಗಳನ್ನು ಪ್ರಸಾದ್ ಮುಂದಿಟ್ಟಿದ್ದರು. ಹೀಗಾಗಿ ಖಲೆದ ಕೆಲ ದಿನಗಳ ಹಿಂದೆ ಈ ವಿಚಾರ ಸಾಕಷ್ಟು ಮುನ್ನಲೆಗೆ ಬಂದಿತ್ತು. ಇದರ ನಡುವೆ ಶಿಖರ್​ ಧವನ್​ (Shikhar Dhawan) ವಿಚಾರವೂ ನಿಧಾನವಾಗಿ ಕೇಳಿಬರುತ್ತಿದ್ದು, ಧವನ್​ ಟೆಸ್ಟ್​ ಕ್ರಿಕೆಟ್​ಗೆ ಗುಡ್​ಬೈ ಹೇಳ್ತಾರಾ ಎಂಬ ವಿಚಾರ ಹರಿದಾಡುತ್ತಿದೆ.


ನಿವೃತ್ತಿ ಕುರಿತು ಸೂಚನೆ ನೀಡಿದ ಧವನ್:


ಹೌದು, ಧವನ್ ಕಳೆದ ಕೆಲ ವರ್ಷದಿಂದ ತಂಡದಲ್ಲಿ ಸಕ್ರೀಯರಾಗಿಲ್ಲ. ಇದರ ಕುರಿತು ಮಾತನಾಡಿರುವ ಅವರು, 'ರಣಜಿ ಟ್ರೋಫಿ ಆಡದಿದ್ದಕ್ಕಾಗಿ ಟೀಕೆಗಳ ಬಗ್ಗೆ ನಾನು ಯೋಚಿಸುವುದಿಲ್ಲ. ನನ್ನ ಟೆಸ್ಟ್ ವೃತ್ತಿಜೀವನ ನನಗೆ ತಿಳಿದಿದೆ. ಕಳೆದ 2-3 ವರ್ಷಗಳಿಂದ ನಾನು ಟೆಸ್ಟ್ ತಂಡದ ಭಾಗವಾಗಿಲ್ಲ. ಇದರಲ್ಲಿ ವಯಸ್ಸಿನ ಅಂಶವೂ ಇದೆ. ಪ್ರತಿಯೊಬ್ಬ ಕ್ರಿಕೆಟಿಗನ ಜೀವನವೂ ವಿಭಿನ್ನವಾಗಿರುತ್ತದೆ. ಯುವಕರಿಗೆ ಅವಕಾಶ ನೀಡಲಾಗುವುದು, ನನಗಲ್ಲ.


ಅವರು ಆಡುವುದಿಲ್ಲ ಎಂದು ನನಗೆ ಗೊತ್ತಿರುವಾಗ ರೆಡ್ ಬಾಲ್ ಕ್ರಿಕೆಟ್ ಏಕೆ ಆಡಬೇಕು? ನಾನು ನನ್ನ ದೇಹಕ್ಕೆ ವಿಶ್ರಾಂತಿ ನೀಡುತ್ತೇನೆ. ನಾನು ದೇಶೀಯ ODI ಮತ್ತು T20 ಕ್ರಿಕೆಟ್‌ಗಳನ್ನು ಆಡಿದ್ದೇನೆ, ನಾನು ಟೆಸ್ಟ್‌ಗಳನ್ನು ಆಡುವುದಿಲ್ಲ ಎಂದು ತಿಳಿದಾಗ ನಾನು ರಣಜಿ ಟ್ರೋಫಿಯನ್ನು ಏಕೆ ಆಡಬೇಕು?‘ ಎಂದು ಹೇಳಿದ್ದಾರೆ. ಈ ಮೂಲಕ ಅವರು ಸದ್ಯದಲ್ಲಿಯೇ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​


ಶಿಖರ್ ಧವನ್ ಅವರು ದೀರ್ಘಕಾಲದಿಂದ ಟೆಸ್ಟ್ ತಂಡದ ಭಾಗವಾಗಿಲ್ಲ. ಧವನ್ ಟೆಸ್ಟ್ ಸರಾಸರಿ 40.6 ಇದ್ದು, ಇದು ರಾಹುಲ್‌ಗಿಂತ ಉತ್ತಮವಾಗಿದೆ. ಅವರು 2013ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲಿ, ಧವನ್ ಆಸ್ಟ್ರೇಲಿಯಾ ವಿರುದ್ಧ 174 ಎಸೆತಗಳಲ್ಲಿ 187 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದರು. ಅವರು 4 ವರ್ಷಗಳ ಕಾಲ ಟೆಸ್ಟ್ ತಂಡದ ಭಾಗವಾಗಿದ್ದರು. 2018ರಲ್ಲಿ ಭಾರತ ತಂಡದಲ್ಲಿ ಧವನ್ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು.


ಉಪನಾಯಕ ಬೇಡ ಎಂದ ರವಿ ಶಾಸ್ತ್ರಿ:


ಇದರ ನಡುವೆ ಕೆಎಲ್ ರಾಹುಲ್​ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆಸೀಸ್​ ವಿರುದ್ಧದ 3 ಮತ್ತು 4ನೇ ಟೆಸ್ಟ್​ಗೆ ಭಾರತ ತಂಡ ಪ್ರಕಟವಾಗಿದೆ. ಆದರೆ ಈ ತಂಡದಲ್ಲಿ ರಾಹುಲ್​ ಸ್ಥಾನ ಪಡೆದಿದ್ದರೂ ಸಹ ಉಪನಾಯಕನ ಪಟ್ಟದಿಮದ ಕೆಳಗಿಳಿದಿದ್ದಾರೆ. ಹೀಗಾಗಿ ಯಾರು ಉಪನಾಯಕರಾಗ್ತಾರೆ ಎಂಬ ಪ್ರಶ್ನೆ ಕಾಡುತ್ತಿದೆ.




ಈ ಕುರಿತು ಭಾರತದ ಮಾಜಿ ಕೋಚ್​ ರವಿ ಶಾಸ್ತ್ರಿ ಮಾತನಾಡಿದ್ದು, 'ತಂಡದ ಆಡಳಿತವು ಉಪನಾಯಕನನ್ನು ನಿರ್ಧರಿಸುತ್ತದೆ. ಅವರಿಗೆ ರಾಹುಲ್ ರೂಪ ಗೊತ್ತಿದೆ ಮತ್ತು ಅವರ ಮಾನಸಿಕ ಸ್ಥಿತಿಯ ಅರಿವಿದೆ. ಶುಭಮನ್ ಗಿಲ್ ಅವರಂತಹ ವ್ಯಕ್ತಿಯನ್ನು ಹೇಗೆ ನೋಡಬೇಕು ಎಂಬುದು ಅವರಿಗೆ ತಿಳಿದಿದೆ. ನಾನು ಒಂದೇ ಒಂದು ವಿಷಯವನ್ನು ನಂಬುತ್ತೇನೆ, ಭಾರತಕ್ಕೆ ಎಂದಿಗೂ ಉಪನಾಯಕನನ್ನು ಅವಶ್ಯಕತೆ ಇಲ್ಲ. ಬದಲಾಗಿ ಶ್ರೇಷ್ಠ ಆಟಗಾರರ XI ಮೇಲೆ ಗಮನ ಹರಿಸಬೇಕು. ನಾಯಕನು ಮೈದಾನವನ್ನು ತೊರೆಯಬೇಕಾದರೆ, ಆ ಸಮಯದಲ್ಲಿ ತಂಡವನ್ನು ನಿಭಾಯಿಸಬಲ್ಲ ಆಟಗಾರನನ್ನು ನೀವು ಆಯ್ಕೆ ಮಾಡುತ್ತೀರಿ.

Published by:shrikrishna bhat
First published: